ಕುಡಿದು ಪಕ್ಕದ ಮನೆ ಮುಂದೆ ಮಲಗಿದ ಆಸಾಮಿ!/ ಎಣ್ಣೆ ದುಡ್ಡಿಗಾಗಿ ಆತ್ಮಹತ್ಯೆ ಬೆದರಿಕೆ! ನಶೆ ಇಳಿಸಿದ ಪೊಲೀಸ್/ ಜೊತೆ 2 ಕಾರಿನ ಮಧ್ಯೆ ಡಿಕ್ಕಿ ಸುದ್ದಿ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಇವತ್ತಿನ ಚಟ್​ಪಟ್​ ನ್ಯೂಸ್​ ಇಲ್ಲಿದೆ. 

ಎಣ್ಣೆಗೆ ದುಡ್ಡು ಕೊಟ್ಟಿಲ್ಲವೆಂದರೆ ಸಾಯುವುದಾಗಿ ಹೆದರಿಸಿದ ವ್ಯಕ್ತಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ  ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಎಣ್ಣೆ ಹೊಡೆಯಲು ಹಣ ಕೇಳಿ ತನ್ನ ಸಂಬಂಧಿಕರಿಗೆ ಕಿರಿಕಿರಿ ಮಾಡಿದ ಘಟನೆಯ ಬಗ್ಗೆ ವರದಿಯಾಗಿದೆ. ರಾತ್ರಿ ಹೊತ್ತು ತನ್ನ ಸಂಬಂಧಿಕರಿಗೆ ತಾಪತ್ರಯ ನೀಡಿದ್ದಷ್ಟೆ  ಅಲ್ಲದೆ ಹಣಕೊಡದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನಂತೆ. ಹೀಗಾಗಿ ಬೇರೆ ವಿಧಿಯಿಲ್ಲದೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಶೆ ಆಸಾಮಿ ಕಿಕ್ ಇಳಿಸಿ ಎಚ್ಚರಿಕೆ ನೀಡಿದ್ದಾರೆ. 

shivamogga today short news update malnad
shivamogga today short news update malnad

ಕುಡಿದು ಬಂದು ಕಂಡವನ ಮನೆ ಬಳಿ ಮಲಗಿದ ಬೂಪ

ಇತ್ತ  ನ್ಯೂಟೌನ್​ ಪೊಲೀಸ್ ಠಾಣೆಯ ಲಿಮಿಟ್ಸ್​  ರೌಂಡ್ಸ್​ನಲ್ಲಿದ್ದ 112 ಪೊಲೀಸರಿಗೆ ಮತ್ತೊಬ್ಬ ಕುಡುಕನ ಅವಾಂತರ ಎದುರಾಗಿದೆ. ಇಲ್ಲಿನ ನಿವಾಸಿಯೊಬ್ಬ ಕುಡಿದು ಬಂದು ತನ್ನ ಮನೆಗೆ ಹೋಗದ ಪಕ್ಕದ ಮನೆಯ ಮುಂದೆ ಹೋಗಿ ಮಲಗಿದ್ದಾನೆ. ಈತನನ್ನು ಎಬ್ಬಿಸಿ ಇವನ ಮನೆಗೆ ಕಳಿಸಲು ಕೊನೆಗೆ ಪೊಲೀಸರೇ ಹೋಗಬೇಕಾಗಿ ಬಂದಿತು. ಸ್ಥಳಕ್ಕೆ ತೆರಳಿದ ಪೊಲೀಸರು ಎಚ್ಚರಿಕೆಯನ್ನು ಸಹ ನೀಡಿ ಬಂದಿದ್ದಾರೆ. 

ಎರಡು ಕಾರುಗಳ ನಡುವೆ ಡಿಕ್ಕಿ

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಾರುಗಳ ಡಿಕ್ಕಿಯಾಗಿ ಅಪಘಾತವಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಆದರೆ ವಾಹನಗಳು ಜಖಂಗೊಂಡಿದೆ.  ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಒಮಿನಿ ಹಾಗೂ ಟಾಟಾ ನೆಕ್ಸಾನ್​ ವಾಹನದ ನಡುವೆ ಡಿಕ್ಕಿಯಾಗಿದ್ದು, ಘಟನೆಯಿಂದಾಗಿ ಎರಡು ವಾಹನಗಳು ಜಖಂಗೊಂಡಿದೆ.  

Malenadu Today

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Leave a Comment