Shivamogga Mar 9, 2024 ಮಲೆನಾಡು ಅಡಿಕೆ ಮಾರಾಟಗಾರರಿಗೆ ಸೀಸನ್ ಟೈಂನಲ್ಲಿ ಶಾಕ್ ಒಂದು ಎಂದುರಾಗಿದೆ. ಅಡಿಕೆ ಮಾರಾಟ ವಹಿವಾಟು ಕೈಗೆ ಹತ್ತುತ್ತಿರುವ ಸಂದರ್ಭದಲ್ಲಿದೆಯೇ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಿಗೆ ಕಂಪನಿಯೊಂದು ಮುಂದಾಗಿದೆ. ಇದರಿಂದ ದರ ಕುಸಿತದ ಆತಂಕ ಎದುರಾಗಿದೆ.
ಶ್ರೀಲಂಕಾದಿಂದ ಅಡಕೆ ಆಮದು ಸಂಬಂಧ ಬ್ರಿಟನ್‌ಮೂಲದ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ಒಪ್ಪಂದ ಮಾಡಿಕೊಂಡಿದೆ ಎಂದು ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಅದರ ವರದಿ ಪ್ರಕಾರ, ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ತಿಳಿಸಿದೆ.
ಈ ಹಿಂದೆ ವಿದೇಶದಿಂದ ಅಡಕೆ ಆಮದು ಮಾಡಿಕೊಂಡಿದ್ದಾಗ, ಅಡಿಕೆ ದರ ಕುಸಿದಿತ್ತು. ಇದೀಗ ಮತ್ತೊಮ್ಮೆ ಅಡಕೆ ಆಮದು ಬಗ್ಗೆ ಒಪ್ಪಂದಗಳು ನಡೆದಿದೆ. ಲಂಕಾದಿಂದ ಭಾರಿ ಪ್ರಮಾಣದಲ್ಲಿ ಆಮದಿಗೆ ಬ್ರಿಟನ್ ಕಂಪನಿ ಮುಂದಾಗಿದೆ. ಇದು ಅಡಕೆ ಬೆಳೆಗಾರರಿಗೆ ಬೆಲೆ ಕುಸಿತದ ಆತಂಕ ಮೂಡಿಸಿದೆ. ಕೇಜಿಗೆ 351 ರು.ಗಿಂತ ಕಡಿಮೆ ಇಲ್ಲದಂತೆ ಅಡಕೆ (ಸುಪಾರಿ) ಆಮದಿಗೆ ಮಾತ್ರವೇ ಕೇಂಧ್ರ ಸರ್ಕಾರ ಅವಕಾಶ ನೀಡಿದೆ. ಆದಾಗ್ಯು ಇದು ಅಡಿಕೆ ದರ ಕುಸಿತದ ಆತಂಕ ಮೂಡಿಸಿದೆ