ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

Shivamogga | ಶಿವಮೊಗ್ಗದಲ್ಲಿ ನಡೆದ  ಪ್ರಮುಖ ದುರಂತ ಮತ್ತು ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ

ಭದ್ರಾ ನಾಲೆಯಲ್ಲಿ ಮತ್ತೆರಡು ಶವ ಪತ್ತೆ

ಭದ್ರಾ ನಾಲೆಯಲ್ಲಿ ನೀರುಪಾಲಾಗಿದ್ದ ಅರೆಬಿಳಚಿಯ ಒಂದೇ ಕುಟುಂಬದ ನಾಲ್ವರ ಶೋಧಕಾರ್ಯ ಮುಂದುವರಿದಿದ್ದು, ರವಿ ಮೃತದೇಹ ಪತ್ತೆಯಾದ ದಿನ ಕಳೆದ ಬಳಿಕ ತಾಯಿ ನೀಲಮ್ಮ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಇದರ ನಡುವೆ  ಶೋಧಕಾರ್ಯದ ವೇಳೆ ಅನಾರೋಗ್ಯದಿಂದ ಬೇಸತ್ತು ನಾಲೆಗೆ ಹಾರಿದ್ದ ತಿಪ್ಲಾಪುರದ ಲಲಿತಮ್ಮ (60) ಅವರ ಶವ ಕೂಡ ಪತ್ತೆಯಾಗಿದೆ.  ಸ್ಥಳದಲ್ಲಿ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂಧಿ ಶೋಧಕಾರ್ಯ ಮುಂದುವರಿಸಿದ್ದಾರೆ 

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ

ಜೈಲಿಗೆ ಹಿರಿಯ ಅಧಿಕಾರಿ ಅಲೋಕ್​ ಕುಮಾರ್ ಭೇಟಿ

ನಿನ್ನೆ ದಿನದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಮಾನದ ಮೂಲಕ ಶಿವಮೊಗ್ಗಕ್ಕೆ ಬಂದ ಅಲೋಕ್​ಕುಮಾರ್​ರವರನ್ನು ಎಸ್​ಪಿ ನಿಖಿಲ್ ಬಿ ಹಾಗೂ ಶಿವಮೊಗ್ಗ ಕೇಂದ್ರ ಕಾರಾಗೃಹ ಇಲಾಖೆಯ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಪಿ ಮತ್ತು ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ ಶಿವಮೊಗ್ಗ ಜೈಲ್​ಗೆ ವಿಸಿಟ್ ಮಾಡಿದ ಅಲೋಕ್ ಕುಮಾರ್​ ಅಲ್ಲಿ ನಿರ್ಮಾಣ ಹಂತದಲ್ಲಿರುವ ಹೈಸೆಕ್ಯೂರಿಟಿ ಜೈಲು ಮತ್ತು ಕೈದಿಗಳ ಬ್ಯಾರಕ್‌ಗಳನ್ನು ವೀಕ್ಷಿಸಿದರು.

Shivamogga News Roundup
Shivamogga News Roundup ಶಿವಮೊಗ್ಗ ಸುದ್ದಿ ಸಂಚಯ ಜೈಲಿಗೆ ಅಲೋಕ್ ಕುಮಾರ್ ಭೇಟಿ, ನಾಲೆಯಲ್ಲಿ ಶವಗಳು ಪತ್ತೆ, ರೈಲು ಡಿಕ್ಕಿ Shivamogga News Roundup: Alok Kumar Visits Jail, Bodies Found in Canal, Train Accident

ರೈಲಿಗೆ ಸಿಲುಕಿ ವೃದ್ಧ ಸಾವು

ಶಿವಮೊಗ್ಗ ನಗರದ ಕಾಶಿಪುರ ರೈಲ್ವೆ ಗೇಟ್ ಬಳಿ ತಾಳಗುಪ್ಪ ಪ್ಯಾಸೆಂಜರ್ ರೈಲಿಗೆ ಸಿಲುಕಿ ವಿನೋಬನಗರದ ಕಲ್ಲಹಳ್ಳಿ ನಿವಾಸಿ ಈಶ್ವರಪ್ಪ (68) ಎಂಬುವರು ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 