ಜಾತಿಗಣತಿಗೆ ಬಂದಿದ್ದ ಮಹಿಳೆ ಮೇಲೆ ನಾಯಿ ದಾಳಿ! ರವಿವರ್ಮ ಬೀದಿಯಲ್ಲಿ ನಡೆದಿದ್ದೇನು?

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಶಿವಮೊಗ್ಗದಲ್ಲಿ ಜಾತಿ ಸಮೀಕ್ಷೆಗೆ ಮನೆಮನೆಗೆ ತೆರಳುತ್ತಿದ್ದ ಸಿಬ್ಬಂದಿಯೊಬ್ಬರಿಗೆ ನಾಯಿಯೊಂದು ಕಡಿದು ಗಾಯಗೊಳಿಸಿದೆ. ಹಳೆ ಶಿವಮೊಗ್ಗದ ರವಿವರ್ಮ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಸಿಬ್ಬಂದಿ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Stray Dog Attacks Government Employee  at jati ganati  
Stray Dog Attacks Government Employee  at jati ganati

ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ (First Division Assistant) ಉಮಾರಾಣಿ  ಶಿವಮೊಗ್ಗದ ರವಿವರ್ಮ ಬೀದಿ ಮತ್ತು ಆಜಾದ್ ನಗರದಲ್ಲಿ ಸಮೀಕ್ಷೆ ಕೈಗೊಂಡಿದ್ದರು. ಈ ವೇಳೆ ರವಿವರ್ಮ ಬೀದಿಯಲ್ಲಿ ನಾಯಿಯೊಂದು ಇವರ ಮೇಲೆ ದಾಳಿ ನಡೆಸಿದೆ. ಅಲ್ಲದೆ  ಉಮಾರಾಣಿ ಅವರ ಎಡಗಾಲಿಗೆ ನಾಯಿ ಕಚ್ಚಿದೆ. ಕಚ್ಚಿದ ಭಾಗದಲ್ಲಿ ರಕ್ತ  ಹರಿದಿದೆ. ಅಷ್ಟೊತ್ತಿಗೆ ಅಲ್ಲಿದ್ದವರು ನೆರವಿಗೆ ಬಂದು ನಾಯಿಯನ್ನು ಓಡಿಸಿದ್ದಾರೆ. 

- Advertisement -

ಈ ನಡುವೆ ನಾಯಿ ಕಚ್ಚಿದ್ರೂ ಗಣತಿ ಕಾರ್ಯವನ್ನು ನಿಲ್ಲಿಸದ ಸಿಬ್ಬಂದಿ ದಿನದ ಗಣತಿ ಪೂರ್ಣಗೊಳಿಸಿದ್ದಾರೆ. ಬಳಿಕ ಅವರ ಸಹೋದ್ಯೋಗಿಗಳೊಂದಿಗೆ ಉಮಾರಾಣಿ ಅವರು ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. 

Stray Dog Attacks Government Employee  at jati ganati  
Stray Dog Attacks Government Employee  at jati ganati

Stray Dog Attacks Government Employee  at jati ganati  

Shimoga Stray Dog Attack, Social and Educational Survey Staff Attacked, Meggan Hospital Treatment, Dog bite incident Shimoga, Report stray dogs Shimoga,  ಶಿವಮೊಗ್ಗ ಬೀದಿ ನಾಯಿ ದಾಳಿ, ಸರ್ಕಾರಿ ಸಿಬ್ಬಂದಿ ಗಾಯ, ಗಣತಿ ಕಾರ್ಯ, ಸಾಮಾಜಿಕ ಸಮೀಕ್ಷೆ, ಮೆಗ್ಗಾನ್ ಆಸ್ಪತ್ರೆ, ಆಜಾದ್ ನಗರ, Stray Dog Attacks

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *