Suicides Rock Shimoga ಶಾಂತಿ ನಿವಾಸ ಎಂದೇ ನಂಬಿ ಖರೀದಿಸಿದ್ದ ಮನೆ ಮುಂದೊಂದು ದಿನ ಒಂದು ಕುಟುಂಬವನ್ನೇ ಸರ್ವನಾಶ ಮಾಡುತ್ತದೆ ಎಂದು ಯಾರು ಊಹಿಸಿರಲಿಲ್ಲ. ನೇಣಿಗೆ ಕೊರಳೊಡ್ಡಿದ್ದ ಮನೆ ಮಾಲೀಕನ ಮನೆಯನ್ನೇ ಕಡಿಮೆ ಹಣಕ್ಕೆ ವೈದ್ಯ ದಂಪತಿ ಖರೀಸಿದ್ದೇ ಇಲ್ಲಿ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿತು. ಸಾನಿಧ್ಯ ಎಂಹ ಹೆಸರಿನ ಮನೆಯಲ್ಲಿ ನೇಣಿಗೆ ಶರಣಾದವರು ಐದು ಮಂದಿ ಎಂದರೆ ನೀವು ನಂಬಲೇ ಬೇಕು. ಸಾವಿನ ಮನೆಯಲ್ಲಿ ವೈದ್ಯ ಕುಟುಂಬ ಒಬ್ಬೊಬ್ಬರಾಗಿ ನೇಣಿಗೆ ಶರಣಾದ ನಿಗೂಡ ರಹಸ್ಯವಾದರೂ ಏನು…ಈ ಕುರಿತ ವರದಿ ಇಲ್ಲಿದೆ.
ಆನ್‌ಲೈನ್‌ನಲ್ಲಿ 1000 ಬ್ಯಾಗ್ ಸಿಮೆಂಟ್‌ಗೆ ಆರ್ಡರ್: 4.15 ಲಕ್ಷ ಕಳೆದುಕೊಂಡ ವ್ಯಕ್ತಿ

ಶಿವಮೊಗ್ಗದ ಅಶ್ವಥ್ ನಗರದಲ್ಲಿರುವ ಆ ಐಷಾರಮಿ ಮನೆಯನ್ನು ನೋಡಿದರೆ ಎಂತವರು ಬೆರಗಾಗುತ್ತಾರೆ.ಈ ಮನೆಯಲ್ಲಿ ಖ್ಯಾತ ಸ್ತ್ರೀ ರೋಗ ತಜ್ಞೆ ಜಯಶ್ರೀ (56) ಹಾಗು ಮಗ ಆಕಾಶ್(34) ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅದ್ರಲ್ಲೂ ನಿನ್ನೆ ತಾಯಿ ಮತ್ತು ಮಗ ಇಬ್ಬರೂ, ಒಬ್ಬರಿಗೆ ಗೊತ್ತಿಲ್ಲದೇ, ಮತ್ತೊಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ. ಮತ್ತೊಬ್ಬರಿಗೆ ಬುದ್ಧಿ, ಧೈರ್ಯ ಹೇಳಿ ತಿದ್ದಬೇಕಿದ್ದ ವೈದ್ಯೆಯೇ ನೇಣಿಗೆ ಶರಣಾಗಿರೋದು ದುರಂತ. ಮತ್ತೊಂದೆಡೆ ಅಮ್ಮನ ಹತ್ರ ಜಗಳವಾಡಿಕೊಂಡ ಮಗ ಕೂಡ ನೇಣಿನ ಕುಣಿಕೆಗೆ ಕೊರಳು ಕೊಟ್ಟಿದ್ದಾನೆ.ಮೂಲಗಳ ಪ್ರಕಾರ ಮೊನ್ನೆ ರಾತ್ರಿ ತಾಯಿ ಮತ್ತು ಮಗ ಅದ್ಯಾವುದೋ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ. ನಂತರ ನಂತರ ಜಯಶ್ರೀ ಮತ್ತು ಆಕಾಶ್ ತಮ್ಮ ತಮ್ಮ ಕೊಠಡಿಗಳಿಗೆ ತೆರಳಿ ಮಲಗಿದ್ದಾರೆ. ಬೆಳಿಗ್ಗೆ 10 ಗಂಟೆಯಾದರೂ ಯಾಕೋ ಇನ್ನೂ ಏಳಲಿಲ್ಲ ಅಂತಾ ನೋಡಿದ ಸೊಸೆಗೆ ಶಾಕ್ ಆಗಿದೆ. ಜಯಶ್ರೀ ಕೆಳಗಿನ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ. ಆಕಾಶ್ ಮನೆ ಮಹಡಿಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಸಾನಿಧ್ಯ ನಿವಾಸವೊಂದರಲ್ಲೆ ನಡೆದ ಐದನೇ ಆತ್ಮಹತ್ಯೆ ಘಟನೆಯಾಗಿದೆ.

Suicides Rock Shimoga ನ್ಯಾಮತಿಯಲ್ಲಿ ಖ್ಯಾತ ಮಕ್ಕಳ ವೈದ್ಯರಾಗಿದ್ದ ಡಾಕ್ಟರ್ ನಾಗರಾಜ್ ಆತ್ಮಹತ್ಯೆ
ನ್ಯಾಮತಿಯಲ್ಲಿ ಖ್ಯಾತ ಮಕ್ಕಳ ತಜ್ಞರಾಗಿದ್ದ ಡಾಕ್ಟರ್ ನಾಗರಾಜ್ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಹೊಮ್ಮರಡಿ ನರ್ಸಿಂಗ್ ಹೋಂ ಪ್ರಾರಂಭಿಸುತ್ತಾರೆ. ಇವರಿಗೆ ಪತ್ನಿ ಸ್ತ್ರೀರೋಗ ತಜ್ಞೆ ಡಾಕ್ಟರ್ ಜಯಶ್ರೀ ಕೈಜೋಡಿಸುತ್ತಾರೆ. ಸುಖ ಜೀವನಕ್ಕೆ ಬೇಕಾದ ಸಂಪತ್ತನ್ನು ಭಗವಂತ ವೈದ್ಯ ದಂಪತಿಗೆ ನೀಡಿದ್ದ ಕೋಟ್ಯಂತರ ಮೌಲ್ಯದ ಆಸ್ತಿ ಇದ್ದು, ಅಲ್ಲಿಯವರೆಗೂ ಈ ಕುಟುಂಬ ನೆಮ್ಮದಿಯಿಂದ ಇತ್ತು.
ಕಡಿಮೆ ಹಣಕ್ಕೆ ಮನೆ ಖರೀದಿಸಿದ್ದೇ ಕುಟುಂಬಕ್ಕೆ ಮುಳುವಾಯಿತೆ
ಹೌದು ಹೀಗೊಂದು ಅನುಮಾನವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಹಣ ಐಶ್ವರ್ಯ ಸುಖ ನೆಮ್ಮದಿ ಎಲ್ಲವನ್ನು ಕಂಡಿದ್ದ ಡಾಕ್ಟರ್ ನಾಗರಾಜ್ ಶಿವಮೊಗ್ಗದ ಅಶ್ವಥ್ ನಗರದ ಐದನೇ ತಿರುವಿನ ಅಡ್ಡರಸ್ತೆಯಲ್ಲಿರುವ ಸಾನಿಧ್ಯ ಹೆಸರಿನ ಮನೆಯನ್ನು ಖರೀದಿಸಿದ್ದೇ ಮುಳುವಾಯಿತು. ಆ ಮನೆಯ ಮಾಲೀಕ ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಹೀಗಾಗಿ ಸುಸೈಡ್ ಮಾಡಿಕೊಂಡ ಮನೆಯನ್ನು ಖರೀದಿಸಲು ಯಾರು ಮುಂದೆ ಬಂದಿರಲಿಲ್ಲ. ವೈಚಾರಿಕವಾಗಿ ಗಟ್ಟಿಯಾಗಿದ್ದ ಡಾಕ್ಟರ್ ನಾಗರಾಜ್ ಮೂಡನಂಬಿಕೆಗಳನ್ನು ಲೆಕ್ಕಿಸದೆ ಮನೆಯನ್ನು ಕೊಂಚ ಕಡಿಮೆ ಹಣಕೊಟ್ಟು ಖರೀದಿಸಿದ್ದರು. ಅಲ್ಲಿಂದ ನಾಗರಾಜ್ ತಮ್ಮ ಕುಟುಂಬ ವ್ಯವಸ್ಥೆಯಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಬಂದರು. ಯಾವುದೇ ಸಕಾರಣವಿಲ್ಲದೆ ಒಂದು ದಿನ ಡಾಕ್ಟರ್ ನಾಗರಾಜ್ ಅದೇ ಸಾನಿದ್ಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಖ್ಯಾತ ವೈದ್ಯನೊಬ್ಬನ ಸಾವು ಶಿವಮೊಗ್ಗ ಹಾಗು ದಾವಣಗೆರೆ ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿತ್ತು. ಪತಿ ಸಾವಿನಿಂದ ಜಯಶ್ರೀ ಅಕ್ಷರ ಸಹ ನಲುಗಿಹೋಗಿದ್ದರು.

Suicides Rock Shimoga ಮಗ ಆಕಾಶ್ ಮೊದಲ ಪತ್ನಿ ನವ್ಯಶ್ರೀ ಆತ್ಮಹತ್ಯೆ
ಪತಿಯ ಸಾವಿನ ನಂತರ ಡಾ. ಜಯಶ್ರೀ ಅವರು ತಮ್ಮ ಪುತ್ರ ಆಕಾಶ್ ನನ್ನು ಮೂರು ವರ್ಷದ ಹಿಂದೆ ಮದುವೆ ಮಾಡಿದರು. ಪತಿಯ ಸಾವಿನಿಂದ ಹೊರಬರಲು ಮನೆಯಲ್ಲಿ ಒಂದು ಶುಭಕಾರ್ಯ ನಡೆದರೆ ನೋವುಗಳನ್ನು ಮರೆಯಬಹುದು ಎಂಬ ಕಾರಣಕ್ಕೆ ಡಾ. ಜಯಶ್ರೀ ಪುತ್ರ ಅಕಾಶ್‌ಗೆ 2022ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನವ್ಯಶ್ರೀ ಎಂಬುವವರ ಜೊತೆಗೆ ವಿವಾಹವಾಗಿತ್ತು. ಆದರೆ ಕೌಟಂಬಿಕ ವ್ಯವಸ್ಥೆಯಲ್ಲಾದ ಪಲ್ಲಟಗಳು ಆಕಾಶ್ ಮತ್ತು ನವ್ಯಶ್ರೀಯನ್ನು ಆತ್ಮಹತ್ಯೆಗೆ ಮುನ್ನುಡಿ ಬರೆದಿತ್ತು. ಇಬ್ಬರು ಖಿನ್ನತೆಗೊಳಗಾಗಿದ್ದರು ಐದೇ ತಿಂಗಳಿಗೆ, ಅಂದರೆ, 2022ರ ನವೆಂಬರ್ 6ರಂದು ನವ್ಯಶ್ರೀ ಇದೇ ಸಾನಿಧ್ಯ ಮನೆಯ ಶೆಡ್‌ನಲ್ಲಿ ನೇಣಿಗೆ ಶರಣಾಗಿದ್ದರು. ಈಚೆಗೆ ಚಿತ್ರದುರ್ಗ ಮೂಲದ ಯುವತಿ ಜೊತೆಗೆ ಆಕಾಶ್ ಎರಡನೆ ವಿವಾಹವಾಗಿದ್ದರು. ದುರದೃಷ್ಟವಶಾತ್ ಐದೇ ತಿಂಗಳಲ್ಲಿ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಕಾಶ್ ಅವರ ಮೊದಲ ಪತ್ನಿ ನವ್ಯಶ್ರೀ ಆತ್ಮಹತ್ಯೆಯ ಬಳಿಕ ಡಾ. ಜಯಶ್ರೀ ಮತ್ತು ಆಕಾಶ್ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ತಾಯಿ, ಮಗನ ಮಧ್ಯೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಅದು ಆತ್ಮಹತ್ಯೆವರೆಗೂ ಮುಂದುವರೆದಿದ್ದು ಮಾತ್ರ ವಿಪರ್ಯಾಸವೇ ಸರಿ. ಸಾನಿಧ್ಯ ಹೆಸರಿನ ಮನೆಯಲ್ಲಿ ಒಂದು ಕುಟುಂಬವೇ ನಿಗೂಡ ರೀತಿಯಲ್ಲಿ ನಿರ್ವಂಶವಾಗಿದ್ದು. ತರ್ಕಕ್ಕೆ ಸಿಲುಕದ ವಿಚಾರವಾಗಿದೆ. ವೈದ್ಯ ಕುಟಂಬದ ಸಾವು ಹರವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ವಿನೋಬ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Suicides Rock Shimoga in Sanidhya House


