Shivamogga police july 12 : ಶಿವಮೊಗ್ಗದ ಶಾಲೆಗಳಲ್ಲಿ ಪೊಲೀಸರ ಪಾಠ

prathapa thirthahalli
Prathapa thirthahalli - content producer

Shivamogga police : ಶಿವಮೊಗ್ಗದ ಶಾಲೆಗಳಲ್ಲಿ ಪೊಲೀಸರ ಪಾಠ

Shivamogga police  ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರಮುಖ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಷ್ಟೆ ಅಲ್ಲದೆ,  ಮಾದಕ ವಸ್ತುಗಳ ದುಷ್ಪರಿಣಾಮ, ಸಂಚಾರ ನಿಯಮಗಳು, ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹದಂತಹ ಗಂಭೀರ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸರ ಈ ಪ್ರಯತ್ನ ಮಕ್ಕಳಲ್ಲಿ ಜಾಗೃತಿಯು ಸಹ ಮೂಡಿಸುತ್ತಿರುವುದು ಗಮನಾರ್ಹ. 

ಕಳೆದ  ಜುಲೈ 9ರಂದು ಆನಂದಪುರ ಪೊಲೀಸ್ ಠಾಣೆಯ ಎಸ್​ಐ ಪ್ರವೀಣ್ ಅವರು ತಮ್ಮ ಠಾಣಾ ವ್ಯಾಪ್ತಿಯ ಐಗಿನಬೈಲು ಚೆನ್ನಮ್ಮಾಜಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು, ಕಾನೂನು ಪಾಲನೆಯ ಮಹತ್ವ, ಸಂಚಾರ ನಿಯಮಗಳು ಹಾಗೂ ಅವುಗಳ ಪಾಲನೆಯ ಅನಿವಾರ್ಯತೆ ಕುರಿತು ತಿಳಿಸಲಾಯಿತು. ಇದರ ಜೊತೆಗೆ, ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋ ಕಾಯ್ದೆ ಬಗ್ಗೆಯೂ ಸಮಗ್ರ ಮಾಹಿತಿ ನೀಡಿದರು. 

Shivamogga police  ಸಮವಸ್ತ್ರ ದಾರಿ ಪೊಲೀಸರಿಂದಲೇ ತಮಗೆ ಸಂಬಂಧಿಸಿದ ವಿಷಯಗಳನ್ನು ಅರಿತ ಮಕ್ಕಳು, ತಮ್ಮ ಸಂಶಯಗಳನ್ನು ಸಹ ಪೊಲೀಸರ ಬಳಿ ಪ್ರಶ್ನೆಯನ್ನು ಕೇಳುವ ಮೂಲಕ ಬಗೆಹರಿಸಿಕೊಂಡರು ಇತ್ತ  ಜುಲೈ 10ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಲಾ ಅವರು ಠಾಣಾ ವ್ಯಾಪ್ತಿಯ ಅರಹತೊಳಲು ಗ್ರಾಮದ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಮತ್ತು ಕೆಲವು ಸಾಮಾನ್ಯ ಕಾನೂನುಗಳ ಕುರಿತು ವಿವರವಾಗಿ  ತಿಳಿಸಿದರು. 

ಮಕ್ಕಳ ಸಂಶಯಗಳನ್ನು ಪರಿಹರಿಸಿದ್ದಷ್ಟೆ ಅಲ್ಲದೆ ಆಪ್ತವಾದ ವಿಚಾರಗಳ ಬಗ್ಗೆಯು ಮುಕ್ತವಾಗಿ ವಿವರಿಸಿದರು.ಇದರಿಂದ ವಿದ್ಯಾರ್ಥಿಗಳಲ್ಲಿದ್ದ ಹಲವು ವಿಷಯಗಳ ಸ್ಪಷ್ಟತೆಗಳು ಸಿಕ್ಕಿದ್ದವು.  ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯ ಅಧಿಕಾರಿ-ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.  ಶಿವಮೊಗ್ಗ ಪೊಲೀಸ್ ಇಲಾಖೆ ಸಾಕಷ್ಟು ಇಂತಹ ಭಿನ್ನ ಹೆಜ್ಜೆಗಳನ್ನು ಇಡುತ್ತಿದೆ. ಸಣ್ಣ ಸಣ್ಣ ಎನಿಸುವಂತಹ ಇಂತಹ ಕಾರ್ಯಕ್ರಮಗಳಲ್ಲಿ ಆಟವಾಡುವ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಮುಂದಿನ ಬದುಕಿನ ಹಾದಿಯಲ್ಲಿ ದೈರ್ಯವಾಗಿ ಸಾಗುವ ಜ್ಞಾನ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ   ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಮತ್ತಷ್ಟು ಶಾಲೆಗಳಲ್ಲಿ ಪೊಲೀಸ್ ಇಲಾಖೆ ಮುಂದುವರಿಸಬೇಕಿದೆ.

Shivamogga police ಮಕ್ಕಳಿಗೆ ಕಾನೂನು ಅರಿವು ಮೂಡಿಸುತ್ತಿರುವ ಪೊಲೀಸರು
Shivamogga police ಮಕ್ಕಳಿಗೆ ಕಾನೂನು ಅರಿವು ಮೂಡಿಸುತ್ತಿರುವ ಪೊಲೀಸರು
Share This Article