Shimoga |Success Story of Shivamogga KR Puram Govt School | ನೀವು 1980ರ ಅಥವಾ 1990ರಲ್ಲಿ ಹುಟ್ಟಿದ್ದವರಾದರೆ, ಸರ್ಕಾರಿ ಶಾಲೆಗಳ ಮಹತ್ವ ಎಷ್ಟು ಎನ್ನುವುದು ನಿಮಗೆ ಗೊತ್ತೆ ಇರುತ್ತದೆ. ತಮ್ಮ ಮಕ್ಕಳನ್ನು ಸೇರಿಸಲು ಪ್ರೈವೇಟ್ ಸ್ಕೂಲ್ಗಳನ್ನು ಹುಡುಕಿಹೋದ ಸಂದರ್ಭದಲ್ಲಿ ಅಬ್ಬಾ ನಮ್ಮಮ್ಮ ಅಪ್ಪ ಓದಿಸುವಾಗ ಇಷ್ಟೊಂದೆಲ್ಲಾ ಪ್ರಾಬ್ಲಮ್ಮೆ ಇರಲಿಲ್ಲ ಅಂತಾ ಮನಸ್ಸಲ್ಲೆ ಉದ್ಘಾರವನ್ನೂ ತೆಗದಿರುತ್ತೀರಿ.

ಈಗಿನ ಮಕ್ಕಳು ಒಂದನೇ ಕ್ಲಾಸಿಗೆ ಬರುವಷ್ಟರಲ್ಲಿ ಆಗುವ ಫೀಜಲ್ಲಿ, ಆಗೆಲ್ಲಾ ಡಿಗ್ರಿ ಮೇಲೆ ಇನ್ನೊಂದು ಕೋರ್ಸ್ ಸಹ ಓದಬಹುದಿತ್ತು. ಆದರೆ ಈಗ ಕಾಲ ಸರ್ಕಾರಿ ಶಾಲೆಗಳ ಕಾಲೆಳೆದಿದೆ. ಅಂತಹ ಸನ್ನಿವೇಶದಲ್ಲಿಯು ಸಹ ಕೆಲವೊಂದು ಪ್ರಬುದ್ಧ ಮನಸ್ಸುಗಳು ಸರ್ಕಾರಿ ಶಾಲೆಗಳ ಮೇಲೆ ಇನ್ನೂ ಸಹ ವ್ಯಾಮೋಹ ಇಟ್ಟುಕೊಂಡಿವೆ. ಅಷ್ಟೆಅಲ್ಲದೆ ಆದುನಿಕತೆಯ ಅದ್ವಾನಗಳ ನಡುವೆ, ಆಸರೆ ಸಿಗದೆ ನಿಂತಲ್ಲೆ ಹಿಂದುಕ್ಕಿಳಿದ ಶಾಲೆಗಳನ್ನು ಜೆಂಜಿ ಯುಗಕ್ಕೆ ಅಪ್ಡೇಟ್ ಮಾಡುತ್ತಿದ್ದಾರೆ. ಹೀಗೆ ಹೊಸತನ್ನು ಪಡೆದುಕೊಳ್ತಿರುವ ಸರ್ಕಾರಿ ಶಾಲೆಗಳನ್ನು ಗುರುತಿಸುವ ಪ್ರಯತ್ನದಲ್ಲಿ ಶಿವಮೊಗ್ಗದ ಕೆಆರ್ಪುರಂ ರೋಡ್ಗೆ ಹೊಂದಿಕೊಂಡ ರಸ್ತೆಯಲ್ಲಿರುವ ಕೆಆರ್ಪುರಂ ಸರ್ಕಾರಿ ಶಾಲೆ ಸಹ ಒಂದು..
Shivamogga KR Puram Govt School
ನಾಳೆ ಶಿವಮೊಗ್ಗದಲ್ಲಿ ಕರೆಂಟ್ ಇರಲ್ಲ! ಕೇಂದ್ರ ಕಾರಾಗೃಹ ಸೇರಿದಂತೆ ಹಲವೆಡೆ ಪವರ್ ಕಟ್!
ಇಲ್ಲಿನ ಶಾಲೆ ಹಿಂದೊಮ್ಮೆ ಹಳೇ ಶಿವಮೊಗ್ಗಕ್ಕೆ ಫೇಮಸ್ ಸ್ಕೂಲ್ ಆಗಿತ್ತು. ನಾನು ಸಹ ಅಲ್ಲೆ ಓದಿದ್ದು ಅನ್ನೋರು ಇವತ್ತು ಸಹ ಸಿಗ್ತಾರೆ. ನೀನೂ ಸಹ ಅಲ್ಲೆ ಓದಿದ್ದಾ ಅಂತಾ ಕೇಳಿ ತಿಳಿದುಕೊಳ್ಳುತ್ತಲೇ ಅಲ್ಲೊಂದು ಆಪ್ತ ಸ್ನೇಹ ಹುಟ್ಟಿಸುವಷ್ಟು ಪರಿಚಿತ ಈ ಶಾಲೆ.. ಸ್ವಲ್ಪ ವರುಷಗಳ ಕೆಳಗೆ, ಮುಂದಕ್ಕೆ ಹೋಗುವ ಪ್ರಪಂಚದ ಜೊತೆ ಸಲ್ಲದ ಖಾಸಗಿ ಕಾಂಪಿಟೇಷನ್ನ ಸುಳಿಯಲ್ಲಿ ಮರೆಯಾಗುತ್ತಿದ್ದ ಶಾಲೆ ಸರ್ಕಾರಿ ಅಧಿಕಾರಿ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿಯಿಂದ ಹೊಸತಾಗಿ ನಿಂತಿದೆ. ಬಡವರಿಂದ ಮಧ್ಯಮವರ್ಗದ ದುಡಿಯುವ ಮಂದಿಯ ಮಕ್ಕಳಿಗೆ ಈ ಶಾಲೆ ಅಕ್ಷರ ದಾಸೋಹದ ಕೇಂದ್ರವಾಗಿದೆ.
ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಳ್ಳುವುದು ಸಹ ಕಲೆ! ಈ ನಿಟ್ಟಿನಲ್ಲಿ ಅಗತ್ಯವಿದ್ದ ಓಡಾಟ, ವಿಚಾರಣೆ, ದಾಖಲಾತಿಗಳ ವ್ಯವಸ್ಥೆ ಕಲ್ಪಿಸಿಕೊಂಡ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಇದೆ. ಡಿಜಿಟಲ್ ಲೈಬ್ರರಿಯಿಂದ ಹಿಡಿದು ಮೂಲ ಸೌಕರ್ಯಗಳವರೆಗೂ ಪ್ರತಿಯೊಂದು ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ. ಓದಿನ ಜೊತೆಗೆ ಅನುಭವದ ಕಲಿಕೆಗೆ ಬೇಕಿರುವ ಸೌಲಭ್ಯಗಳನ್ನು ಶಾಲೆಗೆ ತರಲಾಗಿದೆ.

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ
ಹಾಗೆ ನೋಡಿದ್ರೆ 90 ವರ್ಷದ ಓಲ್ಡ್ ಸ್ಕೂಲ್ ಇದು. ಆರೋಗ್ಯವಂತ ಮನುಷ್ಯನ ಸಹಜ ವಯಸ್ಸಿನ ಗಡಿಯನ್ನ ತಲುಪಿದ್ದ ಶಾಲೆ, ಒಂದು ಹಂತಕ್ಕೆ ಇನ್ನೇನು ಅಂತ್ಯ ಬಂದೆ ಬಿಟ್ಟಿತು ಎಂದು ಏದುಸಿರುಬಿಡುವಂತೆ ಕಂಡಿತ್ತು.1935 ರಲ್ಲಿ ಶುರುವಾದ ಶಾಲೆ ಅಜ್ಜ, ಅಪ್ಪ ಮತ್ತು ತಾನು ಓದಿದ ಸ್ಕೂಲು ಹಾಗೆ ಬಿಟ್ಟರೆ, ಇತಿಹಾಸದ ಕುರುಹಾಗುತ್ತದೆ ಎಂದುಕೊಂಡ ಒಂದಷ್ಟು ಮಂದಿ ಶಾಲೆಗೆ ಏನು ಬೇಕು ನೋಡೋಣ..ಕೈಲಾದರೆ ಮಾಡೋಣ ಅಂತಾ ಮೈ ಕೊಡವಿ ನಿಂತರು. ಆಹೊತ್ತಿಗೆ ಶಾಲೆಯಲ್ಲಿದ್ದ ಶಿಕ್ಷಕ ವೃಂದ, ಎಸ್ಡಿಎಂಸಿ ಸದಸ್ಯರು, ಸಿಬ್ಬಂದಿ ಎಲ್ಲರೂ ಏನಾದರೂ ಮಾಡೋಣ ನಡೀರಿ ಅಂತಾ ಕೈಗೆ ಕೈ ಜೋಡಿಸಿದರು. ಅದೆಹೊತ್ತಿಗೆ ಒಬ್ಬ ಮಹಿಳಾ ಅಧಿಕಾರಿ, ನಿಂತರೆ ಆಗದು, ಆಲ್ರೈಟ್ ಮುಂದಕ್ಕೆ ಹೋಗಣ ಎಂದು ಸರ್ಕಾರಿ ಶಾಲೆಗೆ ಅಗತ್ಯವಿದ್ದ ಸೌಲಭ್ಯ ಒದಗಿಸಲು ಠೊಂಕ ಕಟ್ಟಿ ನಡೆದರು. ಹೀಗೆ ಆರಂಭವಾದ ಪ್ರಯತ್ನಗಳಿಂದ 800 ವಿದ್ಯಾರ್ಥಿಗಳಿಂದ ಇಳಿದು ಎರಡಂಕಿಯ ಹಾಜರಾತಿಗೆ ಸೀಮಿತವಾಗಿದ್ದ ಶಾಲೆ ಮತ್ತೆ ಇದೀಗ ಮುನ್ನೂರು ನಾನೂರು ಮಕ್ಕಳ ನಲಿವಿನ ಕೇಂದ್ರವಾಗಿದೆ. ಇಲ್ಲಿನ ಗೋಡೆಗಳು ಮಕ್ಕಳ ಆಟ ಹುಡುಗಾಟ ಕೂಗಾಟ ಕೇಳಿ ನಗುತ್ತಿವೆ.ಸಂಭ್ರಮಿಸುತ್ತಿವೆ.
20 ಸೆಕೆಂಡ್ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!
Shivamogga KR Puram Govt School
ಏನಿರಿಲಿಲ್ಲ ಎಂದು ಕಳೆದ ಕಾಲದ ಕೊರತೆಗಳನ್ನು ಎಣಿಸುವುದಕ್ಕಿಂತ! ಯಾರ್ಯಾರ ಪ್ರಯತ್ನಗಳಿಂದ ಏನೇನೆಲ್ಲಾ ಬಂತು ಎಂಬುದನ್ನು ನೋಡುವುದಾದರೆ, ಶಾಲೆಯ ಜೀವ ಉಳಿಸುವ ಪ್ರಯತ್ನದ ಆರಂಭದ ಹೊತ್ತಿನಲ್ಲಿ ಅಂದಿನ DDPI ಸುಮಂಗಲ BEO ನಾಗರಾಜ್ ಸರ್ಕಾರಿ ಶಾಲೆಯನ್ನು ಗೌರ್ಮೆಂಟ್ ಸ್ಕೂಲ್ ಆಗಿಸಿದರು. ಅರ್ಥಾತ್ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಆರಂಭಿಸಲು ಅನುಮತಿ ಒದಗಿಸಿದರು. ಮೊದಲನೇ ಹಂತದಲ್ಲಿ LKG . UKG ಮತ್ತು ಒಂದನೇ ತರಗತಿ ಆರಂಭವಾಯಿತು. ಪ್ರಾರಂಭದ ಹಂತಗಳಲ್ಲಿ ಇಂಗ್ಲೀಷ್ ಮೀಡಿಯಂಗೂ ಮಕ್ಕಳನ್ನು ಕರೆತರುವುದು ಕಷ್ಟವಾಗಿತ್ತು. ಅದೆಹೊತ್ತಿಗೆ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದ ಶಿಕ್ಷಕ ರಾಮಾಚಾರಿ ತಮ್ಮ ಶಿಕ್ಷಕ ವೃಂದ ಜೊತೆಗೆ ಸ್ಥಳೀಯ ಪೋಷಕರನ್ನು ಸೇರಿಸಿಕೊಂಡು ಕರಪತ್ರಗಳನ್ನು ಹಂಚಿ ಶಾಲೆಯ ಪ್ರಚಾರ ಆರಂಭಿಸಿದರು. ಮೂಲಭೂತ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳನ್ನ ಭೇಟಿಯಾದರು. ಅಂದಿನ ಶಾಸಕ ಕೆ ಎಸ್ ಈಶ್ವರಪ್ಪ. ಅಂದಿನ ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಅಣ್ಣಪ್ಪ ಹೀಗೇ ಹಲವರು ಶಾಲೆಗೆ ಬೇಕಿದ್ದ ಸೌಲಭ್ಯಗಳನ್ನು ಒದಗಿಸಲು ನೆರವಾದರು. ಹೀಗೆ ಕೈಚಾಚಿದ ನೆರವಿನ ಹಸ್ತಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿತು ಇಂದಿನ DDPI ಬಸವರಾಜ್ BEO ರಮೇಶ್. ಎಸ್ಡಿಎಂಸಿ ಅಧ್ಯಕ್ಷರು ಸಹ ಆಗಿರುವ ಶಾಸಕ ಎಸ್ಎನ್ ಚನ್ನಬಸಪ್ಪ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯದ ಅನುದಾನಗಳು ಈ ಶಾಲೆಗೆ ಬರುತ್ತಿದೆ. ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಹಿಂದಿನ ಕೆಲಸಗಳನ್ನು ಅಚ್ಚುಕಟ್ಟಾಗಿ ಇನ್ನೊಂದು ಮೈಲುಗಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕುಂಟು ಕುದುರೆ ಎದ್ದು ನಿಂತರೆ ಸಾಲದು, ಅಶ್ವಮೇದ ಕುದುರೆಯಾಗಿ ಓಡಬೇಕು ಎಂದಿದ್ದರಂತೆ ಅಂದಿನ ಡಿಡಿಪಿಐ ಸುಮಂಗಲರವರು. ಅವರ ಮಾತಿನಂತೆ ಇವತ್ತಿಗೆ ಕೆಆರ್ಪುರಂ ಶಾಲೆ ಅಶ್ವಮೇದದ ಕುದುರೆಯಂತೆ ಓಡುತ್ತಿದೆ.
ರಾತ್ರಿ ನಿಲ್ಲಿಸಿದ್ದ ಗಾಡಿ ಬೆಳಿಗ್ಗೆಯಷ್ಟರಲ್ಲಿ ನಾಪತ್ತೆ! ಸಾಗರ ರೋಡಲ್ಲಿ ಕತ್ತಲು ಕಳೆಯುವಷ್ಟರಲ್ಲಿ ಏನಾಯ್ತು!
ಸೌಲಭ್ಯ ಕೊಡಿ, ಸ್ಟ್ರೆಂತ್ ತೋರಿಸ್ತಿವಿ ಎಂದು ಹೋರಾಡಿದ ಶಿಕ್ಷಕರಿಂದ ಹಿಡಿದು, ಶಾಲೆಯ ಸ್ಥಳೀಯರ ಪೋಷಕರವರೆಗೂ ಪ್ರತಿಯೊಬ್ಬರು ಶಾಲೆಗಾಗಿ ದುಡಿದಿದ್ದಾರೆ. ಇವರಲ್ಲಿ ಯಾರ ಹೆಸರು ಮೆರೆತರೂ ತಪ್ಪಾಗುತ್ತದೆ ಎನ್ನುತ್ತಾರೆ ಶಾಲೆಯ ಪೋಷಕರಲ್ಲಿ ಒಬ್ಬರಾದವರು. ಹೆಸರಿಸದ ಹಲವರ ಪ್ರಯತ್ನಗಳ ಫಲವಾಗಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಆದ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎನಿಸಿಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂಶ್ರೀ ಯೋಜನೆಗೂ ಆಯ್ಕೆಯಾಗಿದೆ.
ಹೇಳಿಕೇಳಿ ಹಳೆ ಶಿವಮೊಗ್ಗ ಜನಸಂಖ್ಯೆಯಲ್ಲಿ ತುಸುದೊಡ್ಡದು..ಓಣಿ, ಕೇರಿ, ವಠಾರ, ಕಾಂಪೌಂಡ್ ಕಲ್ಪನೆಗಳಿರುವ ಇಲ್ಲಿನ ಮಕ್ಕಳಿಗೆ ಕೆಆರ್ ಪುರಂ ಸ್ಕೂಲ್ (Shivamogga KR Puram Govt School) ದೊಡ್ಡ ಅವಕಾಶದ ದೋಣಿ. ಇದ್ದುದರಲ್ಲಿ ತನ್ನೆಲ್ಲಾ ಸೌಕರ್ಯಗಳನ್ನು ಒದಗಿಸುತ್ತಿರುವ ಈ ಶಾಲೆಗೆ ನೀರು, ಬೋರು, ಅಂತಾ ಇನ್ನೊಂದಿಷ್ಟು ವ್ಯವಸ್ಥೆಗಳು ಆಗಬೇಕಿದೆ. ಸಣ್ಣಪುಟ್ಟದ್ದನ್ನ ಇಲ್ಲಿನ ಶಿಕ್ಷಕ ವೃಂದ ಎಸ್ಡಿಎಂಸಿ ಸದಸ್ಯರೇ ನೋಡಿಕೊಳ್ತಿದ್ದಾರೆ. ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳ ಮುಂದೆ ಇನ್ನೊಂದಿಷ್ಟು ಒಂದಷ್ಟು ಮನವಿಗಳಿಗೆ.. ಅವುಗೆಳೆಲ್ಲಾ ಪೂರೈಸಿದರೆ, ಸ್ಕೂಲು ಇನ್ನಷ್ಟು ಲಕಲಕ.

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
ಹೊಸ ಕ್ಲಾಸ್, ಮೇಜು ಕುರ್ಚಿ, ಡೆಸ್ಕು,ಅಪ್ಡೇಟೆಡ್ ಇನ್ಸ್ಟುಮೆಂಟ್ಸ್ ಜೊತೆಜೊತೆಗೆ ಸಾಕಷ್ಟು ವ್ಯವಸ್ಥೆಗಳು ಬಂದಿವೆ. ಶಾಲೆ ಆವರಣಕ್ಕೆ ಒಳಹೊಕ್ಕರೆ, ಇಂಗ್ಲೀಷಿನ ಕೂಗಿನ ಜೊತೆಗೆ ಕನ್ನಡದ ಕಾವ್ಯವೂ ಕೇಳಿಸುತ್ತದೆ. ಕೆಆರ್ಪುರಂ, ಭರ್ಮಪ್ಪ ನಗರ, ಎಂಕೆಕೆ ರೋಡ್, ಓಟಿ ರೋಡ್, ಕ್ಲಾರ್ಕ್ ಪೇಟೆ, ಸೀಗೇಹಟ್ಟಿ , ಸಿದ್ದಯ್ಯ ರೋಡ್, ಆರ್ಎಂಎಲ್ನಗರ ಹೀಗೆ ಸುತ್ತಮುತ್ತಲಿನ ಕಡೆಯಿಂದಲೂ ಇಲ್ಲಿಗೆ ಮಕ್ಕಳು ಬರುತ್ತಿದ್ದಾರೆ. ಮುಂದಿನವರ್ಷಕ್ಕೂ ಡಿಮ್ಯಾಂಡ್ ಜೋರಿದೆ.
Shivamogga KR Puram Govt School
ಕೆಆರ್ ಪುರಂ ಶಾಲೆಯ ಕನಸನ್ನೆ ತನ್ನ ಕನಸಾಗಿಕೊಂಡಿದ್ದ ಶಿಕ್ಷಕ ರಾಮಾಚಾರಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಇವರನ್ನ ಇಡೀ ಶಾಲೆಯ ಸಿಬ್ಬಂದಿ, ಮಕ್ಕಳು ಅಕ್ಷರಶಃ ಭಾವಪೂರ್ಣವಾಗಿ ಬಿಳ್ಗೊಟ್ಟಿದ್ದು, ಅವರ ಪರಿಶ್ರಮಕ್ಕೆ ಸಿಕ್ಕ ಸಂತೋಷದ ಆತ್ಮತೃಪ್ತಿಯಾಗಿತ್ತು. ಪಾಂಪ್ಲೆಟ್ಸ್ ಹಂಚಿ ನಿಮ್ಮ ಮಕ್ಕಳನ್ನು ಉತ್ತಮ ಶಿಕ್ಷಿತನಾಗಿಸುವ ಜವಾಬ್ದಾರಿ ನಮ್ಮ ಹೆಗಲಿಗೆ ಹಾಕಿ ಎಂದು ವಿಶ್ವಾಸದ ಕೋರಿಕೆ ಇಟ್ಟರ ಶಿಕ್ಷಕರಂತೆಯೇ ಇಲ್ಲಿ ನಮ್ಮದೊಂದು ಅಳಿಲು ಸೇವೆ ಇರಲಿ ಎಂದು ನೆರವಾದ ಬಹಳಷ್ಟು ಹೆಸರುಗಳಿವೆ…ಅವರೆಲ್ದದ್ದೂ ನೆನಾಪಾದಾಗ ನಾವೇ ನಮ್ಮನ್ನು ಗುರುತಿಸಿಕೊಳ್ಳಲಾದಿತು ಎಂಬಂತಹ ಮನೋಭಾವ..
ಲಾಸ್ಟ್ ಬಟ್ ನಥಿಂಗ್ ಇನ್ ಲಿಸ್ಟ್ ಎನ್ನುವಾಗೆ,, ಓದಿದ ಕಾಲೇಜನ್ನು ನಾವೆಲ್ಲಾ ನಾನಾ ಕಾರಣಕ್ಕೆ ನೆನಪಿಡುತ್ತೇವೆ. ರೀಯೂನಿಯನ್ ಆಗೋಣವೆಂದು ಮತ್ತೆ ಒಟ್ಟಾಗಲು ಹಂಬಲಿಸುತ್ತೇವೆ. ಹಾಗೆ ನಾವು ಓದಿದ ಶಾಲೆಯನ್ನು ನೆನಯಬೇಕಿದೆ. 90 ವರುಷ ಮಕ್ಕಳಿಗಾಗಿಯೇ ದುಡಿದ ಶಾಲೆಗೆ ಮತ್ತೊಮ್ಮೆ ಮಕ್ಕಳಂತೆಯೇ ಹೋಗಿ ಬರುವ ಅವಕಾಶ ಇಲ್ಲಿ ಓದಿದವರಿಗೆ ಖಂಡಿತ ಇದೆ. ಹಾಗೆ ಹೋಗಿ ಬರುವಾಗ ಎದೆ ಭಾರವೆನಿಸಿ, ಮನ ಗಾಢಗೊಳ್ಳುವುದು ಗ್ಯಾರಂಟಿ.. ಏಕೆಂದರೆ..ಅಂದಿನ ಶಾಲೆ..ಅಂದಿನಂತೆಯೇ ಇದೆ…ಹೊಸ ರೂಪದಲ್ಲಿ…
ಪರಸ್ಪರ ಸೀದಾಸಿದಾ ಗುದ್ದಿಕೊಂಡ ಗಜಾನನ ಬಸ್-ಆಯಿಲ್ ಟ್ಯಾಂಕರ್! ಹೊಸನಗರದ ಕೋಡೂರು ಸಮೀಪ ನಡೆದ ಘಟನೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.









