ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಪೊಲೀಸರು ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳನ್ನ ಪತ್ತೆ ಹಚ್ಚಿದ್ದು, ಆ ಪ್ರಕಟಣೆಗಳ ಪ್ರಾಪರ್ಟಿ ರಿಟರ್ನ್​​ ಪರೇಡ್ Property Return Parade ನಿನ್ನೆ ಭಾನವಾರ, ಶಿವಮೊಗ್ಗ ಪೊಲೀಸ್​ ಇಲಾಖೆಯ ಡಿಎಆರ್​ ಸಭಾಂಗಣದಲ್ಲಿ ನಡೆಯಿತು. ಈ ಪರೇಡ್​ನಲ್ಲಿ ಪತ್ತೆ ಹಚ್ಚಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲಾಗಿದೆ. 

Shivamogga Police Property Return Parade 2025
Shivamogga Police Property Return Parade 2025

 2025 ನೇ ಸಾಲಿನಲ್ಲಿ ದಾಖಲಾದ 222 ಪ್ರಕರಣಗಳು ಹಾಗೂ ಹಿಂದಿನ ವರ್ಷಗಳ 48 ಪ್ರಕರಣಗಳು ಸೇರಿದಂತೆ ಒಟ್ಟು 270 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಇವುಗಳಿಗೆ ಸಂಬಂಧಿಸಿದ ಒಟ್ಟು 6,43,65,477/- ರೂಪಾಯಿ ಅಂದಾಜು ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇದರೊಂದಿಗೆ CEIR ಪೋರ್ಟಲ್ ಬಳಸಿಕೊಂಡು ಪತ್ತೆ ಮಾಡಲಾದ ಒಟ್ಟು 3015 ಮೊಬೈಲ್ ಫೋನ್‌ಗಳ ಪೈಕಿ 1320 ಮೊಬೈಲ್ ಫೋನ್‌ಗಳನ್ನು ಕೂಡ ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

2025 ನೇ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಪೊಲೀಸರು 270 ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲಾಭಕ್ಕಾಗಿ ನಡೆದ 2 ಕೊಲೆ ಪ್ರಕರಣಗಳು, 8 ದರೋಡೆ, 17 ಸುಲಿಗೆ, 14 ಸರಗಳ್ಳತನ, 48 ಕನ್ನಕಳವು, 12 ಮನೆಗಳ್ಳತನ, 37 ಸಾಮಾನ್ಯ ಕಳವು, 12 ಜಾನುವಾರು ಕಳವು, 53 ವಾಹನ ಕಳವು ಹಾಗೂ 19 ವಂಚನೆ ಪ್ರಕರಣಗಳು ಒಳಗೊಂಡಿವೆ. ಈ ಇನ್ನುಳಿದಂತೆ ಹಿಂದಿನ ವರ್ಷಗಳ ಬಾಕಿ ಇದ್ದ 2 ದರೋಡೆ, 17 ಮನೆಗಳ್ಳತನ, 9 ಸಾಮಾನ್ಯ ಕಳವು, 1 ವಂಚನೆ ಹಾಗೂ 19 ವಾಹನ ಕಳವು ಸೇರಿದಂತೆ ಒಟ್ಟು 48 ಪ್ರಕರಣಗಳನ್ನು ಪತ್ತೆ ಮಾಡಿ 89,43,125/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಹಿಂಪಡೆಯಲಾಗಿದೆ ಎಂದು ಇಲಾಖೆ ತಿಳಿಸಿದೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

 Shivamogga Police Property Return Parade 2025

 Shivamogga Police Property Return Parade 2025
Shivamogga Police Property Return Parade 2025