suvarna news : ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಆದ್ರೆ ಯಾರೆಲ್ಲಾ ಒಳ ಬರಬಹುದು..! ಯಾರೆಲ್ಲಾ ಹೊರ ಹೋಗಬಹುದು..!?

prathapa thirthahalli
Prathapa thirthahalli - content producer

suvarna news : ಸುವರ್ಣ ನ್ಯೂಸ್ ಕನ್ನಡ ಮಾಧ್ಯಮ ಜಗತ್ತಿನಲ್ಲಿ ತನ್ನದೇಯಾದ ಕೆಲವು ಹೆಜ್ಜೆ ಗುರುತುಗಳನ್ನು ಇರಿಸಿಕೊಂಡಿದೆ. ಸುವರ್ಣ ನ್ಯೂಸ್ ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆ. ಆದರೇ ಅಂತ ಮಹತ್ವದ ಬದಲಾವಣೆಗಳೇನು ಅಲ್ಲಿ ಕಂಡಿಲ್ಲ ಎಂಬುದು ಕೂಡ ಸತ್ಯಕ್ಕೆ ದೂರವಾದ ಮಾತಂತ್ತು ಅಲ್ಲ. ಇನ್ನೂ ಸುವರ್ಣ ನ್ಯೂಸ್ ಕಳೆದ ಕೆಲ ವರ್ಷಗಳಲ್ಲಿ ತನ್ನ ಲೋಗೋದಲ್ಲಿ, ಹೆಸರಲ್ಲೂ ಕೂಡ ಕೆಲ ಬದಲಾವಣೆ ಮಾಡಿಕೊಂಡಿತ್ತು. ಇನ್ನೂ ನೇರ ದಿಟ್ಟ ನಿರಂತರ ಅಂದ್ಕೊಂಡು ಸುದ್ದಿ ನೀಡ್ತಿರೋ ಈ ಸುವರ್ಣ ನ್ಯೂಸ್ ಈಗ ಚ್ಯಾನಲ್ ಹೆಸರೇ ಬದಲಾವಣೆ ಮಾಡಿಕೊಳ್ಳುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಸುದ್ದಿಯನ್ನು ಕೆಲ ಕನ್ನಡ ವೆಬ್ ಮಾಧ್ಯಮಗಳು ಪ್ರಕಟಿಸಿವೆ. 

ಬದಲಾವಣೆ ಎಂಬುದು ಚ್ಯಾನಲ್ ಹೆಸರು, ಚ್ಯಾನಲ್ ಲೋಗೋಗೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿರೋ ಅನೇಕರನ್ನು ಹೊರ ಕಳಿಸಾಗುತ್ತದೆ. ಹೊರಗಿನವರನ್ನು ಒಳಗೆ ತರಲಾಗುತ್ತದೆ ಎಂಬ ಮಹತ್ವದ ಸುದ್ದಿ ಹರಿದಾಡ್ತಿದೆ ಎಂದು ವೆಬ್ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯಲ್ಲಿ ಹೇಳಲಾಗಿದೆ. ಅಂತ ಮಹತ್ವದ ಬದಲಾವಣೆಗಳಲ್ಲಿ ಅಜಿತ್ ಹನುಮಕ್ಕನವರ್ ಕೂಡ ಹೊರ ಹೋಗ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಹೇಳಲಾಗಿದೆ. ಅಲ್ಲದೇ ಪ್ರಶಾಂತ್ ನಾಥುರಂತಹ ಕೆಲವೇ ಕೆಲವರ ಕೆಲಸ ಬಾರೀ ಪ್ರಶಂಸೆ ಪಡೆದುಕೊಂಡಿದೆ ಅಷ್ಟೇ.. ಇನ್ನೂಳಿದಂತೆ ಅನೇಕರು ಹೆಸರಿಗುಂಟು ಕೆಲಸಕ್ಕಿಲ್ಲ ಎಂಬಂತ ಪಗಾರಕ್ಕಾಗಿ ಕೆಲಸ ಮಾಡ್ತಿದ್ದಾರಂತೆ.. ಅದನ್ನ ಅವರ ಸಂಸ್ಥೆಯ ಅನೇಕರು ತಿಳಿಸಿದ್ದಾರೆಂದು ವೆಬ್ ಮಾಧ್ಯಮದಲ್ಲಿ ಪ್ರಕಟಗೊಂಡ ಸುದ್ದಿಯಲ್ಲಿ ಹೇಳಿದ್ದಾರೆ. ಬಿಡಿ ಅದು ಅವರಿಗೆ ಬಿಟ್ಟ ವಿಚಾರ ಇನ್ನೂ ನಾವು ಈಗ ಮುಖ್ಯವಾದ ವಿಷಯದ ಕಡೆಗೆ ಬರೋಣ…

- Advertisement -

suvarna news : ಚ್ಯಾನಲ್‌ಗೆ ಯಾರೆಲ್ಲಾ ಸೇರಿಕೊಳ್ತಾರೆ..!?:

ಮೇಲೆ ತಿಳಿಸಿದಂತೆ ಸುವರ್ಣ ನ್ಯೂಸ್ ಬದಲಾವಣೆಗಳನ್ನು ಮಾಡಿಕೊಂಡಿದ್ದೇ ಆದ್ರೇ ಅದರ ನಿರ್ವಹಣೆ ಮಾಡಲು ಪ್ರಮುಖರನ್ನು ಕರೆ ತರಬೇಕಾಗುತ್ತದೆಯಲ್ಲವೇ.. ಆ ಕೆಲಸದ ಬಗ್ಗೆ ಸುವರ್ಣ ನ್ಯೂಸ್ ತಂಡ ಈಗಾಗಲೇ ಚಿಂತನೆ ನಡೆಸಿದೆಯಂತೆ.. ಯಾರನ್ನು ತಂದು ಕೂಡಿಸಿದರೇ ಚ್ಯಾನಲ್ ಗೆ ಒಳಿತು ಎಂಬ ಬಗ್ಗೆ ಟೀಮ್ ಯೋಚನೆ ನಡೆಸಿದೆಯಂತೇ… ಇನ್ನೂ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬುದರ ಬಗ್ಗೆ ಕೆಲವು ವದಂತಿಗಳು ಕೂಡ ಹರಿದಾಡ್ತಿವೆ ಅವುಗಳ ಬಗ್ಗೆ ನೋಡುವುದಾದರೇ.ವಿಲಾಸ್ ನಂಡೋಡ್ಕರ್, ರವಿ ಎಸ್ ಗೌಡ್ರು, ಸಿದ್ದು ಕಾಳೋಜಿ ಸೇರಿದಂತೆ ಇನ್ನೂ ಅನೇಕರ ಹೆಸರು ಕೇಳಿ ಬರ್ತಿದೆಯಂತೆ. ಅಂದ್ರೇ ಇವರ ಹೆಸರು ಚ್ಯಾನಲ್ ನ ಯಾವುದೋ ಒಂದು ಸಣ್ಣಪುಟ್ಟ ಹುದ್ದೆಗೆ ಅಲ್ವಂತೆ ಎಡಿಟರ್ ಎಂಬ ಚ್ಯಾನಲ್‌ ನ ಸಂಪಾದಕನ ಸ್ಥಾನ ತುಂಬಬಲ್ಲವರು ಇವರಲ್ಲಿ ಒಬ್ಬರು ಎಂಬ ಮಾತು ಇದೆಯಂತೆ… ಇದನ್ನು ನಾವ್ಯಾರು ಹೇಳ್ತಿಲ್ಲ.. ಅಲ್ಲಲ್ಲಿ ಸುದ್ದಿ ಮಾಧ್ಯಮದ ಮಿತ್ರರೇ ಮಾತಾಡಿಕೊಳ್ತಿದ್ದಾರೆ..

ಇನ್ನೂ ಈ ಮೇಲಿನ ಮೂರು ಜನರ ಬಗ್ಗೆ ನೋಡೋದಾದ್ರೆ, ವಿಲಾಸ್ ನಂದೋಡ್ಕರ್ ರವರು ಅಪಾರ ಅನುಭವ ಹೊಂದಿರುವ ಪತ್ರಕರ್ತರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಮಾಧ್ಯಮ ಕ್ಷೇತ್ರದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಕೂಡ ಇದೆ. ಟಿವಿ ನೈನ್ ನಂತಹ ಪ್ರಮುಖ ಚ್ಯಾನಲ್ ನ ಇನ್ಪುಟ್ & ಪ್ರೋಡೆಕ್ಷನ್ ಹೆಡ್ ನಂತಹ ಮಹತ್ವದ ಜವಾಬ್ದಾರಿಯನ್ನು ಕೂಡ ಈ ವಿಲಾಸ್ ರವರು ನಿರ್ವಹಿಸಿಕೊಂಡು ಸಾಗುತ್ತಿದ್ದಾರೆ. ಇವರನ್ನು ತಂದು ಕೂರಿಸಿದರೇ ಹೇಗೆ ಎಂಬ ಚಿಂತನೆಯನ್ನು ಸುವರ್ಣ ನ್ಯೂಸ್ ತಂಡ ಮಾಡ್ತಿದೆ ಎಂಬ ಮಾತುಗಳು ಮಾಧ್ಯಮ ರಂಗದಲ್ಲಿ ಕೇಳಿ ಬರ್ತಿವೆಯಂತೆ.. ವಿಲಾಸ್ ರವರನ್ನು ತಂದು ಕೂಡಿಸಿದರೇ ಲಾಸಂತು ಏನಿಲ್ಲ.. ಅವರು ಎಲ್ಲವನ್ನೂ ಸರಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕೈ, ಬಾಯಿ ಸ್ವಚ್ಛ ಇಟ್ಕೊಂಡು ಕೆಲಸ ಮಾಡ್ತಾರೆ. ಎಡಿಟರ್ ನಂತಹ ಸ್ಥಾನಕ್ಕೆ ಅವರು ಸೂಕ್ತ ವ್ಯಕ್ತಿ ಎಂಬ ಮಾತುಗಳನ್ನು ಅವರವರೇ ಹಾಡಿಕೊಳ್ತಿದ್ದಾರಂತೆ..

suvarna news information news
suvarna news information news

suvarna news : ಇನ್ನೂ ಮತ್ತೊಬ್ಬರು ಅಂದ್ರೇ ಅವರೇ, ರವಿ ಎಸ್ ಗೌಡ್ರು, ಈ ರವಿ ಎಸ್ ಗೌಡ್ರುರವರ ಹೆಸರು ಕೂಡ ಸುವರ್ಣ ನ್ಯೂಸ್ ಎಡಿಟರ್ ಸ್ಥಾನಕ್ಕೆ ಕೇಳಿ ಬರ್ತಿದೆಯಂತೆ. ಪ್ರಸ್ತುತ ಝಿ ಕನ್ನಡ ನ್ಯೂಸ್ ನ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಗೌಡ್ರು, ಈಗಾಗಲೇ ಕನ್ನಡ ಮಾಧ್ಯಮ ರಂಗದಲ್ಲಿ ಮಿಂಚಿ ಮರೆಯಾದ ಪ್ರಮುಖ ಚ್ಯಾನಲ್ ಗಳು ಸೇರಿದಂತೆ ಈಗಲೂ ಪ್ರಜ್ವಲಿಸುತ್ತಿರುವ ಕೆಲ ಟಿವಿ ಚ್ಯಾನಲ್ ಗಳ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರಂತೆ. ಇವರು ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲೆಲ್ಲಾ ಅತ್ಯುತ್ತಮ ವ್ಯಕ್ತಿ, ಅತ್ಯುತ್ತಮ ಆಡಳಿತಗಾರ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರಂತೆ. ಇಂತಹ ಗೌಡ್ರು ನಮ್ಮ ಚ್ಯಾನಲ್ ನ ಎಡಿಟರ್ ಆದ್ರೆ ಹೇಗಿರುತ್ತೆ ಎಂಬ ಒಂದು ಹಂತದ ಚಿಂತನೆಯನ್ನು ಈ ಸುವರ್ಣ ಟೀಮ್ ಮಾಡ್ತಿದೆಯಂತೆ ಇದ್ಯಾವ್ದು ನಮ್ಮ ಮಾತಲ್ಲ. ಮಾಧ್ಯಮ ರಂಗದ ಪ್ರಮುಖರು ಮಾತಾಗಿದೆ.

suvarna news : ಇನ್ನೂ ಸುವರ್ಣ ನ್ಯೂಸ್ ನ ಪ್ರಮುಖ ಹುದ್ದೆಗೆ ಕೇಳಿ ಬರ್ತಿರೋ ಇನ್ನೊಂದು ಹೆಸರು ಅಂದ್ರೆ ಅದು ಸಿದ್ದು ಕಾಳೋಜಿ ಎಂಬ ಹೆಸರು.. ಈ ಕಾಳೋಜಿರವರು ಈಗಾಗಲೇ ನ್ಯೂಸ್ 18 ದಿಗ್ವಿಜಯ, ವಿಜಯವಾಣಿಯಂತಹ ಪ್ರಮುಖ ಮಾಧ್ಯಮ ಕ್ಷೇತ್ರಗಳ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರಂತೆ. ಆದರೇ ಇವರು ಯಾವುದೇ ಹುದ್ದೆಯಲ್ಲಿ ಜಾಸ್ತಿ ದಿನ ಇರ್ಲಿಲ್ಲ ಎಂಬ ಮಾತು ಕೂಡ ಇದೆಯಂತೆ.. ಸಿದ್ದು ಕಾಳೋಜಿರವರು ಅಂದುಕೊಂಡಂತೆ ಕೆಲಸ ಮಾಡದಿದ್ದಕ್ಕೆ ಸಂಸ್ಥೆಗಳಿಂದ ಹೊರದೊಬ್ಬಲ್ಪಟ್ಟರೋ ಅಥವಾ ಇವರು ಅಂದುಕೊಂಡಂತೆ ಸಂಸ್ಥೆಗಳು ನಡಿತಿಲ್ಲ ಎಂದು ಸಂಸ್ಥೆಗಳನ್ನು ದಿಕ್ಕರಿಸಿ ಹೊರ ಬಂದರೋ ಅದಂತು ಉತ್ತರವಿಲ್ಲದ ಪ್ರಶ್ನೆಯಾಗಿದೆ.

ಇನ್ನೂ ಈ ಮೇಲಿನ ಎರಡು ಹೆಸರುಗಳು ಅಂದ್ರೇ ವಿಲಾಸ್ & ರವಿ ಎಸ್ ಗೌಡ್ರುರವರಿಗೆ ಇದ್ದಂತ ಜನಮನ್ನಣೆ, ನೌಕರರ ಸಹಕಾರ, ಪ್ರೀತಿ, ವಿಶ್ವಾಸ ಸಿದ್ದು ಕಾಳೋಜಿರವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೇ ಈ ಮೂರು ಜನರ ಹೆಸರುಗಳಂತು ಈಗ ಬಾರೀ ಸದ್ದು ಮಾಡ್ತಿವೆ.ಸುವರ್ಣ ನ್ಯೂಸ್ ತಂಡದಲ್ಲೇ ಕೆಲವರು ಸಿದ್ದು ಕಾಳೋಜಿ ಹೆಸರಿಗೆ ಅಸ್ತು ಅಂತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿವೆಯಂತೆ. ಏನೆಯಾಗ್ಲಿ ಕನ್ನಡ ಮಾಧ್ಯಮ ರಂಗ ತುಂಬಾ ವಿಶಾಲವಾಗಿದೆ. ಮುಂಚೆ ಇದ್ದಂಗೆ ಈಗ ಯಾವುದು ಕೂಡ ಇಲ್ಲ. ಎಲ್ಲವೂ ಟಿಆರ್ಪಿ ಅದು ಇದು ಅಂತ ಬೆನ್ನತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸುವರ್ಣ ನ್ಯೂಸ್ ಮಹತ್ವದ ಬದಲಾವಣೆಗೆ ಮುಂದಾಗಿದೆ ಎಂಬ ಮಾತಂತು ವಿಚಿತ್ರ ಅನಿಸಿದ್ರು ಸತ್ಯ ಎಂಬಂತಿದೆ. 

suvarna news : ಒಟ್ಟಾರೆಯಾಗಿ ಹೇಳೋದಾದ್ರೆ, ಈ ಮೇಲಿನ ಎಲ್ಲಾ ಅಂಶಗಳು ಸತ್ಯ ಆಗಿದ್ದೆ ಆದ್ರೇ, ಸುವರ್ಣ ನ್ಯೂಸ್ ತಂಡಕ್ಕೆ ಒಳ್ಳೆದಾಗ್ಲಿ, ಮಾಧ್ಯಮ ರಂಗದಲ್ಲಿ ಅವರಿಗೆ ಇನ್ನಷ್ಟು ಪ್ರಸಿದ್ಧಿ ಸಿಗ್ಲಿ.. ಅವರು ಅಂದುಕೊಂಡಂತ ಯಶಸ್ಸು ಅವರಿಗೆ ಸಿಗ್ಲಿ ಎಂದು ಹಾರೈಸೋದು ಬಿಟ್ರೆ ಬೇರೆ ಏನನ್ನು ನಾವು ಮಾಡಲಾಗದು. ಯಾಕಂದ್ರೇ, ಚ್ಯಾನಲ್ ಅವ್ರ್ದು, ದುಡ್ಡು ಅವ್ರ್ದು, ಯಾರನ್ನು ತರಬೇಕು, ಯಾರನ್ನು ಕೈಬಿಡಬೇಕು ಎಂಬ ಅಧಿಕಾರ ಕೂಡ ಅವರಿಗೆಯೇ ಇದೆ. ಏನೆಯಾಗ್ಲಿ ಸುವರ್ಣ ನ್ಯೂಸ್ ಗೆ ಒಳ್ಳೆದಾಗ್ಲಿ.. ಅದು ಸುವರ್ಣ ನ್ಯೂಸ್ ಆಗಿಯೇ ಇರ್ಲಿ ಅಥವಾ ಹೆಸರು ಬದಲಾಯಿಸಿಕೊಂಡು ಇನ್ಯಾವ್ದೋ ಹೆಸರಿನಲ್ಲಿ ಬರ್ಲಿ.. ಒಟ್ಟಾರೆಯಾಗಿ ಆ ತಂಡಕ್ಕೆ ಶುಭವಾಗ್ಲಿ..

ಬೆಂಗಳೂರು ನ್ಯೂಸ್​

 

Share This Article
Leave a Comment

Leave a Reply

Your email address will not be published. Required fields are marked *