KARNATAKA NEWS/ ONLINE / Malenadu today/ Jul 7, 2023 SHIVAMOGGA NEWS
ಶಿವಮೊಗ್ಗ : ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಪೋಸ್ಟ್ಗಳ ಮೇಲೆ ರಾಜ್ಯ ಪೊಲೀಸ್ ಇಲಾಖೆ ಕಣ್ಣಿಡಲು ಆರಂಭಿಸಿದೆ. ಇದಕ್ಕೆ ಪೂರಕ ಎಂಬಂತೆ ಸಾಂಗ್ಲಿಯಾನ ಚಂದು ಹೆಸರಿನ ಟ್ವಿಟ್ಟರ್ ಅಕೌಂಟ್ ಹ್ಯಾಂಡ್ಲರ್ನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಅವಹೇಳನಕಾರಿ ಟ್ವಿಟ್ ಮಾಡಿದ್ದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನ ಬಂಧಿಸಿ ಎಫ್ಐಆರ್ ಮಾಡಿದ್ದಾರೆ. ಖಾಸಗಿ ಸಂಶ್ಥೆಯ ಉದ್ಯೋಗಿ ಆಗಿರುವ ವ್ಯಕ್ತಿಯು ಮಹಿಳೆಯರ ಬಗ್ಗೆ ಅನಪೇಕ್ಷಿತ ಹಾಗೂ ಅಸಹ್ಯಕರವಾಗಿ ಕಾಮೆಂಟ್ಸ್ ಮಾಡುತ್ತಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
