shocking Vandalism 2 Arrested in Shivamogga Idol Incident ರಾಗಿಗುಡ್ಡ ನಾಗರ ವಿಗ್ರಹ ವಿವಾದ: ಇಬ್ಬರ ಬಂಧನ! ಇಲ್ಲಿವರೆಗೂ ಏನೆಲ್ಲಾ ನಡೆಯಿತು! 4 ಪಾಯಿಂಟ್ಸ್
Shivamogga news / ಶಿವಮೊಗ್ಗ, ಜುಲೈ 07, 2025: ನಗರದ ರಾಗಿಗುಡ್ಡ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ದೇವರ ವಿಗ್ರಹ ಕಿತ್ತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು ಈ ಸಂಬಂಧ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿದ್ದಾರೆ.
ಘಟನೆ ವಿವರ ಮತ್ತು ಬಂಧನ

ಶೇಷಾದ್ರಿಪುರಂನ 32 ವರ್ಷದ ಸೈಯದ್ ಅಹಮದ್ ಹಾಗೂ ಬಾಪೂಜಿ ನಗರದ 50 ವರ್ಷದ ರಹಮತ್ ಬಂಧಿತ ಆರೋಪಿಗಳು. ಬಂಗಾರಪ್ಪ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರ ಎದುರಿನ ಖಾಲಿ ಜಾಗದಲ್ಲಿ ಕಟ್ಟೆ ನಿರ್ಮಿಸಿ ಗಣಪತಿ ಮತ್ತು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ, ಕಟ್ಟಡದ ಕೆಳ ಮಹಡಿಯಲ್ಲಿದ್ದ ಆರೋಪಿಗಳು ನೇರವಾಗಿ ಬಂದು ನಾಗರ ವಿಗ್ರಹವನ್ನು ಕಿತ್ತುಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ವಿಡಿಯೋ ಮಾಡಿದ್ದ ಆರೋಪಿ ಸೈಯದ್ ವಿಗ್ರಹ ಕಿತ್ತುಹಾಕಿರುವುದನ್ನು ಒಪ್ಪಿಕೊಂಡಿದ್ದ. ಈ ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲರ್ಟ್ ಆದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಲ್ಲದೆ ಪರಿಸ್ಥಿತಿಯನ್ನು ಕಂಟ್ರೋಲ್ಗೆ ತೆಗೆದುಕೊಂಡರು
ಸ್ಥಳಕ್ಕೆ ಮುಖಂಡರ ಬೇಟಿ shocking Vandalism 2 Arrested in Shivamogga Idol Incident
ಈ ನಡುವೆ ಘಟನೆ ನಡೆದ ಸ್ಥಳಕ್ಕೆ ರಾಷ್ಟ್ರಭಕ್ತ ಬಳಗದ ಕೆಎಸ್ ಈಶ್ವರಪ್ಪ, ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪ, ಎಂಎಲ್ಸಿ ಡಾ ಧನಂಜಯ್ ಸರ್ಜಿ, ಕೆ.ಈ.ಕಾಂತೇಶ್, ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಸೇರಿದಂತೆ ಹಲವು ಮುಖಂಡರು ಭೇಟಿಕೊಟ್ಟು ಸ್ಥಳೀಯರನ್ನು ಸಮಾಧಾನ ಪಡಿಸಿದರು. ಅಲ್ಲದೆ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಮುಖಂಡರು, ಈ ಸಂಬಂಧ ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆಯ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.


ಎಸ್.ಪಿ.ಯವರ ಎಚ್ಚರಿಕೆ /shocking Vandalism 2 Arrested in Shivamogga Idol Incident
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಜಿ.ಕೆ.ಮಿಥುನ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಸಿಮೆಂಟ್ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ್ದ ನಾಗರ ವಿಗ್ರಹವನ್ನು ಕಿತ್ತು ಹಾಕಿರುವುದು ಕಂಡುಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಡಾವಣೆಯಲ್ಲಿ ಪ್ರಸ್ತುತ ಶಾಂತಿಯುತ ಪರಿಸ್ಥಿತಿ ಇದೆ ಎಂದಿದ್ದಾರೆ.
ಇದರ ಜೊತೆಯಲ್ಲಿಯೇ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿ ಶಾಂತಿಗೆ ಭಂಗ ತರಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
Two arrested in Shivamogga’s Ragi Gudda for alleged idol vandalism. Police confirm peace and warn against spreading false rumors. Read full details on the incident.
shocking Vandalism 2 Arrested in Shivamogga Idol Incident