sn channabasappa : ವಿಧಾನಭೆಯಲ್ಲಿ ಅಮಾನತಾದ ಶಾಸಕ ಕೆಡಿಪಿ ಸಭೆಗೆ ಬರಬಹುದೇ ಎಂದು ವಿಧಾನ ಸಭೆ ಸದಸ್ಯೆ ಬಲ್ಕೀಶ್ ಬಾನು ಪ್ರಶ್ನಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
sn channabasappa : ಸಭೆಯಲ್ಲಿ ನಡೆದಿದ್ದೇನು
ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚೆನ್ನಬಸಪ್ಪ ವಿಧಾನ ಸಭೆ ಕಲಾಪದ ವೇಳೆ ಅಮಾನತು ಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಗೆ ಆಹ್ವಾನದ ಮೇರೆಗೆ ಚನ್ನಬಸಪ್ಪ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಎತ್ತಿದ ಪ್ರಶ್ನೆ ಚೆನ್ನಬಸಪ್ಪರವರನ್ನು ಕೆರಳಿಸಿತು. ವಿಧಾನ ಸಭೆಯಲ್ಲಿ ಅಮಾನತ್ತಾದ ಶಾಸಕರು ಕೆಡಿಪಿ ಸಭೆಗೆ ಬರಬಹುದಾ ಎಂದು ಬಲ್ಕೀಶ್ ಬಾನು ಪ್ರಶ್ನಿಸಿದರು.ಇದರಿಂದ ಕುಪಿತರಾದ ಚನ್ನಬಸಪ್ಪ ನನಗೆ ಮೀಟಿಂಗ್ ನೋಟೀಸ್ ಕಳಿಸಿರುವ ಕಾರಣಕ್ಕೆ ಸಭೆಗೆ ಬಂದಿದ್ದೇನೆ. ಇದನ್ನು ಪ್ರಶ್ನಿಸಲು ನೀವ್ಯಾರು, ಕುಳಿತುಕೊಳ್ಳಿ ಎಂದು ಬಲ್ಕೀಶ್ ಬಾನು ವಿರುದ್ದ ಕೆಂಡಾಮಂಡಲರಾದರು.
ಈ ಸಂದರ್ಭದಲ್ಲಿ ಇಬ್ಬರ ನಡುವೆ ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಮಧ್ಯಪ್ರವೇಶಿದರು. ಈ ವೇಳೆ ಇದೇ ವಿಷಯಕ್ಕೆ ಚನ್ನಬಸಪ್ಪ ಹಾಗು ಗೋಪಾಲ ಕೃಷ್ಣ ಬೇಳೂರು ನಡುವೆ ಮಾತಿನ ಚಕಾಮಕಿ ನಡೆಯಿತು. ಅಷ್ಟೇ ಅಲ್ಲದೆ ಇಬ್ಬರೂ ಸಹ ನೀನು ಕುಳಿತುಕೋ ನೀನು ಕುಳಿತುಕೋ ಎಂದು ಏಕವಚನದಲ್ಲಿ ಬೈದಾಡಿಕೊಂಡರು. ನಂತರ ಶಾಸಕ ಚನ್ನಬಸಪ್ಪ ಸಭೆಯನ್ನು ಬಹಿಷ್ಕರಿಸಿ ಹೊರಡಲು ಮುಂದಾದರು. ಈ ವೇಳೆ ಸಚಿವ ಮಧು ಬಂಗಾರಪ್ಪ ಮಧ್ಯ ಪ್ರವೇಶಿಸಿದರು. ಈ ಹಂತದಲ್ಲಿ ಮತ್ತೆ ಸಚಿವ ಮಧು ಬಂಗಾರಪ್ಪ- ಶಾಸಕ ಚನ್ನಬಸಪ್ಪ ನಡುವೆ ವಾಗ್ವಾದ ನಡೆಯಿತು. ನಂತರ ಶಾಸಕರನ್ನು ಸಭೆಗೆ ಆಹ್ವಾನಿಸುವಂತೆ ನಾನೇ ತಿಳಿಸಿದ್ದೇ ಎಂದು ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪರನ್ನು ಸಮಾಧಾನಪಡಿಸಿದರು. ನಂತರ ಬಲ್ಕೀಶ್ ಬಾನು ಪರವಾಗಿ ಮಧು ಬಂಗಾರಪ್ಪ ಶಾಸಕ ಎಸ್ ಎನ್ ಚೆನ್ನಬಸಪ್ಪರವರಿಗೆ ಕ್ಷಮೆ ಕೇಳಿದರು,