KSRTC ಬಸ್​ ಡ್ರೈವರ್​ ಆತ್ಮಹತ್ಯೆ, ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​​ 

ಮರಕ್ಕೆ ಬೈಕ್ ಡಿಕ್ಕಿ: ಆಸ್ಪತ್ರೆ ಸಿಬ್ಬಂದಿ ಸಾವು

ತೀರ್ಥಹಳ್ಳಿ ತಾಲೂಕಿನ ತಿರಳೆಬೈಲು ಬಳಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕೋಣಂದೂರು ಆಸ್ಪತ್ರೆಯ ಸಿಬ್ಬಂದಿ ಗಂಗಾಧರ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು, ತೀರ್ಥಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ

Shivamogga  ಲಾರಿ ಹರಿದು ಯುವಕನ ದುರ್ಮರಣ

ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ವ್ಯಾಪ್ತಿಯಲ್ಲಿ ಲಾರಿ ಹರಿದು ನಯಾಜ್ (30) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ಸಿಗೆ ಪಾರ್ಸಲ್ ನೀಡಲು ಬಂದಿದ್ದಾಗ, ರಿಪ್ಪನ್‌ಪೇಟೆಯಿಂದ ಕೋಣಂದೂರು ಕಡೆಗೆ ತೆರಳುತ್ತಿದ್ದ ಜಂಬಿಟ್ಟಿಗೆ ಲಾರಿ ಯುವಕನ ಮೇಲೆ ಹರಿದಿದೆ. ಮೃತ ನಯಾಜ್ ಸುಣ್ಣದ ಬಸ್ತಿ ಗ್ರಾಮದ ನಿವಾಸಿಯಾಗಿದ್ದನು.

ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ

ಡಿಪೋ ಮ್ಯಾನೇಜರ್ ಕೆಲಸ ನೀಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಸಾಗರ ತಾಲೂಕಿನ ಆನಂದಪುರ ಬಳಿಯ ತ್ಯಾಗರ್ತಿಯ ಚಾಲಕ ನಾಗಪ್ಪ (58) ನೇಣಿಗೆ ಶರಣಾಗಿದ್ದಾರೆ. ಕಳೆದ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದ ಇವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Top 3 chatpat news