Shivamogga is Malnad Regional Health Hub july 24 ಶಿವಮೊಗ್ಗ, ಜುಲೈ 24, 2025: ಸದ್ಯ ಶಿವಮೊಗ್ಗದಲ್ಲಿ ಅಭಿವೃದ್ಧಿಯ ವಿಚಾರಕ್ಕೆ ಸಾಕಷ್ಟು ರಾಜಕಾರಣ ನಡೆಯುತ್ತಿದೆ. ಈ ಕುರಿತಾದ ಟೀಕೆ ಟಿಪ್ಪಣಿಗಳು ಮಲ್ನಾಡ್ನ ಜನತೆಗೆ ಇನ್ನಷ್ಟು ಅನುಕೂಲತೆಯನ್ನೆ ನೀಡುತ್ತಿದೆ. ಇದೆಲ್ಲದ ನಡುವೆ ರಾಜ್ಯ ಸರ್ಕಾರ, ಮಲೆನಾಡು ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದೆ. ಈಓ ನಿಟ್ಟಿನಲ್ಲಿ ಶಿವಮೊಗ್ಗವನ್ನು ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಥವಾ ಹೆಲ್ತ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಘೋಷಿಸಿದ್ದಾರೆ. ಈ ಮಹತ್ವದ ನಿರ್ಧಾರವು ಬೆಂಗಳೂರಿನ ವಿಕಾಸ ಸೌಧದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ Shivamogga is Malnad Regional Health Hub july 24
ಶಿವಮೊಗ್ಗವನ್ನು ಪೂರ್ಣ ಪ್ರಮಾಣದ ಪ್ರಾದೇಶಿಕ ಆರೋಗ್ಯ ಕೇಂದ್ರವನ್ನಾಗಿ (regional health center) ಪರಿವರ್ತಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ವೈದ್ಯಕೀಯ ಕಾಲೇಜುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಲವು ವೈದ್ಯಕೀಯ ಸಂಸ್ಥೆಗಳನ್ನು ಶಿವಮೊಗ್ಗ ಒಳಗೊಂಡಿರುತ್ತದೆ.
ಉತ್ತಮ ರಸ್ತೆ, ರೈಲು ಮತ್ತು ವಾಯು ಸಂಪರ್ಕದಿಂದಾಗಿ ಶಿವಮೊಗ್ಗವು ಪ್ರಾದೇಶಿಕ ಆರೋಗ್ಯ ಕೇಂದ್ರಕ್ಕೆ ಸೂಕ್ತ ಕೇಂದ್ರವಾಗಿದೆ. ಕಲಬುರಗಿಯನ್ನು ಕಲ್ಯಾಣ ಕರ್ನಾಟಕದ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿದಂತೆ, ಶಿವಮೊಗ್ಗವು ಈಗ ಮಲೆನಾಡು ಪ್ರದೇಶದ ವೈದ್ಯಕೀಯ ಸೇವೆಗಳ ‘ಹಬ್’ ಆಗಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.



ಪ್ರಸ್ತುತ, ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದು, ವೈದ್ಯರು ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹೊರೆಯನ್ನು ಕಡಿಮೆ ಮಾಡಲು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹೊಸ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಹೆಚ್ಚಿನ ಹಣ ಹೂಡಿಕೆ ಮಾಡಲಾಗುವುದು ಎಂದು ಡಾ. ಶರಣಪ್ರಕಾಶ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಗೆ ಹೊಸ ಸೌಲಭ್ಯ Shivamogga is Malnad Regional Health Hub july 24
ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚುವರಿ ಎಂಆರ್‌ಐ ಯಂತ್ರ (MRI machine) ಮತ್ತು ಶವ ಸಾಗಿಸುವ ವಾಹನವನ್ನು ಖರೀದಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Shivamogga to Become Malnads Regional Health Hub with New Super Specialty Hospital McGann and SIMS july 24
ಮಲೆನಾಡು, ಆರೋಗ್ಯ ಕೇಂದ್ರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಗ್ಗಾನ್ ಆಸ್ಪತ್ರೆ, ಸಿಮ್ಸ್, ಡಾ. ಶರಣಪ್ರಕಾಶ ಪಾಟೀಲ್, ಮಧು ಬಂಗಾರಪ್ಪ, ವೈದ್ಯಕೀಯ ಸೇವೆ, ಮೂಲಸೌಕರ್ಯ , Malnad, health hub, super specialty hospital, McGann hospital, SIMS, Dr. Sharanprakash Patil, Madhu Bangarappa, healthcare services, infrastructure , #Shivamogga, #HealthHub, #Malnad, #SuperSpecialtyHospital, #Healthcare, #Karnataka, #McGannHospital, #SIMS, #MedicalNews