shivamogga news today : ಮೋದಿ ಕೈಗೆ ಕೋಳ ತೊಡಿಸಿದ ಪೋಟೋ ಫೇಸ್​ಬುಕ್​ಲ್ಲಿ ಪೋಸ್ಟ್ | ಶಿವಮೊಗ್ಗದಲ್ಲಿ ಬಿತ್ತು ಸುಮೋಟೋ ಕೇಸ್

prathapa thirthahalli
Prathapa thirthahalli - content producer

shivamogga news today : ರಾವಲ್ಪಿಂಡಿಯ ಅಡಿಯಾಲ ಜೈಲಿನ ಮುಂದೆ ಪ್ರಧಾನಿ ನರೇಂದ್ರ ಮೋದಿ ಕೈಗೆ ಕೋಳ ತೊಡಿಸಿದ  ಫೊಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನ ಮೇಲೆ  ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

shivamogga news today : ಏನಿದು ಪ್ರಕರಣ

ಮುಜಾಮಿಲ್​ ಮುಜ್​​ ಎಂಬಾತನು ಶಿವಮೊಗ್ಗದಲ್ಲಿದ್ದಾಗ ಫೇಸ್​ಬುಕ್​ ಅಕೌಂಟ್​ನ್ನು ಕ್ರಿಯೇಟ್​ ಮಾಡಿದ್ದ. ಹಾಗೆಯೇ  ಪಾಕ್ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ ಫೇಸ್​ಬುಕ್​ ನಲ್ಲಿ ಭಾರತದ ಪ್ರಧಾನಿಗೆ ರಕ್ತ ಸಿಕ್ತ ಬಟ್ಟೆಯನ್ನ ತೊಡಿಸಿ ಇಬ್ಬರು ಸೈನಿಕರ ಜೊತೆ ನಿಂತಿರುವಂತೆ ಫೋಟೊ ಕ್ರಿಯೇಟ್ ಮಾಡಿ ಹರಿಬಿಟ್ಟಿದ್ದ. ನಂತರ ಆತ ದುಬೈಗೆ ತೆರಳಿದ್ದ. ಇದೀಗ  ಮುಜಾಮಿಲ್​ ಮುಜ್​​  ವಿರುದ್ದ ರಾಷ್ಟ್ರದ ವಿರುದ್ಧ ಮತ್ತು ದೇಶದ ಸಾರ್ವಜನಿಕರ ಭಾವನೆಗೆ ಕೆರಳಿಸುವ ಪ್ರಕರಣ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಿಲಾಗಿದೆ.

 

Share This Article