ಕಟ್ಟಿನಹೊಳೆಯಿಂದ ಯುವಕನ ಮೃತದೇಹ ಮೇಲೇತ್ತಿದ ಈಶ್ವರ್ ಮಲ್ಪೆ ತಂಡ! ನಡೆದಿದ್ದೇನು?
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 14, 2025 : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಂಟೋಡಿಯಲ್ಲಿ ಹೊಳೆ ದಾಟುತ್ತಿದ್ದ ವೇಳೆ ದುರಂತವೊಂದು ಸಂಭವಿಸಿದೆ. ಉಕ್ಕಡ ಬಳಸಿ ಇಲ್ಲಿನ ಕಟ್ಟಿನಹೊಳೆ ದಾಟುತ್ತಿದ್ದ ಸಂದರ್ಭದಲ್ಲಿ ಉಕ್ಕಡ ಮಗುಚಿದ ಪರಿಣಾಮ ಯುವಕನೊಬ್ಬ ನೀರು ಪಾಲಾಗಿದ್ದಾನೆ. ಹೊಸನಗರ ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದಲ್ಲಿ ನಿನ್ನೆ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿತ್ತು. ಇವತ್ತು ಯುವಕನ ಶವ ಪತ್ತೆಯಾಗಿದೆ. ನುರಿತ ಈಜುಗಾರ ಈಶ್ವರ್ ಮಲ್ಪೆಯವರ ತಂಡ ಸ್ಥಳಕ್ಕೆ ಬಂದು ಮೃತ … Read more