ಜೂನಿಯರ್ ಹಾಕಿ ವಿಶ್ವಕಪ್‌ಗೆ ಶಿವಮೊಗ್ಗದ ಸುನಿಲ್ ಪಿ.ಬಿ. ಆಯ್ಕೆ!

prathapa thirthahalli
Prathapa thirthahalli - content producer

Sunil P.B. selected  Hockey  ನವೆಂಬರ್ 15, 2025, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ ಎಫ್​ಐಹೆಚ್​ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಜೂನಿಯರ್ ಹಾಕಿ ತಂಡಕ್ಕೆ ಶಿವಮೊಗ್ಗ ಜಿಲ್ಲೆಯ ಯುವಕ ಸುನಿಲ್ ಪಿ.ಬಿ. ಅವರು ಆಯ್ಕೆಯಾಗಿದ್ದಾರೆ.

Sunil P.B. selected Hockey World Cup
Sunil P.B. selected Hockey World Cup

ನವೆಂಬರ್ 28 ರಿಂದ ಡಿಸೆಂಬರ್ 10 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿ ಹೋಬಳಿಯ ತಲ್ಲೂರು ಗ್ರಾಮದವರಾದ ಸುನಿಲ್ ಅವರು, 2017 ರಿಂದ ಶಿವಮೊಗ್ಗ ನಗರದ ಡಿವೈಇಎಸ್ (DYES) ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹಾಕಿ ತರಬೇತಿಯನ್ನು ಪಡೆದುಕೊಂಡಿದ್ದರು. ಕೋಚ್ ಸುಂದರೇಶ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಹಾಕಿ ಆಟಗಾರನಾಗಿ ಹೊರಹೊಮ್ಮಿದರು. ಇದರ ಪರಿಣಾಮವಾಗಿ 2021 ರಲ್ಲಿ ಕರ್ನಾಟಕ ಹಾಕಿ ತಂಡವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಲಭಿಸಿತು. ಇಲ್ಲಿಯವರೆಗೆ ಕರ್ನಾಟಕ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವ ಸುನಿಲ್, ಈಗಾಗಲೇ 2 ಬಾರಿ ಭಾರತದ ಜೂನಿಯರ್ ಹಾಕಿ ತಂಡಕ್ಕೂ ಸೇರ್ಪಡೆಯಾಗಿದ್ದರು. 

ಇದೀಗ ಪುರುಷರ ಜೂನಿಯರ್ ವಿಶ್ವಕಪ್ ಆಡುವ ತಂಡದಲ್ಲಿ ಮಲೆನಾಡಿನ ಈ ಯುವಕನಿಗೆ ಅವಕಾಶ ಸಿಕ್ಕಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ.ಭಾರತದ ಜೂನಿಯರ್ ಹಾಕಿ ತಂಡಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಹಾಕಿ ಪಟು ಸುನಿಲ್ ಆಗಿದ್ದಾರೆ. ಸೆಂಟರ್ ಡಿಫೆಂಡರ್ ಆಗಿ ಗುರುತಿಸಿಕೊಂಡಿರುವ ಅವರು, ತಮ್ಮ ಪ್ರತಿಭೆಯಿಂದಲೇ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಚಳ್ಳಕೆರೆ ಬಳಿ ಲಾರಿಗೆ ಕಾರು ಡಿಕ್ಕಿ! ಬಳ್ಳಾರಿಗೆ ಹೋಗುತ್ತಿದ್ದ ಶಿವಮೊಗ್ಗದ ಮೂವರಿಗೆ ಪೆಟ್ಟು! ಓರ್ವ ಸಾವು

Sunil P.B. selected Hockey World Cup

Sunil P.B. selected Hockey World Cup
Sunil P.B. selected Hockey World Cup
Share This Article