ಕುಂಸಿ ವೃದ್ದೆಯ ಕೊಲೆ ಪ್ರಕರಣ! ಕೊಂದಿದ್ದು ಮಗ ಅಲ್ಲ! ಮತ್ಯಾರು ?

prathapa thirthahalli
Prathapa thirthahalli - content producer

ಶಿವಮೊಗ್ಗ: ಡಿಸೆಂಬರ್ 01.2025 : ಶಿವಮೊಗ್ಗ ತಾಲೂಕು ಕುಂಸಿಯ ರಥಬೀದಿಯಲ್ಲಿ ಅಕ್ಟೋಬರ್ 2 ರಂದು ನಡೆದ 65 ವರ್ಷದ ವೃದ್ಧೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದು ಸುಮಾರು ಎರಡು ತಿಂಗಳ ಬಳಿಕ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಯ ಹಿಂದಿನ ಸತ್ಯ ಬಯಲಾಗಿದೆ. ಈ  ವೃದ್ದೆಯ ಹತ್ಯೆಗೆ ಕಾರಣ ಹಾಗೂ ಆರೋಪಿಗಳ ಮಾಡಿದ್ದ ಮಾಸ್ಟರ್​ ಪ್ಲಾನ್​ ಬಗ್ಗೆ ಎಸ್​ ಪಿ ಮಿಥುನ್​ ಕುಮಾರ್​ ಮಾಹಿತಿ  ನೀಡಿದ್ದಾರೆ. 

Shivamogga  ಏನಿದು ಪ್ರಕರಣ?

ಅಕ್ಟೋಬರ್ 2, 2025 ರಂದು ಕುಂಸಿಯ ರಥಬೀದಿಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ 65 ವರ್ಷದ ಬಸಮ್ಮ ಎಂಬ ವೃದ್ಧೆಯನ್ನು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದರು. ಕೊಲೆ ಮಾಡಿ ಯಾವುದೇ ಸುಳಿವನ್ನೂ ಬಿಡದೆ ಪರಾರಿಯಾಗಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.ಪ್ರಕರಣ ದಾಖಲಾದ ಬಳಿಕ, ಆರಂಭದಲ್ಲಿ ವೃದ್ಧೆಯ ಅಳಿಯ ಈಶ್ವರಪ್ಪ ಅವರು ಬಸಮ್ಮನವರ ಮಗ ರಮೇಶ್ ಅವರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು. ಪೊಲೀಸರು ರಮೇಶ್ ಅವರನ್ನು ವಿಚಾರಣೆ ನಡೆಸಿದರೂ, ಕೊಲೆ ಮಾಡಿದ ಕುರುಹು ಸಿಕ್ಕಿರಲಿಲ್ಲ.

ಈ ಪ್ರಕರಣದ ತನಿಖೆಯನ್ನು ಪೊಲೀಸ್ ಇನ್‌ಸ್ಪೆಕ್ಟರ್ ದೀಪಕ್ ಎಂ. ಎಸ್. ನೇತೃತ್ವದ ತಂಡ ಕೈಗೆತ್ತಿಕೊಂಡಿತ್ತು. ಒಂದೂವರೆ ತಿಂಗಳ ಕಾರ್ಯಾಚರಣೆಯ ಬಳಿಕ, ಪೊಲೀಸರು ಇಬ್ಬರು ಆರೋಪಿಗಳಾದ ಅಮಾನ್ ಸಿಂಗ್ (21) ಹಾಗೂ ವಿಕಾಸ್ (21) ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಘಾತಕಾರಿ ವಿಷಯವೆಂದರೆ, ಈ ಇಬ್ಬರು ಯುವಕರು ಬಸಮ್ಮನವರ ಪಕ್ಕದ ಮನೆಯವರೇ ಆಗಿದ್ದರು.

Shivamogga Two Arrested for Kumsi Elderly Woman s Murder
Shivamogga Two Arrested for Kumsi Elderly Woman s Murder

ಆಭರಣಕ್ಕಾಗಿ ವೃದ್ಧೆಯ ಹತ್ಯೆ

ಎಸ್​ ಪಿ ಮಿಥುನ್​ ಕುಮಾರ್​ ಹೇಳಿದಂತೆ ಆರೋಪಿಗಳಾದ ಅಮಾನ್ ಮತ್ತು ವಿಕಾಸ್ ಅವರು ಬಸಮ್ಮನವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯನ್ನು ಬಗೆಹರಿಸುವ ನೆಪದಲ್ಲಿ ಬಂದಿದ್ದರು. ಈ ವೇಳೆ ವೃದ್ಧೆ ಬಸಮ್ಮ ಇಬ್ಬರಿಗೂ ಪಲಾವ್ ನೀಡುವುದಾಗಿ ಹೇಳಿ ಅಡುಗೆ ಮನೆಗೆ ಹೋಗಿದ್ದಾರೆ.ಆರಂಭದಿಂದಲೂ ಬಸಮ್ಮನವರ ಮೈಮೇಲಿದ್ದ ಬಂಗಾರದ ಆಭರಣಗಳ ಮೇಲೆ ಕಣ್ಣಿಟ್ಟಿದ್ದ ಯುವಕರು, ಇದೇ ಸಮಯವನ್ನು ಬಳಸಿಕೊಂಡು ಇಬ್ಬರೂ ಸೇರಿ ವೃದ್ಧೆಯ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿದ್ದಾರೆ. ನಂತರ, ವೃದ್ಧೆಯ ಕಿವಿಯೋಲೆ, ಚೈನು ಮತ್ತು ಗುಂಡಿನ ಸರವನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.ಕೊಲೆ ಮಾಡಿ ಅನುಮಾನ ಬಾರದಂತೆ ತಪ್ಪಿಸಿಕೊಳ್ಳಲು ಆರೋಪಿಗಳು ಒಂದು ತಿಂಗಳ ಮೊದಲೇ ಸಂಚು ರೂಪಿಸಿದ್ದರು. ಕೊಲೆಯ ನಂತರ ಶವವನ್ನು ಚೀಲದಲ್ಲಿ ವೃದ್ದೆಯಮ್ಮಿ ಕಟ್ಟೆ ತೆಗೆದುಕೊಂಡು ಹೋಗಿ ಬೇರೆ ಕಡೆ ಹೋಗಿ ಹೂತು ಹಾಕಲು (ದಫನ್ ಮಾಡಲು) ಯೋಜಿಸಿದ್ದರು. ಅಲ್ಲದೆ, ಮನೆಯಲ್ಲಿ ಚೆಲ್ಲಿದ್ದ ರಕ್ತದ ಕಲೆಗಳನ್ನು ಒರೆಸಲು ಟರ್ಪೆಂಟೈನ್ ಆಯಿಲ್ ಅನ್ನು ಬಳಸಿದ್ದಾರೆ.

ಆದರೆ, ಮನೆಯ ಎದುರು ರಂಗೋಲಿ ಹಾಕುತ್ತಿದ್ದ ಯುವತಿಯೊಬ್ಬಳಿಗೆ ಈ ಚಟುವಟಿಕೆಗಳು ಅನುಮಾನ ಮೂಡಿಸಿ, ಅವರು ಬಸಮ್ಮ ಎಂದು ಕೂಗಿಕೊಂಡಿದ್ದಾರೆ. ಅಲ್ಲದೆ, ತಕ್ಷಣ ಬಸಮ್ಮನವರ ಮಗನಿಗೆ ಫೋನ್ ಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿಗಳು, ಮುಂದಿನ ಹಾಗೂ ಹಿಂದಿನ ಎರಡೂ ಬಾಗಿಲುಗಳನ್ನು ಲಾಕ್ ಮಾಡಿ, ಮನೆಯ ಅಟ್ಟ ಹತ್ತಿ, ಮೇಲಿದ್ದ ಕಿಟಕಿಯನ್ನು ಮುರಿದು ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಮಾಹಿತಿ ನೀಡಿದ ಎಸ್. ಪಿ. ಯವರು, ಒಂಟಿಯಾಗಿ ವಾಸಿಸುವ ವೃದ್ಧರಿಗೆ ಮನವಿ ಮಾಡಿದ್ದು, ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ನೆರೆಹೊರೆಯವರು ಕೂಡ ವೃದ್ಧರ ಯೋಗಕ್ಷೇಮವನ್ನು ವಿಚಾರಿಸಬೇಕು ಮತ್ತು ಅಂತಹ ಮನೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ, ಬೀಟ್ ಸಮಯದಲ್ಲಿ ಪೊಲೀಸರು ಭೇಟಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Shivamogga Two Arrested for Kumsi Elderly Woman s Murder

Shivamogga Two Arrested for Kumsi Elderly Woman s Murder
Shivamogga Two Arrested for Kumsi Elderly Woman s Murder
Share This Article