shivamogga news : ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ವಿರುದ್ಧ ಮೇ 24 ರಂದು ಖರ್ಗೆ ಹಠಾವೋ ಕಲಬುರಗಿ ಬಚಾವೋ ಎಂಬ ಹೋರಾಟ ನಡೆಸುತ್ತಿದ್ದೇವೆ ಎಂದು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಎಲ್ ಕೆ ಜಗದೀಶ್ ಹೇಳಿದರು.
ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಸಚಿವರು ಹಾಗೂ ಅವರ ಬೆಂಬಲಿಗರು ವಿಧಾನ ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿಯನ್ನು ಕೂಡಿ ಹಾಕಿ ದಾಳಿ ನಡೆಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುವ ತಿಳುವಳಿಕೆ ಅವರಿಗೆ ಇಲ್ಲ. ನಮ್ಮ ಇಡೀ ರಾಜ್ಯದ ಕಾನೂನು ಕಾಂಗ್ರೆಸಿನ ಕೆಲ ಸಚಿವರ ಕೈಯಲ್ಲಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಕಳೆದ 2 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನಮಗೆ ಸಂವಿಧಾನಾತ್ಮಕವಾಗಿ ಬೆಲೆ ಸಿಗದಿದ್ದ ಮೇಲೆ ಶ್ಯಾಡೋ ಆಫ್ ಸಿಎಂ ರೀತಿ ನಡೆಸುವ ಬಗ್ಗೆ ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ಘಟನೆಯಲ್ಲಿ ಅದು ಸಿ ಎಂ ಅವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
shivamogga news : ಸದನದಲ್ಲಿ ಚಲುವಾದಿ ನಾರಾಯಣ ಸ್ವಾಮಿ ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ಬಗ್ಗೆ ಹೇಳಿದ್ದರು. ಇದೀಗ ಅದನ್ನು ಗುರಿಯಾಗಿಸಿಕೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂಬ ಅನುಮಾನಗಳು ನಮ್ಮಲ್ಲಿ ಮೂಡುತ್ತಿದೆ. ಮರಿ ಖರ್ಗೆ ಯವರೇ ನಿಮ್ಮ ತಂದೆ ಕೂಡಾ ಸಂವಿಧಾನಾತ್ಮಕ ಸ್ಥಾನದಲ್ಲಿ ಇದ್ದಾರೆ, ಅವರಿಗೂ ಬಿಜೆಪಿ ಕಾರ್ಯಕರ್ತರು ಇದೇ ರೀತಿ ನಡೆಸಿಕೊಂಡಿದ್ದರೆ ಏನಾಗುತ್ತಿತ್ತು ಎಂಬುದನ್ನು ಯೋಚಿಸಿ ಎಂದರು.


shivamogga news : ರಾಹಲ್ ಗಾಂಧಿಯನ್ನು ಮೆಚ್ಚಿಸುವ ಮಾತುಗಳನ್ನು ಆಡಬೇಡಿ
ಹಿಂದುಳಿದ ದಲಿತ ನಾಯಕರನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮಾತೆತ್ತಿದರೆ ಸಂವಿಧಾನ ಎನ್ನುವ ಕಾಂಗ್ರೆಸಿಗರ ಈ ನಡವಳಿಕೆ ಅಕ್ಷಮ್ಯ ಅಪರಾದವಾಗಿದೆ. ನಿಮಗೆ ಅಷ್ಟು ಕಾಳಜಿ ಇದ್ದರೆ ಗ್ರಾಮೀಣ ಅಭಿವೃದ್ಧಿಗಳ ಬಗ್ಗೆ ಮಾತನಾಡಿ. ಆದರೆ ಸೋನಿಯಾ ಗಾಂಧಿ ರಾಹುಲ್ ಗಾಂಧಿಯವರನ್ನು ಮೆಚ್ಚಿಸುವ ಮಾತುಗಳನ್ನು ಆಡಬೇಡಿ. ಈ ಹಿನ್ನಲೆ ಮೇ 24 ರಂದು ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರಗಿ ಬಚಾವೋ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳೇ ಪ್ರಿಯಾಂಕ್ ಖರ್ಗೆಯವರ ಗೂಂಡಾಗಿರಿಯನ್ನು ತಡೆಯಲು ಅವರ ಬಳಿ ರಾಜಿನಾಮೆ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.