ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 6 2025: ಶಿವಮೊಗ್ಗ ಊರುಗಡೂರು ಬಳಿಯಲ್ಲಿ ನಿನ್ನೆ ದಿನ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ನಡೆದಿದ್ದೇನು ಎಂಬುದನ್ನು ಗಮನಿಸುವುದಾದರೆ, ಎಸ್ಪಿ ಮಿಥುನ್ ಕುಮಾರ್ ರವರ ಪ್ರಕಾರ, ಇಲ್ಲಿನ ನಿವಾಸಿ ಪರ್ದೀನ್ ಪ್ರಕರಣದ ಪ್ರಮುಖ ಆರೋಪಿ, ಈತ ಶಬ್ಬೀರ್ನ ಸಹೋದರಿಯನ್ನ ಮದುವೆಯಾಗಿದ್ದ. ಆದರೆ ಈ ನಡುವೆ ಇಬ್ಬರು ಬೇರೆ ಬೇರೆಯಾಗಿದ್ದರು. ಈ ವಿಚಾರದಲ್ಲಿ ಮಾತುಕತೆ ಮಾಡುತ್ತಿರುವಾಗ ಶಬ್ಬೀರ್ ಹಾಗೂ ಶಹಬಾಜ್ ಮೇಲೆ ಪರ್ದೀನ್ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನೂ ಶಬ್ಬಿರ್ ಶಹಬಾಜ್ರ ಸಹೋದರಿ ಹೇಳುವ ಪ್ರಕಾರ, ಫರ್ದೀನ್ರನ್ನ ಈಕೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ದುಡಿಮೆಗೆ ಹೋಗದ ಫರ್ದೀನ್ ಗಾಂಜಾ ಆಸಾಮಿಯಾಗಿದ್ದ. ಆ ಕಾರಣಕ್ಕೆ ಖುದ್ದು ಗೋವದಲ್ಲಿ ಕೆಲಸಕ್ಕೆ ಸೇರಿದ ಯುವತಿ, ತಾನೆ ಗಂಡನಿಗೆ ಹಣ ನೀಡುತ್ತಿದ್ದಳು. ಈ ಮಧ್ಯೆ ಸಂಸಾರ ಸರಿಬಾರದ ಹಿನ್ನೆಲೆಯಲ್ಲಿ ಪರಸ್ಪರ ದೂರ ಇದ್ದರು. ಇನ್ನೂ ಇದೇ ವಿಚಾರಕ್ಕೆ ಮಾತುಕತೆಗೆ ಕರೆದು ಸಹೋದರರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಯುವತಿಯ ಆರೋಪ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರ ನಡುವೆ ನಡು ಸರ್ಕಲ್ನಲ್ಲಿ ನಡೆದ ಘಟನೆ ಆತಂಕ ಹುಟ್ಟಿಸಿದೆ.
stabbing case in Uragadur Shivamogga
ಇದನ್ನು ಸಹ ಓದಿ : ಬಿಗ್ ಬಾಸ್ ನಲ್ಲಿ ಆಂಕರ್ ಜಾಹ್ನವಿ ಹೇಳಿದ್ರು ಆ ಸತ್ಯ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
