KARNATAKA NEWS/ ONLINE / Malenadu today/ Oct 12, 2023 SHIVAMOGGA NEWS
ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ. ಬೆಳಗಾವಿಯಲ್ಲಿ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯಬೇಕೆಂದು ದೊಡ್ಡ ಸೌಧ ಕಟ್ಟಿದ್ದೇವೆ..ಬೆಳಗಾವಿಯಲ್ಲಿ ಅಧಿವೇಶನ ವರ್ಷಕ್ಕೊಮ್ಮೆ ನಡೆಸಬೇಕು ಎಂಬ ಒತ್ತಾಯ ನಮ್ಮದು, ಸರ್ಕಾರ ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕು ಎಂದಿದ್ದಾರೆ..
ರಾಜ್ಯದೆಲ್ಲೆಡೆ ಅನಿಯಮಿತ ಲೋಡ್ ಶೆಡ್ಡಿಂಗ್ ಆಗ್ತಿದೆ ಅದರಲ್ಲಿಯು ರೈತರ ಪಂಪಸೆಟ್ ಗೆ ಮೂರು ನಾಲ್ಕು ಗಂಟೆಯ ಕರೆಂಟ್ ಕೂಡ ಸಿಗ್ತಿಲ್ಲ. ಬರಗಾಲಕ್ಕೆ ತುತ್ತಾದ ನಮ್ಮ ರೈತರು ಪಂಪ್ ಸೆಟ್ ಮೂಲಕ ನೀರು ಹಾಯಿಸಿ ಅಲ್ಪಸಲ್ಪ ಬೆಳೆ ಬೆಳೆಯೋಣ ಎಂದುಕೊಂಡಿದ್ದರು. ಅದಕ್ಕೂ ಸಂಕಷ್ಟ ಬಂದಿದೆ. ಈ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಇನ್ನೂ ರಾಜ್ಯಪ್ರವಾಸದ ಬಗ್ಗೆ ಮಾತನಾಡಿದ ಬಿಎಸ್ವೈ ಈಗಾಗಲೇ ರಾಜ್ಯಪ್ರವಾಸ ಮಾಡಬೇಕಿತ್ತು. ಆದರೆ ಹಬ್ಬಗಳ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದೆ. ಮೂರು ನಾಲ್ಕು ದಿನಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಕಾವೇರಿ ವಿಚಾರದಲ್ಲಿ ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ಹೋಗುವಂತ ಅಗತ್ಯವಿಲ್ಲ. ಆದರೆ ಈ ವಿಚಾರದಲ್ಲಿ ತೆಗೆದುಕೊಂಡಿರುವ ತೀರ್ಮಾನ ಸಮಾಧಾನ ತಂದಿಲ್ಲ. ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಒಳಿತು ಎಂದು ತಿಳಿಸಿದ್ದಾರೆ
ಇನ್ನಷ್ಟು ಸುದ್ದಿಗಳು
