shivamogga traffic police: ಜೀವ ರಕ್ಷಕನಿಗೆ ಪೊಲೀಸರಿಂದ ಸನ್ಮಾನ 

prathapa thirthahalli
Prathapa thirthahalli - content producer

shivamogga traffic police: ಸಾಮಾನ್ಯವಾಗಿ ರಸ್ತೆಯಲ್ಲಿ ಅಪಘಾತವಾದಾಗ ಹೆಚ್ಚಿನ ಜನರು ಅಪಘಾತವಾದವರ ರಕ್ಷಣೆಗೆ ಧಾವಿಸಲು ಹಿಂದೇಟು ಹಾಕುತ್ತಾರೆ. ಇದ್ಯಾರಿಗೆ ಬೇಕು ಪೊಲೀಸ್​ ಕೇಸ್​ ಆದ್ರೆ ನಮಗೆಲ್ಲಾ ಸುಮ್ಮನೆ ತೊಂದರೆ ಯಾಕೆ ಎಂದು ಹೆದರುವವರೇ ಜಾಸ್ತಿ. ಇದರ ನಡುವೆ ಇಲ್ಲೊಬ್ಬರು ಅಪಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಜೀವ ಉಳಿಸಲು ನೆರವಾಗಿದ್ದಾರೆ.

shivamogga traffic police:  ಮಳೆಯನ್ನೂ ಲೆಕ್ಕಿಸದೆ ಜೀವ ಉಳಿಸಿದ ಪುಣ್ಯಾತ್ಮ

ಏಪ್ರಿಲ್​ 05 ರಂದು ಶಿವಮೊಗ್ಗದ ಶಂಕರಮಠದ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್​ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಅಂದಿನ ದಿನ ವಿಪರೀತ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಅದನ್ನು ನೋಡಿದ ಶಿವಮೊಗ್ಗದ ನಂಜುಂಡೇಶ್ವರ ಎಂಬುವವರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಬೈಕ್​ ಸವಾರನನ್ನು ಎತ್ತಿ ಉಪಚರಿಸಿ ನಂತರ  ಆಂಬ್ಯುಲೆನ್ಸ್​ ಕಾಲ್​ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್​ಗೆ ಸವಾರನನ್ನು ಹಾಕಿ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗೆ ಸಮಯ ಪ್ರಜ್ಞೆಯನ್ನು ತೋರುವುದರ ಮೂಲಕ ವೈದ್ಯರಿಗೆ ತಕ್ಷಣ ಚಿಕಿತ್ಸೆಯನ್ನು ಒದಗಿಸಲು ನೆರವಾಗಿ ಸವಾರನ  ಜೀವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನಲೆ ಅವರ ಸಾಹಸವನ್ನು ಮೆಚ್ಚಿ ಶಿವಮೊಗ್ಗ ನಗರ ಸಂಚಾರ ಪೊಲೀಸರು ಅವರಿಗೆ ಜೀವ ರಕ್ಷಕ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ

shivamogga traffic police
shivamogga traffic police The moment i congratulated the young man

 

Share This Article