ಒಂದೇ ದಿನ 2 ಘಟನೆ | ಕಾಲೇಜಿನ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸ್ಥಿತಿ ಗಂಭೀರ!

A student was seriously injured after falling from the terrace of a college building in Shivamogga. ಶಿವಮೊಗ್ಗದ ಕಾಲೇಜೊಂದರ ಕಟ್ಟಡದ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಂದೇ ದಿನ 2 ಘಟನೆ | ಕಾಲೇಜಿನ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸ್ಥಿತಿ ಗಂಭೀರ!

SHIVAMOGGA  |   Dec 5, 2023 |  ಖಾಸಗಿ ಕಾಲೇಜೊಂದರ ಕಟ್ಟಡದಿಂದ ವಿದ್ಯಾರ್ಥಿನಿಯೊಬ್ಬರು ಬಿದ್ದು ಮೃತ ಪಟ್ಟ ಘಟನೆ ಬೆನ್ನಲ್ಲೆ ಮತ್ತೊಬ್ಬ ವಿದ್ಯಾರ್ಥಿಯು ಮಹಡಿ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. 

ಶರಾವತಿ ನಗರದಲ್ಲಿರುವ ಕಾಲೇಜಿನಲ್ಲಿ ಇವತ್ತು ವಿದ್ಯಾರ್ಥಿನಿ ಪರೀಕ್ಷೆ ವೇಳೆ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು. ಅದೇ ಸಂದರ್ಭದಲ್ಲಿ ಅತ್ತ ಇನ್ನೊಂದು ಪ್ರತಿಷ್ಟಿತ ಕಾಲೇಜಿನಲ್ಲಿ ಇಂತಹುದ್ದೆ ಒಂದು ಘಟನೆ ನಡೆದಿದೆ ಎಂದು ವರದಿಯಾಗಿದೆ. 

READ : ಕಾಲೇಜಿನ ಕಟ್ಟದಿಂದ ಬಿದ್ದು ವಿದ್ಯಾರ್ಥಿನಿ ಸಾವು! ಶಿಕ್ಷಣ ಸಂಸ್ಥೆಯ ಎದುರು ಪೋಷಕರ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ  21 ರಚನಾ ಎಂಬಾಕೆ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ, ಈಕೆ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.