ನಿಮ್ಮಲ್ಲಿ ಹಳೆಯ ಪುಸ್ತಕಗಳೇನಾದ್ರು ಇದೀಯಾ, ಹಾಗಾದ್ರೆ ಈ ಸುದ್ದಿ ಓದಿ
ಶಿವಮೊಗ್ಗ : ಮನೆಯಲ್ಲಿ ಹಳೆ ಪುಸ್ತಕಗಳಿವೆಯಾ? ಮಕ್ಕಳ ಓದಿಗೆ ಅನುಕೂಲವಾಗುವಂತಹ ಬುಕ್ಗಳು ನಿಮ್ಮ ಬಳಿ ಇವೆಯಾ? ಹಾಗಾದರೆ, ನೀವೊಂದು ಉಪಕಾರ ಮಾಡುವ ಅವಕಾಶವಿದೆ. ಶಿವಮೊಗ್ಗ ನಗರದ ಮಂಜುನಾಥ ಟಾಕೀಸ್ ಬಳಿ ಇರುವ ಸರ್ಕಾರಿ ಅನುದಾನಿತ ಜೆಪಿಎನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಂಥಾಲಯವನ್ನು ಪುನರ್ ಸ್ಥಾಪಿಸಲಾಗಿದೆ. ಗೃಂಥಾಲಯಕ್ಕೆ ಅಮೂಲ್ಯ ಪುಸ್ತಕಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ನೀವುಗಳು ನಿಮ್ಮ ಪುಸ್ತಕಗಳನ್ನ ಶಾಲೆಗೆ ಒದಗಿಸಬಹುದು ಶಾಲಾ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸಲು ಮತ್ತು ಜ್ಞಾನದ ವಿಸ್ತರಣೆಗಾಗಿ ಈ ಗ್ರಂಥಾಲಯವನ್ನು ಮರುಸಜ್ಜುಗೊಳಿಸಲಾಗುತ್ತಿದೆ. ಇದಕ್ಕಾಗಿ … Read more