ಅಲಸಂಡೆ ಬಳ್ಳಿ ತಿಂದು 35 ಕುರಿಗಳ ಸಾವು!/ ಅಚ್ಚರಿ ಮೂಡಿಸಿದ ಘಟನೆ

ಎಳೆ ಅಲಸಂದೆ ಬಳ್ಳಿ ತಿಂದ ಪರಿಣಾಮ 35 ಕುರಿಗಳು (sheep) ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere )ತಾಲೂಕಿನ ಮಾಯಕೊಂಡ (Mayakonda) ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದಲ್ಲಿ ಬೆಳೆದಿದ್ದ ಎಳೆ ಅಲಸಂಡೆ ಬಳ್ಳಿಯನ್ನು ಕುರಿಗಳು ತಿಂದಿವೆ. ಇದ್ದಕ್ಕಿದ್ದಂತೆ ಒಂದಾದರೊಂದಂತೆ ಸಾವನ್ನಪ್ಪಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪರುಶುರಾಂಪುರ ಗ್ರಾಮದ ನಿವಾಸಿ ಮಂಜಪ್ಪ, ಶಿವಣ್ಣ, ಕರಿಯಪ್ಪ ಚಿದಾನಂದ, ಈರಣ್ಣ ಎಂಬುವರು ಕುರಿಗಳನ್ನು ಕಳೆದು ಕೊಂಡವರಾಗಿದ್ದಾರೆ. 35 ಕುರಿಗಳು ಸಾವನ್ನಪ್ಪಿದ್ದು, ಇನ್ನು ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥ ಗೊಂಡಿವೆ. … Read more