ರಾತ್ರಿ ನಿಲ್ಲಿಸಿದ್ದ ಗಾಡಿ ಬೆಳಿಗ್ಗೆಯಷ್ಟರಲ್ಲಿ ನಾಪತ್ತೆ! ಸಾಗರ ರೋಡಲ್ಲಿ ಕತ್ತಲು ಕಳೆಯುವಷ್ಟರಲ್ಲಿ ಏನಾಯ್ತು!
Sagara Road : ಶಿವಮೊಗ್ಗ : ಸಾಗರ ರಸ್ತೆಯ ಸಾಗರ ಮಲ್ಲಿಗೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಳ್ಳುವ ಗಾಡಿಯೊಂದನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ರಾಘವೇಂದ್ರನಾಯ್ಕ ಎಂಬುವವರಿಗೆ ಸೇರಿದ ಗಾಡಿ ಕಳ್ಳತನವಾಗಿದೆ. ಇವರು ವ್ಯಾಪಾರ ಮುಗಿಸಿ ರಾತ್ರಿ ಎಂದಿನಂತೆ ಗಾಡಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಗಾಡಿಯು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ತಳ್ಳುವ ಗಾಡಿಯ ಮೌಲ್ಯ ಸುಮಾರು 30,000 ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. … Read more