ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ, ಚಾಲಕ ಸಾವು

Shimoga Road Accident Auto Driver died

ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಮೃತ ವ್ಯಕ್ತಿಯನ್ನು ಅಣ್ಣಾನಗರದ ನಿವಾಸಿ ಆಲ್ತಾಪ್​ ಪಾಷಾ 30 ಎಂದು ಗುರುತಿಸಲಾಗಿದೆ. ಮಲೆನಾಡು APMCಗಳಲ್ಲಿ ಅಡಿಕೆ ವಹಿವಾಟು ಜೋರು! ಶಿವಮೊಗ್ಗ, ಸಾಗರ, ಯಲ್ಲಾಪುರ, ಶಿರಸಿ! ಎಲ್ಲೆಲ್ಲಿ ಎಷ್ಟಾಗಿದೆ ಅಡಿಕೆ ದರ ಕಳೆದ ರಾತ್ರಿ ಆಲ್ತಾಪ್​ ಪಾಷಾ ಆಟೋದಲ್ಲಿ ಗೋಪಿ ವೃತ್ತದಿಂದ 4 ಮಂದಿ ಪ್ರಯಾಣಿಕರನ್ನು  ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಾವೇರಿಯಿಂದ ಧರ್ಮಸ್ಥಳಕ್ಕೆ … Read more

ಸಂಚಾರ ದಂಡ ಪಾವತಿಗೆ ಗೋಲ್ಡನ್ ಚಾನ್ಸ್​​​ : ಬಾಕಿ ಉಳಿಸಿಕೊಂಡವರಿಗೆ ಶೇ.50 ರಿಯಾಯಿತಿ

Traffic Fines Lok Adalat to Clear E Challans 

ಶಿವಮೊಗ್ಗ : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ದಂಡ ಪಾವತಿಗೆ ರಾಜ್ಯ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದ್ದು, ಈ ಪ್ರಕರಣಗಳನ್ನು ಡಿಸೆಂಬರ್ 13 ರಂದು ನಡೆಯಲಿರುವ ಲೋಕ್ ಅದಾಲತ್ – ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ತಿಳಿಸಿದ್ದಾರೆ. ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿ, ದಂಡ … Read more

Shivamogga Traffic Police | ಶಿವಮೊಗ್ಗದಲ್ಲಿಯು ಶುರುವಾಯ್ತು ಬೆಂಗಳೂರು, ಹುಬ್ಬಳ್ಳಿ ಕ್ರೇಜ್! 10 ಸಾವಿರ ಫೈನ್​ಗೆ ವಿಡಿಯೋ ವೈರಲ್​

Shivamogga Feb 12, 2024 |  ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಹ ಇದೀಗ ಬೆಂಗಳೂರು ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಹಾಗೆ ಸಂಚಾರಿ ನಿಯಮದ ಬಗ್ಗೆ ಟ್ರೋಲ್ ಮಾದರಿಯ ವಿಡಿಯೋಗಳನ್ನು ಹರಿಬಿಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ನಗರದ ರಸ್ತೆಯೊಂದರಲ್ಲಿ ವೀಲ್ಹೀಂಗ್​ ಮಾಡಿದ ವಿಡಿಯೋದಕ್ಕೆ ಫೈನ್ ವಿಧಿಸಿದ ದೃಶ್ಯವನ್ನು ಶಿವಮೊಗ್ಗ ಸಂಚಾರಿ ಪೊಲೀಸರು ಹಂಚಿಕೊಂಡಿದ್ದಾರೆ.  ಶಿವಮೊಗ್ಗ ಟ್ರಾಫಿಕ್ ಪೊಲೀಸರ ವಿಡಿಯೋ ವೈರಲ್ ಆಗುತ್ತಿದ್ದು, ಮಾಧ್ಯಮಗಳಿಗೆ ರವಾನೆಯಾಗಿರುವ ವಿಡಿಯೋದಲ್ಲಿ ಮೊದಲು ಯುವಕನೊಬ್ಬ ಬೈಲ್ ವಿಲ್ಹೀಂಗ್ ಮಾಡುತ್ತಿರುವ ದೃಶ್ಯ ರೆಕಾರ್ಡ್​ … Read more

Shimoga Traffic Police Fine Check | ಶಿವಮೊಗ್ಗ ಟ್ರಾಫಿಕ್ ಪೊಲೀಸರ ರೆಕಾರ್ಡ್​ ಬ್ರೇಕ್​ |ಹಾಕಿದ್ರು 38,500 ರೂಪಾಯಿ ಫೈನ್

Shimoga Traffic Police Fine Check |  ಶಿವಮೊಗ್ಗ ಟ್ರಾಫಿಕ್ ಪೊಲೀಸರ ರೆಕಾರ್ಡ್​ ಬ್ರೇಕ್​ |ಹಾಕಿದ್ರು 38,500 ರೂಪಾಯಿ ಫೈನ್

SHIVAMOGGA  |  Jan 25, 2024  |  shimoga traffic police fine check  ಬೆಂಗಳೂರು ಟ್ರಾಫಿಕ್ ಪೊಲೀಸ್ ಸ್ಟೈಲ್​ ನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಹ ಇತ್ತೀಚೆಗೆ ಮೀಟರ್ ಲೆಕ್ಕದಲ್ಲಿ ಫೈನ್ ಚೀಟಿ ಹರಿಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಪೀಕ್ ಟೈಂನಲ್ಲಿ ಆಗುವ ಟ್ರಾಫಿಕ್ ಕ್ಲಿಯರ್ ಮಾಡಲು ಯಾರೊಬ್ಬರು ಇರುವುದಿಲ್ಲ ಎನ್ನುವ ಆರೋಪದ ನಡುವೆಯು ಸಂಚಾರ ನಿಯಮ ಉಲ್ಲಂಘನೆಯ ವಿಚಾರದಲ್ಲಿ ಕಠಿಣವಾಗಿ ದಂಡ ವಿಧಿಸುತ್ತಿದ್ದಾರೆ.  ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ದ್ವಿಚಕ್ರವಾಹನವೊಂದಕ್ಕೆ ಒಂದು ಮಾರು ಉದ್ದದ ದಂಡದ … Read more

ಪೊಲೀಸ್​ಗೆ ಫೋಟೋ ಕೊಟ್ಟ ಪ್ರಯಾಣಿಕ! ಬಸ್​ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್​

SHIVAMOGGA  |  Dec 25, 2023  |  ಫೋಟೋ ನೋಡಿ ಫೈನ್​ ಹಾಕುವ ಪ್ರಕ್ರಿಯೆ ಶಿವಮೊಗ್ಗದಲ್ಲಿಯು ಜೋರಾಗುತ್ತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಸರ್ಕಲ್​ಗಳ ಕ್ಯಾಮಾರಗಳು ಬೆನ್ನ ಹಿಂದಿನಿಂದಲೇ ಫೋಟೋ ತೆಗೆದು ಇಂತಿಂಥ ರೂಲ್ಸ್ ಉಲ್ಲಂಘನೆ ಆಗಿದೆ ಅಂತಾ ನೋಟಿಸ್ ಕಳಿಸ್ತಿದೆ.. ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಲೋಕಲ್ಸ್​ ಸೋಶಿಯಲ್​ ಮೀಡಿಯಾ ಮೂಲಕ ಕಳಿಸುವ ಫೋಟೋಗಳನ್ನ ಆಧರಿಸಿಯು ಫೈನ್​ ಚೀಟಿ ಹರಿಯುತ್ತಿದ್ದಾರೆ.  ಇದಕ್ಕೆ ಸಾಕ್ಷಿ ಎಂಬಂತೆ  ಶಿವಮೊಗ್ಗ ಟ್ರಾಫಿಕ್ ಪೊಲೀಸರು 9(c). Driving Dangerously (Using Mobile … Read more

ಸಿಟಿ ರೌಂಡ್ಸ್​ ಜೊತೆ ಸರ್ಕಲ್​ನಲ್ಲಿ ಎಸ್​ಪಿ ಕಾರ್ಯಾಚರಣೆ ! ನೋಡುತ್ತಾ ನಿಂತ ಜನ!

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS    ಕೆಲದಿನಗಳಿಂದ ಹಾಫ್ ಹೆಲ್ಮೆಟ್ ವಿರುದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಅಭಿಯಾನ ನಡೆಸ್ತಿದ್ದು, ಹಾಫ್ ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡುವವರಿಗೆ ಎಚ್ಚರಿಕೆ ನೀಡುತ್ತಿತ್ತು ಅಲ್ಲದೆ ಹಾಫ್ ಹೆಲ್ಮೆಟ್​ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ರು. ನಿನ್ನೆ ಅಂದರೆ,  ದಿನಾಂಕಃ 18-08-2023  ರಂದು ಸ್ವತಃ ಶಿವಮೊಗ್ಗ ಎಸ್​ಪಿ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ರವರು ಹಾಫ್ ಹೆಲ್ಮೆಟ್ ವಿಚಾರವಾಗಿ ಫೀಲ್ಡ್​ಗೆ ಇಳಿದಿದ್ದರು.   ಶಿವಮೊಗ್ಗ ನಗರದ ಪ್ರಮುಖ … Read more

ಹಾಫ್ ಹೆಲ್ಮೆಟ್ ವಿರುದ್ಧದ ಅಭಿಯಾನದ ನಡುವೆ ಸಿಸಿ ಕ್ಯಾಮರಾದಲ್ಲಿ ದಾಖಲಾಯ್ತು ಹೆಲ್ಮೆಟ್ ಕಳ್ಳತನದ ದೃಶ್ಯ! ಶಿವಮೊಗ್ಗದಲ್ಲಿ ಇದೇನಿದು?

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS ಶಿವಮೊಗ್ಗ ಪೊಲೀಸರು ಹಾಫ್ ಹೆಲ್ಮೆಟ್​ ನ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಕಾಕತಾಳೀಯ ಎಂಬಂತೆ ಶಿವಮೊಗ್ಗ ಸಿಟಿಯಲ್ಲಿ ಹೆಲ್ಮೆಟ್ ಕಳ್ಳತನದ ಬಗ್ಗೆಯು ವರದಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿ ಕ್ಯಾಮರಾವೊಂದರಲ್ಲಿ ಹೆಲ್ಮೆಟ್ ಕಳ್ಳತನದ ಘಟನೆ ಸೆರೆಯಾಗಿದೆ.    ಶಿವಮೊಗ್ಗದ ದುರ್ಗಿಗುಡಿಯ 2 ನೇ ಪ್ಯಾರಲಲ್​ ರಸ್ತೆಯಲ್ಲಿ ಸಿಗುವ ಆಸ್ಪತ್ರೆಯೊಂದರ ಮುಂಭಾಗದಲ್ಲಿ ನಡೆದ ಘಟನೆ ಇದಾಗಿದ್ದು, ಇಲ್ಲಿ ಪಾರ್ಕ್​ ಮಾಡಿದ್ದ ಬೈಕ್​ ಸವಾರರೊಬ್ಬರ ಹೆಲ್ಮೆಟ್​ನ್ನ … Read more

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS   ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಮಳೆಯಲ್ಲಿಯು ಸಂಚಾರ ನಿಯಮ ಪಾಲನೆಗೆ ಸಂಬಂಧಿಸಿದಂತೆ ಅಭಿಯಾನ ಕೈಗೊಂಡಿದ್ದಾರೆ. ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಹೆಲ್ಮೆಟ್​ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಐಎಸ್​ಐ ಮಾರ್ಕ್​ ಇಲ್ಲದ ಹೆಲ್ಮೆಟ್ ಹಾಗೂ ಹಾಫ್ ಹೆಲ್ಮೆಟ್​ಗಳನ್ನು ಹಾಕಿಕೊಂಡು ಬೈಕ್​ನಲ್ಲಿ ಸಂಚರಿಸುವವರನ್ನ ತಡೆದು ಹೆಲ್ಮೆಟ್​ಗಳನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುತ್ತಿದ್ದಾರೆ.    ಇತ್ತೀಚೆಗೆ ಶಿವಮೊಗ್ಗದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ. ಆತ ಹಾಕಿದ್ದ ಹಾಫ್ ಹೆಲ್ಮೆಟ್​ … Read more

ಶಿವಮೊಗ್ಗದಲ್ಲಿ ಒಂದೇ ದಿನ 99 ವಾಹನಗಳು ಸೀಜ್! 99 ಕೇಸ್​ ದಾಖಲು! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS ಶಿವಮೊಗ್ಗ ಸಂಚಾರಿ ವೃತ್ತಕ್ಕೆ ಸರ್ಕಲ್​ ಇನ್​ಸ್ಪೆಕ್ಟರ್ ಸಂತೋಷ್​ ಕುಮಾರ್ ವಾಪಸ್ ಆಗುತ್ತಿದ್ದಂತೆ ಸಾಲು ಸಾಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ಧಾರೆ. ಇದಕ್ಕೆ ಪೂರಕವಾಗಿ ನಿನ್ನೆ  ಶಿವಮೊಗ್ಗ ನಗರದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್  (Shrill Horns) ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.  ಈ ಕಾರ್ಯಾಚರಣೆಯಲ್ಲಿ Shrill Horns ಗಳನ್ನು ಅಳವಡಿಸಿದ್ದ ಒಟ್ಟು 39 ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರು / ಮಾಲೀಕರ ವಿರುದ್ಧ … Read more

ಹಾವಳಿ ಕೊಟ್ರೆ ಜೈಲು ಗ್ಯಾರಂಟಿ! ಶಿವಮೊಗ್ಗ ಸಿಟಿ ಮೇಲಿದೆ ಪೊಲೀಸರ ಡ್ರೋಣ್​ ಕಣ್ಣು! ಯಾಮಾರಿದ್ರೆ ಖತಂ! ಏನಿದು ಗೊತ್ತಾ ವ್ಯವಸ್ಥೆ

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ, ಪುಂಡ ಪೋಕರಿಗಳ ಮೇಲೆ ಡ್ರೋಣ್​ ಕಣ್ಣನ್ನ ನೆಟ್ಟಿದೆ. ಈ ಹಿಂದೆ ಈ ಮಲೆನಾಡು ಟುಡೆ ಸುದ್ದಿ ಮಾಡಿತ್ತು. ಇದೀಗ ಪೊಲೀಸ್ ಇಲಾಖೆ ಡ್ರೋಣ್ ಮೂಲಕ ನೈಟ್ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು, ಹೊತ್ತಲ್ಲದ ಹೊತ್ತಲ್ಲಿ, ಎಲ್ಲೆಂದರಲ್ಲಿ ನ್ಯೂಸೆನ್ಸ್​ ಕ್ರಿಯೆಟ್ ಮಾಡುವ ವ್ಯಕ್ತಿಗಳನ್ನ  ಡ್ರೋಣ್​ ತನ್ನ ಕ್ಯಾಮರಾದ ಮೂಲಕ ಸೆರೆಹಿಡಿದು ಪೊಲೀಸರಿಗೆ ನೀಡುತ್ತಿದೆ. ಕ್ಯಾಮರಾ ನೀಡುವ ಚಿತ್ರಗಳ ಆಧಾರದ ಮೇಲೆ ಪೊಲೀಸರು … Read more