Shivamogga Tourism Icon Sharavathi Bridge 13 Malnad news today

Shivamogga Tourism Icon Sharavathi Bridge 13 ಮಲೆನಾಡಿನ ದಶಕಗಳ ಕನಸಾಗಿದ್ದ, ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವಿನ ಸೇತುವೆ ಈಗ ಲೋಕಾರ್ಪಣೆಗೊಳ್ಳುವ ಹಂತದಲ್ಲಿದೆ. ಇಂತಹ ಕ್ಲಿಷ್ಟಕರ ಯೋಜನೆ ಪೂರ್ಣಗೊಳ್ಳಲು ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು.

ಸೇತುವೆಗೆ ಹೆಸರಿಡುವ, ಯೋಜನೆಯ ಯಶಸ್ಸಿನ ಲಾಭ ಪಡೆದುಕೊಳ್ಳುವ ವಿವಾದಗಳನ್ನೆಲ್ಲ ಬದಿಗಿಟ್ಟು ಅಬ್ರಹಾಂ ಲಿಂಕನ್ನನ ಸರ್ವಕಾಲಿಕ ವ್ಯಾಖ್ಯಾನವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ: “ಪ್ರಜಾಪ್ರಭುತ್ವ ಎಂದರೆ ಜನರ ಸರ್ಕಾರ, ಜನರಿಂದ, ಜನರಿಗಾಗಿ”. ಯಾವುದೇ ಕೆಲಸ ಯಾರೇ ಮಾಡಿರಲಿ, ಅಥವಾ ಯಾವುದೇ ಪಕ್ಷದ ಸರ್ಕಾರ ಮಾಡಿರಲಿ, ಅದು ಜನರಿಂದ, ಜನರಿಗಾಗಿಯೇ (ಕೆಲವು ಕೆಲಸ ಹೊರತುಪಡಿಸಿ) ಎಂಬುದನ್ನು ಅರಿತರೆ ಯಾವುದೇ ಸಮಸ್ಯೆ ಉದ್ಭವ ಆಗದು. ಸದ್ಯ ಈ ಯೋಜನೆಯ ಯಶಸ್ಸಿನ ಪಾಲನ್ನು ಅವರವರೇ ತೀರ್ಮಾನಿಸಿಕೊಳ್ಳಲಿ.

Shivamogga Tourism Icon Sharavathi Bridge 13
ಸೇತುವೆ ಉದ್ಘಾಟನೆ ಆಗುತ್ತದೆ ಮುಂದೆ….. ಆದರೆ, ಭವಿಷ್ಯದಲ್ಲಿ ಈ ಯೋಜನೆಯ ಪರಿಣಾಮದಿಂದ ಆಗಬಹುದಾದ ಅನುಕೂಲ, ಅನಾನುಕೂಲಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನ.


ಶಿವಮೊಗ್ಗ ಜಿಲ್ಲೆಯಲ್ಲಿ ಆಕರ್ಷಣೆಯ ದೃಷ್ಟಿಯಿಂದ ಜೋಗ ಜಲಪಾತ ಬಿಟ್ಟರೆ, ಈ ಸೇತುವೆಯೇ ಎರಡನೇ ಹೆಗ್ಗುರುತಾಗುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಕೈಗೊಳ್ಳಬೇಕಿರುವ ಹೊಸ ವ್ಯವಸ್ಥೆಗಳುಈ ಸೇತುವೆ ಸುಮಾರು 2.16 ಕಿ.ಮೀ. ಉದ್ದವಿದ್ದು, ಅದರಲ್ಲಿ ತೂಗು ಸೇತುವೆಯ ಭಾಗವೂ ಸೇರಿದೆ. ಇಂತಹ ಸೇತುವೆಗಳ ಪೈಕಿ ಇದು ಎರಡನೇ ಅತಿ ಉದ್ದದ ಸೇತುವೆ ಎನಿಸಿಕೊಂಡಿದೆ. ಕೊಂಡಿ ಬೆಸೆದಿರುವ ಈ ಸೇತುವೆಯಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ, ಜನರ ಓಡಾಟ, ಸ್ಥಳೀಯ ಪ್ರವಾಸಿ, ಧಾರ್ಮಿಕ ತಾಣಗಳಿಗೆ ಭೇಟಿ ನೀಡುವುದು ಹೆಚ್ಚಾಗಲಿದೆ. ಸಹಜವಾಗಿಯೇ ಪ್ರವಾಸೋದ್ಯಮ ಚಟುವಟಿಕೆ ಇನ್ನೂ ಹೆಚ್ಚು ಗರಿಗೆದರಲಿವೆ. ಹೀಗಾಗಿ ಕೆಲವೊಂದು ಕಡಿವಾಣ ಹಾಗೂ ಪೂರಕ ವಾತಾವರಣ ಸೃಷ್ಟಿಸುವುದು ಅಗತ್ಯ.
- ಸಿಸಿ ಕ್ಯಾಮರಾ ಅಳವಡಿಕೆ: ಸಂಬಂಧಪಟ್ಟ ಇಲಾಖೆಯವರು ಸೇತುವೆಯ ಮೇಲೆ ಎಲ್ಲಾ ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು.
- ಅಲಂಕಾರಿಕ ದೀಪಗಳ ವ್ಯವಸ್ಥೆ: ವಿಶೇಷ ಸಂದರ್ಭಗಳಲ್ಲಿ ಮತ್ತು ಶನಿವಾರ, ಭಾನುವಾರ ರಾತ್ರಿ ವೇಳೆ ಸೇತುವೆ ಮೇಲೆ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಬೇಕು.
- ಚೆಕ್‌ಪೋಸ್ಟ್‌ಗಳ ಸ್ಥಾಪನೆ: ಇನ್ನು ಮುಂದೆಯೂ ಸಹ ಈ ಭಾಗದಲ್ಲಿ ಘರ್ಷಣೆ, ಕಿರಿಕಿರಿ, ಅಸಭ್ಯ ವರ್ತನೆಗಳು ಹೆಚ್ಚುವುದರಿಂದ ಸೇತುವೆಯ ಎರಡೂ ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು.
- ಧ್ವನಿವರ್ಧಕಗಳ ಮೂಲಕ ಸೂಚನೆ: ಸೇತುವೆಯ ಮೇಲೆ ಅಲ್ಲಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಪ್ರವಾಸಿಗರಿಗೆ ಎಚ್ಚರಿಕೆ, ಸೂಚನೆ ನೀಡಬೇಕು. ದುರ್ವರ್ತನೆ ತೋರುವ ಪ್ರವಾಸಿಗರಿಗೆ, ಕಸ, ಬಾಟಲಿ ಹಾಕುವವರಿಗೆ ದಂಡ ಹಾಕಬೇಕು. ಇದಕ್ಕಾಗಿ ಪಂಚಾಯತಿ ವತಿಯಿಂದ ಪ್ರತಿನಿಧಿಗಳನ್ನು ನೇಮಿಸಬಹುದು.
Shivamogga Tourism Icon

ಪ್ರವಾಸಿ ಅನುಭವ ವೃದ್ಧಿಗೆ ಹೊಸ ಆಯಾಮಗಳು /Shivamogga Tourism Icon Sharavathi Bridge 13
- ನಡುಗಡ್ಡೆಗಳಿಗೆ ಭೇಟಿ: ಸಮೀಪದ ನಡುಗಡ್ಡೆಗಳಿಗೆ ಲಾಂಚ್ ಮೂಲಕ ಭೇಟಿ ನೀಡುವ ವ್ಯವಸ್ಥೆ ಕಲ್ಪಿಸಬಹುದು. ಅಥವಾ ಕೆಲವು ನಡುಗಡ್ಡೆಗಳನ್ನು ಸೀಮಿತ ಚಟುವಟಿಕೆ ಕೈಗೊಳ್ಳಲು ಗುತ್ತಿಗೆ ನೀಡಬಹುದು.
- ಮಡೆನೂರ್ ಡ್ಯಾಮ್ ವೀಕ್ಷಣೆ: ನೀರು ಕಡಿಮೆಯಾದಾಗ ನೀರಿನಲ್ಲಿ ಮುಳುಗಿರುವ ಮಡೆನೂರ್ ಡ್ಯಾಮ್ ವೀಕ್ಷಿಸಲು ಲಾಂಚ್‌ನಿಂದಲೇ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬಹುದು.
- ಮೂನ್ ಪೂಲ್ ಅಳವಡಿಕೆ: ಯಾವುದಾದರೂ ಒಂದು ಲಾಂಚ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಆಳವಾದ ನೀರಿನಲ್ಲಿ ಜಲಚರಗಳನ್ನು ವೀಕ್ಷಿಸಲು ಮೂನ್ ಪೂಲ್ (Moon Pool) ಅಳವಡಿಸಬಹುದು.
- ಜಲ ಸಾಹಸ ಕೇಂದ್ರ: ಸೇತುವೆಯ ಆ ಬದಿಯಲ್ಲಾಗಲಿ, ಈ ಬದಿಯಲ್ಲಾಗಲಿ ಒಂದು ಕಡೆ ಜಲ ಸಾಹಸ ಕೇಂದ್ರವನ್ನು ಸ್ಥಾಪಿಸಬಹುದು.
- ವಾಟರ್ ಪಾರ್ಕ್/ಅಮ್ಯೂಸ್‌ಮೆಂಟ್ ಪಾರ್ಕ್: ತುಮರಿ ಭಾಗದಲ್ಲಾಗಲಿ, ಹುಲಿದೇವರಬನದ ಕಡೆಯಲ್ಲಾಗಲಿ ಖಾಸಗಿಯವರಿಗೆ ವಾಟರ್ ಪಾರ್ಕ್/ಅಮ್ಯೂಸ್‌ಮೆಂಟ್ ಪಾರ್ಕ್ ಸ್ಥಾಪಿಸಲು ಅನುಮತಿ ನೀಡಬೇಕು.
- ವೀಕ್ಷಣಾ ಗೋಪುರ: ತಾಳಗುಪ್ಪದಿಂದ ಕಾರ್ಗಲ್ ಕಡೆ ಬರುವಾಗ ಬಚ್ಚಗಾರಿನ ಘಾಟಿ ತಿರುವಿನಲ್ಲಿ ವೀಕ್ಷಣಾ ಗೋಪುರ ಸ್ಥಾಪಿಸಿ, ಟೆಲಿಸ್ಕೋಪ್‌ಗಳನ್ನು ಇಡಬೇಕು. ಅಲ್ಲಿಂದ ಸೇತುವೆ ಹಾಗೂ ಕೊಡಚಾದ್ರಿ ಬೆಟ್ಟದ ದೃಶ್ಯ ಕಾಣ ಸಿಗುತ್ತದೆ.

ಇವೆಲ್ಲವನ್ನೂ ಸ್ಥಳೀಯರಿಗೆ, ಪರಿಸರಕ್ಕೆ, ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗದಂತೆ ನಿರ್ವಹಿಸಿ ಜಿಲ್ಲೆಯ ಆರ್ಥಿಕತೆ, ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವಂತಾಗಲಿ.
ಬರಹ : ಜಯಚಂದ್


Shivamogga Tourism Icon Sharavathi Bridge, Ambaragodlu Kalasavalli Bridge, Shivamogga Tourism, Malenadu Bridge, Jog Falls, Karnataka Tourism, Backwater Tourism, New Bridge Project, Development Project, Moon Pool, Water Adventure Center, Water Park Shivamogga, Observation Tower, Madenur Dam, Kodlamane Falls, Talaguppa, Kargal, Bachchagaru Ghat, Kodachadri, Eco-tourism.
#SharavathiBridge, #ShivamoggaTourism, #Malenadu, #KarnatakaTourism, #AmbaragodluKalasavalliBridge, #NewBridge, #JogFalls, #BackwaterTourism, #IncredibleIndia, #EcoTourism, #ShivamoggaDevelopment, #TourismBoost
ಶರಾವತಿ ಸೇತುವೆ, ಅಂಬಾರಗೋಡ್ಲು ಕಳಸವಳ್ಳಿ ಸೇತುವೆ, ಶಿವಮೊಗ್ಗ ಪ್ರವಾಸೋದ್ಯಮ, ಮಲೆನಾಡು ಸೇತುವೆ, ಜೋಗ ಜಲಪಾತ, ಕರ್ನಾಟಕ ಪ್ರವಾಸೋದ್ಯಮ, ಹಿನ್ನೀರು ಪ್ರವಾಸೋದ್ಯಮ, ಹೊಸ ಸೇತುವೆ, ಅಭಿವೃದ್ಧಿ ಯೋಜನೆ, ಮೂನ್ ಪೂಲ್, ಜಲ ಸಾಹಸ ಕೇಂದ್ರ, ವಾಟರ್ ಪಾರ್ಕ್ ಶಿವಮೊಗ್ಗ, ವೀಕ್ಷಣಾ ಗೋಪುರ, ಮಡೆನೂರ್ ಡ್ಯಾಮ್, ಕೊಡ್ಲಮನೆ ಜಲಪಾತ, ತಾಳಗುಪ್ಪ, ಕಾರ್ಗಲ್, ಬಚ್ಚಗಾರಿನ ಘಾಟಿ, ಕೊಡಚಾದ್ರಿ, ಪರಿಸರ ಸ್ನೇಹಿ ಪ್ರವಾಸೋದ್ಯಮ.