ಶಿವಮೊಗ್ಗ : ಜನವರಿ 1 ಶಿವಮೊಗ್ಗದಿಂದ ಹೊರಡುವ ಹಲವು ಟ್ರೈನ್ಗಳ ಸಂಚಾರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಯಾವೆಲ್ಲಾ ಟ್ರೈನ್ಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂಬುದನ್ನು ಗಮನಿಸುವುದಾದರೆ, ಅದರ ವಿವರ ಹೀಗಿದೆ.

ಶಿವಮೊಗ್ಗ, ಹೊಸ ವರ್ಷಾಚರಣೆ, ಎಸ್ ಪಿ ಹೇಳಿದ್ದೇನು
Shivamogga Train Timings ನೈಋತ್ಯ ರೈಲ್ವೆಯು 2026 ರ ಜನವರಿ 1 ರಿಂದ ಜಾರಿಗೆ ಬರುವಂತೆ ರೈಲುಗಳ ಹೊಸ ಸಾರ್ವಜನಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಹಲವು ರೈಲುಗಳ ಸಮಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ವಿಶೇಷವಾಗಿ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ರೈಲುಗಳ ವೇಗವನ್ನು ಹೆಚ್ಚಿಸಲಾಗಿದ್ದು, ಪ್ರಯಾಣದ ಸಮಯದಲ್ಲಿ ಕಡಿತಗೊಳಿಸಲಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸುವ ಎರಡು ಪ್ರಮುಖ ರೈಲುಗಳನ್ನು ಸೂಪರ್ ಫಾಸ್ಟ್ ಶ್ರೇಣಿಗೆ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದಾಗಿ ಟ್ರೈನ್ ಸಂಚಾರದ ಅವಧಿ ಕಡಿಮೆಯಾಗಲಿದೆ.
- ರೈಲು ಸಂಖ್ಯೆ 20689 (ಹಳೆಯ ಸಂಖ್ಯೆ 16579): ಯಶವಂತಪುರದಿಂದ ಶಿವಮೊಗ್ಗ ಟೌನ್‌ಗೆ ಸಂಚರಿಸುವ ಈ ರೈಲು 2026 ರ ಫೆಬ್ರವರಿ 19 ರಿಂದ ಅಧಿಕೃತವಾಗಿ ಸೂಪರ್ ಫಾಸ್ಟ್ ಆಗಿ ಬದಲಾಗಲಿದೆ.
- ರೈಲು ಸಂಖ್ಯೆ 20690 (ಹಳೆಯ ಸಂಖ್ಯೆ 16580): ಶಿವಮೊಗ್ಗ ಟೌನ್‌ನಿಂದ ಯಶವಂತಪುರಕ್ಕೆ ಸಂಚರಿಸುವ ಈ ರೈಲು 2026 ರ ಫೆಬ್ರವರಿ 20 ರಿಂದ ಸೂಪರ್ ಫಾಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.
- ಎಂ.ಜಿ.ಆರ್ ಚೆನ್ನೈ – ಶಿವಮೊಗ್ಗ ಟೌನ್ (12691) ಈ ಟ್ರೈನ್ ಕೂಡ ಜನವರಿ ಎರಡರಿಂದಲೇ ಸೂಪರ್ ಫಾಸ್ಟ್ ಟ್ರೈನ್ ಆಗಿ ಸಂಚರಿಸಲಿದೆ.
- ಶಿವಮೊಗ್ಗ ಟೌನ್ -ಎಂ.ಜಿ.ಆರ್ ಚೆನ್ನೈ (12692)ಈ ಟ್ರೈನ್ ಜನವರಿ ಮೂರನೇ ತಾರೀಖಿನಿಂದ ಸೂಪರ್ ಫಾಸ್ಟ್ ಟ್ರೈನ್ ಆಗಿ ಸಂಚರಿಸಲಿದೆ.
- ಇದೇ ಟ್ರೈನ್ಗಳಿಗೆ ಸಂಬಂಧಿಸಿದಂತೆ ರೈಲುಗಳ ವೇಗವನ್ನು ಸಹ ಹೆಚ್ಚಿಸಲಾಗಿದ್ದು ಅವುಗಳ ಒಟ್ಟಾರೆ ಸಂಚಾರದ ಸಮಯ ಕಡಿಮೆಯಾಗಲಿದೆ.
Shivamogga Train Timings ವೇಗ ಹೆಚ್ಚಿಸಿಕೊಂಡ ಪ್ರಮುಖ ರೈಲುಗಳು
- ಯಶವಂತಪುರ – ಶಿವಮೊಗ್ಗ ಟೌನ್ (16581): ಈ ರೈಲಿನ ವೇಗವನ್ನು 25 ನಿಮಿಷಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಪ್ರಯಾಣದ ಅವಧಿ 6 ಗಂಟೆ 10 ನಿಮಿಷಗಳಿಂದ 5 ಗಂಟೆ 45 ನಿಮಿಷಗಳಿಗೆ ಇಳಿಕೆಯಾಗಲಿದೆ.
- ಶಿವಮೊಗ್ಗ ಟೌನ್ – ಯಶವಂತಪುರ (16582): ಈ ರೈಲಿನ ವೇಗವನ್ನು 15 ನಿಮಿಷ ಹೆಚ್ಚಿಸಲಾಗಿದೆ. ಇನ್ನು ಮುಂದೆ ಈ ಪ್ರಯಾಣ 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
- ಚೆನ್ನೈ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12691) ಎಂ.ಜಿ.ಆರ್ ಚೆನ್ನೈ ಸೆಂಟ್ರಲ್‌ನಿಂದ ಶಿವಮೊಗ್ಗಕ್ಕೆ ಬರುವ ಈ ರೈಲು ಈಗಿನ ಅವಧಿಗಿಂತ 20 ನಿಮಿಷ ಮುಂಚಿತವಾಗಿ ಶಿವಮೊಗ್ಗ ತಲುಪಲಿದೆ. ಈ ಹಿಂದೆ 12:50 ರಷ್ಟು ಸಮಯ ತೆಗೆದುಕೊಳ್ತಿದ್ದ ರೈಲು ಸಂಚಾರದ ಸಮಯ ಜನವರಿ ಒಂದರಿಂದ 12:30 ಗಂಟೆಯಲ್ಲಿ ಸಂಚರಿಸಲಿದೆ.
- ಉಳಿದಂತೆ 20689 (ಹಳೆಯ ಸಂಖ್ಯೆ 16579) Yesvantpur Shivamogga Town (ಯಶವಂತಪುರ ಶಿವಮೊಗ್ಗ ಟೌನ್ ಟ್ರೈನ್) ಹಿಂದಿನ ಅವಧಿ 5 ಗಂಟೆಗಿಂತ ಕಡಿಮೆ ಅಂದರೆ 4.50 ಗಂಟೆಯಲ್ಲಿ ಸಂಚರಿಸಲಿದೆ. ಒಟ್ಟಾರೆ 10 ನಿಮಿಷ ಮುಂಚಿತವಾಗಿ ಶಿವಮೊಗ್ಗ ತಲುಪಲಿದೆ.
- ಇನ್ನೂ ಟ್ರೈನ್ ಸಂಖ್ಯೆ (12089 ) ಕೆಎಸ್ಆರ್ ಬೆಂಗಳೂರು, ಶಿವಮೊಗ್ಗ ಟೌನ್ ಟ್ರೈನ್ ಈ ಹಿಂದೆ 4.25 ಗಂಟೆ ತೆಗೆದುಕೊಳ್ತಿತ್ತು. ಜನವರಿ ಒಂದರಿಂದ 4.20 ಅವಧಿಯಲ್ಲಿ ಶಿವಮೊಗ್ಗಕ್ಕೆ ತಲುಪಲಿದೆ.
Shivamogga Train Timings Change 2026
