ಶಿವಮೊಗ್ಗ-ದಕ್ಷಿಣ ಕನ್ನಡ-ಉಡುಪಿ ಜನರಿಗೆ ಸೂಚನೆ/ ಹುಲಿಕಲ್ ಘಾಟಿ ಬಂದ್ ಇನ್ನಷ್ಟು ದಿನ ವಿಸ್ತರಣೆ/ ಪರ್ಯಾಯ ಮಾರ್ಗ ಇಲ್ಲಿದೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್ (Balebare ghat) ನಲ್ಲಿ ಕಾಂಕ್ರಿಟ್ ಪೇವ್ಮೆಂಟ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದ್ದು, ಹೆಚ್ಚುವರಿಯಾಗಿ ಹತ್ತು ದಿನಗಳ ಕಾಲ ಘಾಟಿ ರಸ್ತೆಯನ್ನ ಬಂದ್ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಬಾಳೆಬರೆ ಘಾಟಿಯಲ್ಲಿನ ಕಾಮಗಾರಿ ಇಲ್ಲಿನ ಹುಲಿಕಲ್ ಅಥವಾ ಬಾಳೆಬರೆ ಘಾಟಿಯಲ್ಲಿ, ತೀರ್ಥಹಳ್ಳಿ-ಕುಂದಾಪುರದ ಹೆದ್ದಾರಿಯ 36.00 ರಿಂದ 38.00 … Read more