Shivamogga SIMS ಸಿಮ್ಸ್‌ ಸಹಾಯಕ ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ ಆರೋಪ: ಕಪ್ಪು ಪಟ್ಟಿ ಪ್ರತಿಭಟನೆ? ನಿರ್ದೇಶಕರು ಹೇಳಿದ್ದೇನು?

ajjimane ganesh

Shivamogga SIMS ಸಿಮ್ಸ್‌ ಸಹಾಯಕ ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ ಆರೋಪ: ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು, ನಿರ್ದೇಶಕರು ಹೇಳಿದ್ದೇನು?

Shivamogga SIMS (ಮಲೆನಾಡು ಟುಡೆ ಸುದ್ದಿ): ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ, ಇಂದು ಕಾಲೇಜು ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಕುರಿತು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರು, ಪ್ರಕರಣದ ಸಂಬಂಧ ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Shivamogga SIMS
Shivamogga SIMS

ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ವಿರೂಪಾಕ್ಷಪ್ಪ, ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ತಕ್ಷಣ ಸಂತ್ರಸ್ತೆ ವಿದ್ಯಾರ್ಥಿನಿ ಮೊದಲು ಕಾಲೇಜಿನ ಸ್ನಾತಕೋತ್ತರ ಸಮಿತಿಗೆ ದೂರು ನೀಡಿದ್ದರು. ನಂತರ ಈ ಸಮಿತಿಯು ಸಿಮ್ಸ್ ಆಡಳಿತ ಮಂಡಳಿ, ಲೈಂಗಿಕ ದೌರ್ಜನ್ಯ ತಡೆ ಸಮಿತಿ ಮತ್ತು ಆಸ್ಪತ್ರೆಯ ಅಧೀಕ್ಷಕರಿಗೆ ದೂರು ರವಾನಿಸಿದೆ. ಈ ಬಗ್ಗೆ ಸಮಿತಿಯ ವರದಿ ಇನ್ನೂ ಬರಬೇಕಾಗಿದ್ದು, ಈಗಾಗಲೇ ದೂರನ್ನು ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೂ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Shivamogga SIMS Harassment Allegation 25

“ಆರೋಪಿತ ಪ್ರಾಧ್ಯಾಪಕರು ಈ ಘಟನೆಯ ನಂತರ ಕೆಲಸಕ್ಕೆ ಬರುತ್ತಿಲ್ಲ. ನಾವು ಅವರನ್ನು ರಕ್ಷಿಸುತ್ತಿದ್ದೇವೆ ಅಥವಾ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದೇವೆ ಎಂಬುದು ಸುಳ್ಳು” ಎಂದು ಡಾ. ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದರು. ಆರೋಪಿತ ವೈದ್ಯರಿಗೆ ನೋಟಿಸ್ ನೀಡಲಾಗಿದ್ದು, ಅವರಿಂದ ಲಿಖಿತ ಸ್ಪಷ್ಟೀಕರಣವನ್ನು ಕೋರಲಾಗಿದೆ. ಅವರು ಸಮಿತಿಯ ಮುಂದೆ ಸ್ಪಷ್ಟೀಕರಣ ನೀಡಿದ್ದಾರೆಯೇ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ನಿರ್ದೇಶಕರು ತಿಳಿಸಿದರು.

Shivamogga SIMS, Sexual Harassment Allegation, Student Protest , Dr. Virupakshappa Statement , Medical College Shivamogga
Shivamogga SIMS, Sexual Harassment Allegation, Student Protest , Dr. Virupakshappa Statement , Medical College Shivamogga

ವಿದ್ಯಾರ್ಥಿಗಳು ಪ್ರತಿಭಟನೆಗೆ ಅವಕಾಶ ಕೋರಿ ಬಂದಿದ್ದರು ಮತ್ತು ಆರೋಪಿಯ ಮೇಲೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ವಾಸ್ತವ ಸಂಗತಿ ಮತ್ತು ಇಲ್ಲಿಯವರೆಗೆ ನಡೆದ ವಿಚಾರಣೆಯ ಬಗ್ಗೆ ಅವರಿಗೆ ವಿವರಿಸಿದ ಬಳಿಕ ಅವರು ಪ್ರತಿಭಟನೆಯನ್ನು ಮುಂದೂಡಿದ್ದಾರೆ. “ಆರೋಪಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ” ಎಂದು ಡಾ. ವಿರೂಪಾಕ್ಷಪ್ಪ ವಿವರಿಸಿದರು.

ಇನ್ನಷ್ಟು ಸುದ್ದಿಗಳಿಗಾಗಿ : malendutoday.com /

 Sexual Harassment Allegation, Student Protest , Dr. Virupakshappa Statement , Medical College Shivamogga

Share This Article