ನಗರ ಸಮೀಪ, ಸೋಮವಾರಪೇಟೆಯಲ್ಲಿ, ಬೈಕ್ ಸಮೇತ ಹಿನ್ನೀರಿಗೆ ಬಿದ್ದ ಸವಾರ ಸಾವು!

ಹೊಸನಗರದ ಅಡಿಕೆ ತೋಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ Hosanagara Tragedy One Dead, Another Injured by Electrocution in Areca Plantation

Shimoga | ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಸೋಮವಾರಪೇಟೆ ಎಂಬಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶನಿವಾರದ ದಿನ ಈ ಘಟನೆ ಸಂಭವಿಸಿದೆ. ಸಂಪೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸ್ತಿದ್ದ 61 ವರ್ಷದ ಗಣೇಶ್ ಮೃತ ದುರ್ದೈವಿ.ಇವರು ಕೆಲವು ತಿಂಗಳುಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಮೃತ ಗಣೇಶ್ ಅವರು ಶನಿವಾರ ಬೆಳಿಗ್ಗೆ ಅರಮನೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ … Read more

ಸಿಗಂದೂರು ಬೆನ್ನಲ್ಲೆ ಹಸಿರುಮಕ್ಕಿಯಲ್ಲಿಯು ಸಿಕ್ತು ಸಾರ್ವಜನಿಕರಿಗೆ ಒಳ್ಳೆ ಸುದ್ದಿ!

KARNATAKA NEWS/ ONLINE / Malenadu today/ Jul 10, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹಸಿರುಮಕ್ಕಿಯಲ್ಲಿ,  ಲಾಂಚ್ ಓಡಾಟ (Hasirumakki launch)  ಮತ್ತೆ  ಆರಂಭವಾಗಿದೆ.  ಮಳೆಯಿಲ್ಲದೆ, ಹಿನ್ನೀರಿನ ಪ್ರಮಾಣ ತಗ್ಗಿತ್ತು. ಈ ಹಿನ್ನೆಲೆಯಲ್ಲಿ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಶರಾವತಿಯಲ್ಲಿ ಹಿನ್ನೀರು ಮೇಲಕ್ಕೆ ಬಂದಿದೆ. ಹೀಗಾಗಿ ಲಾಂಚ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.  ಕಳೆದ ಶುಕ್ರವಾರ ಸಿಗಂದೂರನ್ನು ಸಂಪರ್ಕಿಸುವ ಲಾಂಚ್ ಸಂಚಾರದಲ್ಲಿ ವಾಹನ ಸಾಗಾಟಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇವತ್ತಿನಿಂದಲೇ … Read more

ಮುಪ್ಪಾನೆ ಆಯ್ತು ಈಗ ಹಸಿರುಮಕ್ಕಿ ಸರದಿ! ಲಾಂಚ್​ ಸ್ಥಗಿತ ! ಕೊಲ್ಲೂರು ಮಾರ್ಗ ಬಂದ್!

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS ಸಾಗರ/ ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿನಲ್ಲಿ ಸಂಚರಿಸುತ್ತಿದ್ದ ಮುಪ್ಪಾನೆ ಲಾಂಚ್ ಸೇವೆ ಸ್ಥಗಿತಗೊಂಡಿತ್ತು. ನೀರಿಲ್ಲದೇ ಇರುವುದು ಇದಕ್ಕೆ ಕಾರಣವಾಗಿತ್ತು. ಇದೀಗ ಇದೇ ಕಾರಣಕ್ಕೆ  ಹಸಿರುಮಕ್ಕಿ ಲಾಂಚಿನ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ತೀರ್ಮಾನಿಸಿದೆ.ಇದರಿಂದಾಗಿ, ಮಳೆಗಾಲ ಆರಂಭದವರೆಗೂ ಲಾಂಚ್​ ಈ ಭಾಗದಿಂದ ಆಭಾಗಕ್ಕೆ  ಓಡಾಡುವುದಿಲ್ಲ.  ಹಸಿರು ಮಕ್ಕಿ ಲಾಂಚ್​ ನಿಂದಾಗಿ ಕೊಲ್ಲೂರಿಗೆ ಹೋಗುವುದಕ್ಕೂ ಕೂಡ ಅನುಕೂಲವಾಗುತ್ತಿತ್ತು. … Read more

ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೆ ಬಸ್​ಗಳ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಹುಲಿಕಲ್ ಘಾಟಿ ಬಂದ್ ಆಗಿರೋದು. ಹೊಸನಗರ ತಾಲ್ಲೂಕಿನಲ್ಲಿ, ಕರಾವಳಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಿಗುವ ಕೈಮರ, ಕೌರಿಬೈಲು, ಯಡೂರು, ಮಾಸ್ತಿಕಟ್ಟೆಯ ಜನರು ಈ ಭಾಗದಲ್ಲಿ ಓಡಾಡುವ ಬಸ್​ಗಳನ್ನೆ ಆದರಿಸಿದ್ದಾರೆ. ಆದರೆ ರಸ್ತೆ ದುರಸ್ತಿಗಾಗಿ ಬಾಳೆಬರೆ ಘಾಟಿ ಬಂದ್ ಆಗಿದೆ. ಹೀಗಾಗಿ ಕರಾವಳಿಗೆ ಹೋಗುವ ಬಸ್​ಗಳು ಕೊಲ್ಲೂರು ಘಾಟಿ ಮೇಲೆ ಘಟ್ಟದ ಕೆಳಕ್ಕೆ ಸಂಚರಿಸುತ್ತಿವೆ. ಆದರೆ, ದಿನಕ್ಕೆ ನಾಲ್ಕು ಬಸ್​ಗಳಷ್ಟೆ … Read more

800 ವರ್ಷಗಳ ಹಿಂದಿನ ದೇಗುಲದ ಆವರಣದಲ್ಲಿ ನಿಧಿಗಾಗಿ ಹುಡುಕಾಟ

ನಿಧಿಗೋಸ್ಕರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ  ಕುಂಟೆಗೆ ಗ್ರಾಮದಲ್ಲಿ ದೇವಾಲಯದ ಆವರಣದಲ್ಲಿ  ಅಗೆಯಲಾಗಿದೆ.  ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಇದಾಗಿದೆ. ಈ ದೇವಾಲಯದ ಆವರಣದಲ್ಲಿ ಆಗದು ನಿಧಿ ಶೋಧ ಮಾಡಲಾಗಿದೆ. ದೇಗುಲದ ಕಲ್ಲುಗಳನ್ನು ಕಿತ್ತು ಹಾಕಲಾಗಿದ್ದು, ಸ್ಥಳದಲ್ಲಿ ದೊಡ್ಡ ಹೊಂಡ ಮಾಡಲಾಗಿದೆ.  800 ವರ್ಷ ಹಳೆಯ ದೇವಾಲಯದಲಲ್ಲಿ 6 ಅಡಿವರೆಗೂ ಆಳದ ಹೊಂಡ ತೋಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶವಾಗಿದ್ದರಿಂದ ಇಲ್ಲಿ ನಡೆದ ಕೃತ್ಯದ ಮಾಹಿತಿ ಗೊತ್ತಾಗಿರಲಿಲ್ಲ ಘಟನೆ … Read more