ಶಿವಮೊಗ್ಗ: ಹಣ ನೀಡಲು ನಿರಾಕರಿಸಿದ 68 ವರ್ಷದ ವೃದ್ಧೆಯೊಬ್ಬರ ಮೇಲೆ ಕಬ್ಬಿಣದ ಕೊಳವೆ ಮತ್ತು ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ, ಆಭರಣ ಕಸಿದು ಪರಾರಿಯಾಗಿದ್ದ ಆರೋಪಿಗೆ ಶಿವಮೊಗ್ಗದ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯವು ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು ₹20,000 ದಂಡ ವಿಧಿಸಿ ತೀರ್ಪು ನೀಡಿದೆ.

ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ!
21-01-2021 ರಂದು ತೀರ್ಥಹಳ್ಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದ ನಿವಾಸಿ ಕಿರಣ್ (27) ಎಂಬಾತನು ಮೂವಳ್ಳಿ ಗ್ರಾಮದ ಶಾರದಮ್ಮ (68) ಎಂಬುವವರ ಬಳಿ ಹಣ ಕೇಳಿದ್ದಾನೆ. ಶಾರದಮ್ಮ ಅವರು ಹಣ ನೀಡಲು ನಿರಾಕರಿಸಿದ ಕಾರಣ, ಕೋಪಗೊಂಡ ಆರೋಪಿ ಕಿರಣ್ ಶಾರದಮ್ಮ ಅವರ ತಲೆಯ ಹಿಂಭಾಗಕ್ಕೆ ಕಬ್ಬಿಣದ ಕೊಳವೆ ಮತ್ತು ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ, ಆತ ಮೃತಳಾಗಿದ್ದ ಶಾರದಮ್ಮ ಅವರ ಮೈ ಮೇಲಿದ್ದ ಬಂಗಾರದ ಕಿವಿಯೋಲೆಗಳನ್ನು ಕಸಿದುಕೊಂಡು ಹೋಗಿದ್ದಾನೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0014/2021 ಕಲಂ 302 (ಕೊಲೆ) ಮತ್ತು 397 (ದರೋಡೆ ಮತ್ತು ಕೊಲೆಯ ಯತ್ನ) ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಾಳೂರು ವೃತ್ತದ ಸಿ.ಪಿ.ಐ ಪ್ರವೀಣ್ ನೀಲಮ್ಮ ನವರ್ ಅವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.ಶಿವಮೊಗ್ಗದ 3ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಾಂತರಾಜ್. ಜೆ. ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದಯಶವಂತ ಕುಮಾರ್ ಅವರು ಆರೋಪಿ ಕಿರಣ್ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಆರೋಪಿಗೆ ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 20,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.


