ಶಿವಮೊಗ್ಗದ ನೂತನ ಡಿಸಿ ಆಗಿ ಪ್ರಭುಲಿಂಗ ಕವಲಿಕಟ್ಟಿ ಪದಗ್ರಹಣ! ಅಧಿಕಾರ ಹಸ್ತಾಂತರ ಮಾಡಿ ಗುರುದತ್ ಹೆಗಡೆ
ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ಇಂದು ಪ್ರಭುಲಿಂಗ ಕವಲಿಕಟ್ಟಿ ಅಧಿಕಾರವನ್ನು ವಹಿಸಿಕೊಂಡರು. ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೂಗುಚ್ಚ ನೀಡುವ ಮೂಲಕ ನೂತನ ಡಿಸಿಯನ್ನು ಸ್ವಾಗತಿಸಿ ಅಧಿಕಾರವನ್ನು ಹಸ್ತಾತಂರಿಸಿದರು. ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಡಿಸೆಂಬರ್ 31 ರಂದು ಆದೇಶ ಹೊರಡಿಸಿತ್ತು. ಪ್ರಭುಲಿಂಗ ಕವಲಿಕಟ್ಟಿ ಈ ಹಿಂದೆ ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ … Read more