shivamogga airport : ದೇಶದಲ್ಲಿಯೇ ಈ ಒಂದು ವಿಚಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕಿದೆ ಹೆಮ್ಮೆಯ ಗರಿ! ಬಿಎಸ್​ವೈ ಹೇಳಿದ ವಿಚಾರವೇನು?

Malenadu Today

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣ ಇದೇ ಫೆಬ್ರವರಿ 27 ಕ್ಕೆ ಉದ್ಘಾಟನೆಯಾಗಲಿದೆ ಎಂಬ ಸಮಾಚಾರ ಸ್ಪಷ್ಟವಾಗುತ್ತಿದೆ. ಇದರ ನಡುವೆ ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷತೆಗಳ ಬಗ್ಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮಾತನಾಡಿದ್ದಾರೆ. 

Shivamogga news : ವಿದ್ಯಾರ್ಥಿ ಸಾವಿಗೆ ನಿಜವಾಗಲೂ ಕಾರಣವಾಗಿದ್ದು ಏನು? ಆತನಿಗೆ ಹೊಡೆದಿದ್ದು ಯಾರು?

  1. ಶಿವಮೊಗ್ಗ ವಿಮಾನ ನಿಲ್ದಾಣ ದೇಶದಲ್ಲಿಯೇ ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವಾಗಿದೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿದ ಬಿಎಸ್​ ಯಡಿಯೂರಪ್ಪ,  449 ಕೋಟಿ  22 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಿಲ್ದಾಣವೂ ದೇಶದಲ್ಲಿ ಮಾದರಿಯಾಗಿದೆ. 
  2. ಇಷ್ಟೆ ಅಲ್ಲದೆ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ರಾತ್ರಿಯು ಸಹ ವಿಮಾನಗಳು ಲ್ಯಾಂಡಿಂಗ್​ ಮಾಡಬಹುದಾಗಿದೆ. ಅದಕ್ಕಾಗಿ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
  3. ಬೆಂಗಳೂರು ವಿಮಾನ ನಿಲ್ದಾಣ ಬಿಟ್ಟರೆ, ರಾಜ್ಯದಲ್ಲಿಯೇ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿಯನ್ನು ಶಿವಮೊಗ್ಗ ವಿಮಾನ ನಿಲ್ದಾಣ ಪಡೆದುಕೊಳ್ಳಲಿದೆ. 
  4. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೊದಲ ಪ್ಲೈಟ್​ ಸಂಚಾರ ಶಿವಮೊಗ್ಗ -ಬೆಂಗಳೂರು ನಡುವೆ ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿದೆ. 
  5. ಸ್ಟಾರ್​ ಏರ್​ಲೈನ್ಸ್​ ಕಂಪನಿ ಈ ಹಿಂದಿ ಬೆಳಗಾವಿಯಿಂದ ಶಿವಮೊಗ್ಗ, ಮೈಸೂರು, ಬೆಂಗಳೂರು ಪ್ರದೇಶಗಳಿಗೆ ವಿಮಾನ ಸಂಚಾರ ಆರಂಭಿಸುವ ಪ್ಲಾನ್​ ಮಾಡಿತ್ತು. ಈ ಸಂಬಂಧ ಇದೇ ಕಂಪನಿ ಶಿವಮೊಗ್ಗದಿಂದ ಏರ್​ಲೈನ್ಸ್​ ಸಂಚಾರ ಆರಂಭಿಸುವ ಸಾಧ್ಯತೆ ಇದೆ. 
  6. ಈಗಾಗಲೇ ನಿಲ್ದಾಣಕ್ಕೆ ಸಂಬಂಧಿಸಿದ ಉದ್ಯೋಗವಕಾಶಗಳು ಭರ್ತಿಯಾಗಿದ್ದು, ಉಳಿದಂತಹ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳೀಯರಿಗೆ ಹೌಸ್ ಕೀಪಿಂಗ್​ ವಿಭಾಗದಲ್ಲಿ ಉದ್ಯೋಗದ ಅವಕಾಶ ನೀಡಲಾಗುತ್ತದೆ
  7. ಶಿವಮೊಗ್ಗದ ವಿವಿಧ ಪ್ರವಾಸಿ ಸ್ಥಳಗಳನ್ನು ಗುರುತಿಸಿ, ವಿಮಾನ ಸಂಚಾರದ ಮೂಲಕ ಪ್ರವಾಸೋಧ್ಯಮದ ಅಭಿವೃದ್ಧಿಗೆ ಮುಂದಾಗುವ ಯೋಜನೆಯು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article