ಕಾಂಗ್ರೆಸ್ ಸರ್ಕಾರ ತೊಲಗಿದಾಗಲೇ ದಸರಾ, ಗಣಪತಿ ಹಬ್ಬಗಳಿಗೆ ವಿಘ್ನ ನಿವಾರಣೆ: ರವಿ ಕುಮಾರ್

prathapa thirthahalli
Prathapa thirthahalli - content producer

State congress : ಶಿವಮೊಗ್ಗ: ದಸರಾ ಮತ್ತು ಗಣಪತಿಯಂತಹ ರಾಷ್ಟ್ರೀಯ ಹಬ್ಬಗಳಿಗೆ ಕಾಂಗ್ರೆಸ್ ಸರ್ಕಾರ ವಿಘ್ನ ತಂದಿದ್ದು, ಈ ಸರ್ಕಾರ ತೊಲಗಿದಾಗಲೇ ಈ ವಿಘ್ನ ನಿವಾರಣೆಯಾಗಲಿದೆ ಎಂದು ಬಿಜೆಪಿ ಎಂ ಎಲ್ ಸಿ, ಪರಿಷತ್ ಮುಖ್ಯಸಚೇತಕ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಡ್ಯದ ಮದ್ದೂರಿನಲ್ಲಿ ನಡೆದ ಗಣಪತಿ ಮೆರವಣಿಗೆ ಗಲಾಟೆ ಪೂರ್ವನಿಯೋಜಿತ ಕೃತ್ಯವಾಗಿದೆ., ದುಷ್ಕರ್ಮಿಗಳು ಕರೆಂಟ್ ತೆಗೆದು, ಕಲ್ಲು ಮತ್ತು ದೊಣ್ಣೆಗಳನ್ನು ಸಂಗ್ರಹಿಸಿ ಗಲಭೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಹೇಳಿದರು. ಅನೇಕ ಮುಸಲ್ಮಾನರು ಈ ಹಬ್ಬದ ಸಂದರ್ಭದಲ್ಲಿ  ಈ ರೀತಿ ಗಲಾಟೆ ಆಗಬಾರದು ಎಂದು ಹೇಳಿದ್ದರು  ಆದರೂ, ಕೆಲವು ಕಿಡಿಗೇಡಿಗಳಿಂದ ಈ ಘಟನೆ ನಡೆದಿದೆ. ಗಣೇಶ ಉತ್ಸವಕ್ಕೆ ಮತ್ತು ಮೆರವಣಿಗೆಗೆ ತೊಂದರೆ ನೀಡಲು ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ, ಏಕೆಂದರೆ ಗೋ ಕಳ್ಳತನ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುತ್ತಿದೆ ಎಂದು ಆರೋಪಿಸಿದರು. ಇದೇ ರೀತಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಲ್ಲಿ ಭಾಗಿಯಾದವರ ಮೇಲಿನ ಕೇಸುಗಳನ್ನು ಸಹ ವಾಪಸ್ ಪಡೆದಿದೆ ಎಂದು ಹೇಳಿದರು.

State congress : ಭದ್ರಾವತಿ ಶಾಸಕರು ಧರ್ಮ ಬದಲಿಸಲು ದಿನಾಂಕ ನಿಗದಿ ಪಡಿಸಲಿ

ಭದ್ರಾವತಿ ಶಾಸಕರು ಬೆಳೆಯಲು ಹಿಂದೂಗಳ ಕೊಡುಗೆ ಬಹಳಷ್ಟಿದೆ, ಆದರೆ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವುದರ ಬಗ್ಗೆ  ಮಾತನಾಡುತ್ತಿದ್ದಾರೆ. ಅವರು ಆದಷ್ಟು ಬೇಗ ಧರ್ಮ ಬದಲಾಯಿಸಲು ದಿನ ನಿಗದಿ ಮಾಡಲಿ ಎಂದು ರವಿಕುಮಾರ್​ ಆಗ್ರಹಿಸಿದರು. ಅಲ್ಲದೆ, “ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂದು ಹೇಳುವುದಾದರೆ ಅದು ಯಾರದು?” ಎಂದು ಪ್ರಶ್ನಿಸಿದ ರವಿ ಕುಮಾರ್, ರಾಜ್ಯದಲ್ಲಿ ಸಿದ್ದರಾಮಯ್ಯನವರ ಆಡಳಿತ ಟಿಪ್ಪುವಿನ ಆಡಳಿತದಂತೆ ನಡೆಯುತ್ತಿದೆ ಎಂದು ಹೇಳಿದರು.

State congress ಚಿತ್ರದುರ್ಗದಲ್ಲಿ ಗಣಪತಿ ಮೆರವಣಿಗೆಗೆ ಡಿಜೆ ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, “ನಾವು ಶವಯಾತ್ರೆ ಮಾಡುತ್ತಿದ್ದೇವೆಯೇ?” ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಗುತ್ತಿಗೆ ಮತ್ತು ವಸತಿಯಲ್ಲಿ ಮೀಸಲಾತಿ ಜಾರಿಗೆ ತಂದಿದೆ. ಹಾಗೆಯೇ, ಮತಾಂತರ ನಿಷೇಧ ಕಾಯಿದೆ ವಾಪಸ್ ಪಡೆಯುವ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ರಾಜ್ಯ ಸರ್ಕಾರ ತಕ್ಷಣ ತನ್ನ ಹಿಂದೂ ವಿರೋಧಿ ಧೋರಣೆಯನ್ನು ಬದಲಾಯಿಸಬೇಕು ಎಂದು ರವಿ ಕುಮಾರ್ ಒತ್ತಾಯಿಸಿದರು.

Share This Article