ಬೆಂಗಳೂರಿನಿಂದ ಬರುತ್ತಿದ್ದ ಕಾರು ಡಿಕ್ಕಿ, ಬೈಕ್ ಸವಾರ ಸಾವು, ನಿದಿಗೆ ಬಳಿ ಸೆಕ್ಯುರಿಟಿ ಗಾರ್ಡ್​ನ್ನ ಬಲಿಪಡೆದ ಕಾರು! ಆನವಟ್ಟಿಯಲ್ಲಿ ಕಾರು ಬೈಕ್ ಡಿಕ್ಕಿ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ನಡೆದ ಅಪಘಾತಗಳ ವಿವರ ಹೀಗಿದೆ. 

ಅಪಘಾತ: ಬೈಕ್ ಸವಾರ ಸಾವು

ಹೊಳೆಹೊನ್ನೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ್ದಾರೆ. ಆಗರದಹಳ್ಳಿ-ಅಶೋಕನಗರ ನಡುವೆ

- Advertisement -

ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಆಗರದಹಳ್ಳಿ ಗ್ರಾಮದ ಕಣ್ಣಪ್ಪ (42) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಣ್ಣಪ್ಪ ಅವರು ಅರಹತೊಳಲು ಕೈಮರ ಗ್ರಾಮದಿಂದ ಆಗರದಹಳ್ಳಿ ಗ್ರಾಮಕ್ಕೆ ಬೈಕಿನಲ್ಲಿ ಹೋಗುತ್ತಿರುವಾಗ ಬೆಂಗಳೂರಿನಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಮೃತ ಕಣ್ಣಪ್ಪ ಅವರು ಅಡಕೆ ಕೂಲಿ ಕೆಲಸ ಮಾಡುತ್ತಿದ್ದರು. ಪತ್ನಿ, ಪುತ್ರಿ ಇದ್ದಾರೆ.

ಟೀ ಕುಡಿಯುತ್ತಿದ್ದಾಗ ಕಾರು ಡಿಕ್ಕಿ Shivamogga road accidents 

ಇತ್ತ  ಶಿವಮೊಗ್ಗ – ಭದ್ರಾವತಿ ರಸ್ತೆಯ ನಿದಿಗೆ ಬಸ್‌ ನಿಲ್ದಾಣದ ಬಳಿ ಟೀ ಕುಡಿಯುತ್ತಾ ನಿಂತಿದ್ದ ಸೆಕ್ಯುರಿಟಿ ಗಾರ್ಡ್​ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.  ಮೃತರು ಶಾಲೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು, ಮೃತರನ್ನು ಭದ್ರಾವತಿಯ ಜಿಂಕ್‌ಲೈನ್‌ ರಸ್ತೆ ನಿವಾಸಿ ನಂಜುಂಡ.ಬಿ (57)  ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. 

ಆನವಟ್ಟಿಯಲ್ಲಿ ಅಪಘಾತ, ಗಾಯ

ಇನ್ನೂ ಆನವಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ  ಬೈಕ್ ಸವಾರನಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ ವಾಹನಗಳನ್ನ ತೆರವುಗೊಳಿಸಿ, ಘಟನೆ ಸಂಬಂಧ ವಿಚಾರಣೆ ನಡೆಸ್ತಿದ್ದಾರೆ.  

ಶಿವಮೊಗ್ಗ ಅಪಘಾತ, ರಸ್ತೆ ಅಪಘಾತ, ಇಬ್ಬರು ಸಾವು, ಹೊಳೆಹೊನ್ನೂರು, ನಿದಿಗೆ, ಬೈಕ್ ಸವಾರ ಸಾವು, ಸೆಕ್ಯುರಿಟಿ ಗಾರ್ಡ್, ಆನವಟ್ಟಿ ಗಾಯ, Road Accidents Shivamogga, Two Deaths, Holehonnur Accident, Nidige Fatal Accident, Security Guard Killed, Anavatti Injury, Shivamogga road accidents October 13

Shivamogga road accidents October 13 Double Tragedy in Shivamogga: Two Fatal Road Accidents Reported in Holehonnur and Nidige
Double Tragedy in Shivamogga: Two Fatal Road Accidents Reported in Holehonnur and Nidige

Shivamogga road accidents

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *