ರೈಲು ಪ್ರಯಾಣಿಕರ ಗಮನಕ್ಕೆ! ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಶಿವಮೊಗ್ಗ : ಅರಸೀಕೆರೆ, ಬೀರೂರು, ಚಿಕ್ಕಜಾಜೂರು ಮತ್ತು ಹರಿಹರ ರೈಲ್ವೆ ಯಾರ್ಡ್‌ಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವತ್ಯಾಸವಾಗಲಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಮಾಹಿತಿಯ ಪ್ರಕಾರ, ತಾತ್ಕಾಲಿಕ ಗರ್ಡರ್‌ಗಳ ಅಳವಡಿಕೆ ಹಾಗೂ ತೆರವು ಕಾರ್ಯಕ್ಕಾಗಿ ಲೈನ್ ಬ್ಲಾಕ್ ಮತ್ತು ವಿದ್ಯುತ್ ಬ್ಲಾಕ್ ಮಾಡಲಾಗುತ್ತಿದ್ದು ಇದರಿಂದಾಗಿ ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರು ಭಾಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ಬದಲಾವಣೆ: ಪೂರ್ಣ ವಿವರ ಇಲ್ಲಿದೆ SWR Train Rescheduling and Regulation News: Shimoga, Ballari and Chikmagalur Trains Delayed
ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ಬದಲಾವಣೆ: ಪೂರ್ಣ ವಿವರ ಇಲ್ಲಿದೆ SWR Train Rescheduling and Regulation News: Shimoga, Ballari and Chikmagalur Trains Delayed

ಯಾವೆಲ್ಲಾ ರೈಲುಗಳ ಸಂಚಾರದಲ್ಲಿ ಬದಲಾವಣೆ/SWR Train Rescheduling and Regulation News

  • ಬಳ್ಳಾರಿ ಜಂಕ್ಷನ್‌ನಿಂದ ಹೊರಟು ದಾವಣಗೆರೆಗೆ ತಲುಪುವ ರೈಲು ಸಂಖ್ಯೆ 07395 ಡೆಮು ರೈಲನ್ನು 29.12.2025 ರಿಂದ 01.01.2026 ರವರೆಗೆ ಹಾಗೂ 03.01.2026 ರಂದು ಮಾರ್ಗ ಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ. 
  • ಅದೇ ರೀತಿ ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ ಮತ್ತು ತುಮಕೂರು ನಡುವಿನ ಎಕ್ಸ್‌ಪ್ರೆಸ್ ರೈಲನ್ನು 29.12.2025 ರಿಂದ 01.01.2026 ರವರೆಗೆ ಮತ್ತು 03.01.2026 ರಿಂದ 07.01.2026 ರವರೆಗಿನ ದಿನಗಳಲ್ಲಿ ಸಂಚಾರದ ಅವಧಿಯಲ್ಲಿ 90 ನಿಮಿಷಗಳ ಕಾಲ ಮಾರ್ಗ ಮಧ್ಯೆ ತಡೆಹಿಡಿಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
  • ಕಾಮಗಾರಿಯ ಕಾರಣದಿಂದ ಶಿವಮೊಗ್ಗ ಟೌನ್ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 12090 ಜನಶತಾಬ್ದಿ ಎಕ್ಸ್‌ಪ್ರೆಸ್  ಸಂಚಾರದಲ್ಲಿ ವಿಳಂಬವಾಗಲಿದೆ. 
  • ಈ ರೈಲನ್ನು 29.12.2025 ರಿಂದ 01.01.2026 ರವರೆಗೆ ಮತ್ತು 03.01.2026 ರಿಂದ 07.01.2026 ರವರೆಗೆ 30 ನಿಮಿಷಗಳ ಕಾಲ ನಿಯಂತ್ರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. 
  • ರೈಲು ಸಂಖ್ಯೆ 56272 ಚಿಕ್ಕಮಗಳೂರು ಮತ್ತು ಶಿವಮೊಗ್ಗ ಟೌನ್ ಪ್ಯಾಸೆಂಜರ್ ರೈಲು 20.01.2026 ರಿಂದ 22.01.2026 ರವರೆಗೆ ಹಾಗೂ 24.01.2026 ರಿಂದ 26.01.2026 ರವರೆಗೆ ತನ್ನ ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಚಿಕ್ಕಮಗಳೂರಿನಿಂದ ಪ್ರಯಾಣ ಆರಂಭಿಸಲಿದೆ. 
ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ಬದಲಾವಣೆ: ಪೂರ್ಣ ವಿವರ ಇಲ್ಲಿದೆ SWR Train Rescheduling and Regulation News: Shimoga, Ballari and Chikmagalur Trains Delayed
ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ಬದಲಾವಣೆ: ಪೂರ್ಣ ವಿವರ ಇಲ್ಲಿದೆ SWR Train Rescheduling and Regulation News: Shimoga, Ballari and Chikmagalur Trains Delayed

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗಕ್ಕೆ ಹೊಸ ವರ್ಷ ಸಿಗಲಿದೆ ಬಂಪರ್​, ಬಂಗಾರ ಪುಣ್ಯಸ್ಮರಣೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ ಬದಲಾವಣೆ: ಪೂರ್ಣ ವಿವರ ಇಲ್ಲಿದೆ SWR Train Rescheduling and Regulation News: Shimoga, Ballari and Chikmagalur Trains Delayed