Soraba : ಅಚ್ಚರಿಯಾದರೂ ಸತ್ಯ! 14 ತಹಶೀಲ್ದಾರ್​ಗಳ ವರ್ಗಾವಣೆಯ ನಡುವೆ, ಸೊರಬದಲ್ಲಿ ಮತ್ತೆ ಮೂವರ ಟ್ರಾನ್ಸ್​ಫರ್​! ಕಾರಣ ?

Malenadu Today

 Soraba : ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷ 8 ತಿಂಗಳಲ್ಲಿ 14 ತಹಶೀಲ್ದಾರ್ ವರ್ಗಾವಣೆಯಾಗಿದ್ದಾರೆ. ಇದನ್ನ ಏಕೆ ಅಂತಾ ಕೇಳುವುದೋ? ಅಥವಾ ಯಾರು ಕಾರಣ ಎಂದು ತಿಳಿವುದೋ ಅಲ್ಲಿಯೆ ಜನರಿಗೆ ಅರ್ಥವಾಗ್ತಿಲ್ಲ. 

ಆ ಕಡೆ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರೊಮ್ಮೆ ಇದೆಕ್ಕೆಲ್ಲಾ ಶಾಸಕ ಕುಮಾರ್ ಬಂಗಾರಪ್ಪ ಕಾರಣ  ಎಂದು ಆರೋಪಿಸಿದ್ದರು. ಆದರೆ ಕುಮಾರ್ ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಆರೋಪ ಅಲ್ಲೆಗಳೆದಿದ್ದರು. ಇನ್ನೊಂದೆಡೆ ಸ್ಥಳೀಯ ಮಾಜಿ ಶಾಸಕ ಮಧು ಬಂಗಾರಪ್ಪ, ಇದೆಲ್ಲವೂ ಕಮಿಷನ್ ದಂಧೆಯ ಪರಿಣಾಮ ಎಂದೇ ದೂರಿದ್ದರು. 

*#SAVEVISL : ಭದ್ರಾವತಿ ವಿಐಎಸ್​ಎಲ್​ ಉಳಿಸಲು ಪ್ರಧಾನಿ ಮೋದಿಗೆ ದೇವೇಗೌಡರ ಪತ್ರ!

ಇದೆಲ್ಲದ ನಡುವೆ ಕಳೇದ ಶನಿವಾರ ಹಾಲಿ ಇದ್ದ ತಹಶೀಲ್ದಾರ್​ನ್ನ  ವರ್ಗಾವಣೆ ಮಾಡಲಾಗಿದೆ. ಅಷ್ಟೆ ಅಲ್ಲದೆ, ಅವರ ಜೊತೆಗೆ ಇದೀಗ   ಬೆನ್ನಲ್ಲೇ ಸೊರಬದ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್, ಎಫ್‌ಡಿಎ, ಆರ್‌ಐ ವರ್ಗಾವಣೆಗೆ ಸೂಚನೆ ನೀಡಲಾಗಿದೆ. 

ನಂಬಲೇಬೇಕು ಸೊರಬ ತಾಲೂಕಿನಲ್ಲಿ ಅಧಿಕಾರಿಗಳ ಎತ್ತಂಗಡಿ ಪರ್ವ ಮುಂದುವರಿದಿದೆ. ತಹಸೀಲ್ದಾರ್ ವರ್ಗಾವಣೆ ಬೆನ್ನಲ್ಲೇ ಮತ್ತೆ ಮೂವರ ವರ್ಗಾವಣೆಗೆ ಸೂಚನೆ ನೀಡಲಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಮನವಿ ಹಿನ್ನೆಲೆಯಲ್ಲಿ ಮೂವರ ವರ್ಗಾವಣೆಗೆ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಡಿಸಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಧಿಕೃತ ಪಿಡಿಎಫ್​ ಇಲ್ಲಿದೆ ನೋಡಿ ()

ಇನ್ನೂ ಕಳೆದ ನಾಲ್ಕು ವರ್ಷಗಳಲ್ಲಿ ಸೊರಬ ತಾಲ್ಲೂಕಿನಲ್ಲಿ ವರ್ಗಾವಣೆಯಾದ ತಹಶೀಲ್ದಾರ್​ರವರ ವಿವರ ಇಲ್ಲಿದೆ ನೋಡಿ

  • 1. ಸಿ ಪಿ ನಂದಕುಮಾರ್ 19/3/2018 ರಿಂದ 2/7/2018
  • 2. ಎಲ್ ಜಿ ಚಂದ್ರಶೇಖರ್ 
    2/7/2018 ರಿಂದ 14/8/2018
  • 3. ಹೂ ಕೈಕಸನ್
    14/8/ 2018 ರಿಂದ 31/10/2018
  • 4. ಜೆ ಬಿ ಶ್ರೀಧರ ಮೂರ್ತಿ
    31/10/2018 ರಿಂದ 9/11/2018
  • 5. ಮಮತಾ ಹೊಸಗೌಡರ್
    13/11/2018 ರಿಂದ 30/11/2018
  • 6. ಗೋವಿಂದರಾಜ್ ಬಿ ಎಂ
    1/12/2018 ರಿಂದ 21/01/2019
  • 7. ಎಂ ಪಿ ಕವಿರಾಜ್
    23/01/2019 ರಿಂದ 28/01/2019
  • 8. ಜೆ ಬಿ ಶ್ರೀಧರ ಮೂರ್ತಿ
    28/01/2019 ರಿಂದ 03/07/2019
  • 9. ಪಟ್ಟರಾಜಗೌಡ
    03//07/2019 ರಿಂದ 19/05/2020
  • 10. ನಫೀಸಾ ಬೇಗಂ
    19/05/2020 ರಿಂದ 7/9/2020
  • 11. ಶಿವಾನಂದ ಪಿ ರಾಣೆ
    7/9/2020 ರಿಂದ 
  • 12. ಮಂಜುಳಾ ಬಿ ಹಗದಾಳ್
  • 13. ಶೋಭಾ ಲಕ್ಷ್ಮಿ
  • 14. ಡಾ ಮೋಹನ್ ಭಸ್ಮೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article