shivamogga news today ಶಿವಮೊಗ್ಗದಲ್ಲಿ ಕಳ್ಳತನವಾಗುತ್ತಿದೆ ನೀರಿನ ಮೀಟರ್, ಹುಷಾರ್
ಶಿವಮೊಗ್ಗ : ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಮೂರ್ನಾಲ್ಕು ಮನೆಗಳ ನೀರಿನ ಮೀಟರ್‌ಗಳು ಕಳ್ಳತನವಾಗಿರುವ ಘಟನೆ ವರದಿಯಾಗಿದೆ.
ಜೂನ್ 18 ರಂದು ರಾತ್ರಿ, ಯಾರೋ ಕಳ್ಳರು ಟಿಪ್ಪು ನಗರದ ಹಲವು ಮನೆಗಳ ಹೊರಗೆ ಅಳವಡಿಸಲಾಗಿದ್ದ ನೀರಿನ ಮೀಟರ್‌ಗಳನ್ನು ಕದ್ದೊಯ್ದಿದ್ದಾರೆ. ನಿವಾಸಿಗಳು ತಕ್ಷಣ 112 ERV ಪೊಲೀಸರಿಗೆ ಗೆ ಕರೆ ಮಾಡಿ ದೂರು ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದಾದ ನಂತರ, ಪೊಲೀಸರಿಗೆ ಅಧಿಕೃತ ದೂರು ಸಹ ನೀಡಲಾಗಿದೆ. ಈ ಹಿನ್ನಲೆ ಮುಂದಿನ ಕ್ರಮಕ್ಕಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
