Shivamogga short news ನಾಪತ್ತೆಯಾಗಿದ್ದ ಕೃಷಿಕನ ಶವ ಪತ್ತೆ
Shivamogga short news

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೊನ್ನೇತಾಳು ಗ್ರಾಮದ ಚಂಗಾರು ನಿವಾಸಿ, 59 ವರ್ಷದ ರಮೇಶ್ ಎಂಬ ಕೃಷಿಕ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 26 ರಂದು ಕೃಷಿ ಕೆಲಸಕ್ಕೆಂದು ತೋಟಕ್ಕೆ ತೆರಳಿದ್ದ ಇವರು ಮರಳಿ ಬಂದಿರಲಿಲ್ಲ. ಗ್ರಾಮಸ್ಥರು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ತೀವ್ರ ಶೋಧ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಲ್ಲುಗುಡ್ಡ ಸಮೀಪ ರಮೇಶ್ ಅವರ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಾಂಜಾ ಸೇವಿಸಿ ಓಡಾಡ್ತಿದ್ದ ಆರೋಪಿ ಅರೆಸ್ಟ್
ಇತ್ತ ಶಿವಮೊಗ್ಗದ ಟಿಪ್ಪುನಗರ ಬಲಭಾಗದ 5ನೇ ಕ್ರಾಸ್ ಬಳಿಯ ಖಾಲಿ ಜಾಗದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಹಿಡಿದು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ಆತ ಗಾಂಜಾ ಸೇವಿಸಿದ್ದು ಗೊತ್ತಾಗಿದೆ. ಹೀಗಾಗಿ ಆತನಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಆತನ ವಿರುದ್ಧ ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಬ್ಯಾಂಕ್ ಎದುರು ಬೈಕ್ ಕಳ್ಳತನ
ಇನ್ನೊಂದೆಡೆ ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಬಳಿ ಇರುವ ಬ್ಯಾಂಕ್ ಎದುರು ಬೈಕ್ ಕಳ್ಳತನವಾಗಿದೆ. ಸ್ಪ್ಲೆಂಡರ್ ಬೈಕ್ ಅನ್ನು ಬ್ಯಾಂಕ್ ಎದುರು ನಿಲ್ಲಿಸಿ, ಬ್ಯಾಂಕ್ಗೆ ಹೋಗಿದ್ದ ಗ್ರಾಹಕರು, ಅಲ್ಲಿಂದ ಹೊರಕ್ಕೆ ಬರುವಷ್ಟರಲ್ಲಿ ಅವರ ಬೈಕ್ ಕಳ್ಳತನ ಮಾಡಲಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Shivamogga short news