Shivamogga Idli Vendor Returns Lost 1 Lakh Wins SPs Praise ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಕಳೆದ ನವೆಂಬರ್ 4, 2025 ರ ರಾತ್ರಿ ನಡೆದ ಘಟನೆ ಇದು. ಪ್ರಾಮಾಣಿಕವಾದ ಉದ್ದೇಶಕ್ಕೆ ಅದೇ ಪ್ರಾಮಾಣಿಕತೆ ಸಹಕರಿಸುತ್ತದೆ ಎಂಬುದಕ್ಕೆ ಉದಾಹರಣೆ ಇದು.
ಆಸ್ಪತ್ರೆಯಲ್ಲಿದ್ದ ವ್ಯಕ್ತಿಯ ಚಿಕಿತ್ಸೆಗಾಗಿ ತಂದಿದ್ದ ಹಣ ಕವರ್ವೊಂದನ್ನ ಕಳೆದುಕೊಂಡ ವ್ಯಕ್ತಿ ಕಂಗಾಲಾಗಿದ್ದಾಗ, ಆತನ ಅರಿವಿಗೆ ಇಲ್ಲದಂತೆ ಅದೇ ಹಣ ಆತನ ಕೈ ಸೇರಿದೆ.

ಹಿತ್ತಲಿಗೆ ಬಂದು ಅದನ್ನು ತೋರಿಸಿದ ಕಾಮುಕ | ಮಹಿಳೆ ಎಸ್ಕೇಪ್ | ದಾಖಲಾಯ್ತು ಕೇಸ್
ನಡೆದಿದ್ದೇನು?
ಮದು ಕೇಶವ್ ಎಂಬುವವರು ಆನವಟ್ಟಿಯಿಂದ ಶಿವಮೊಗ್ಗಕ್ಕೆ ಬಂದಿದ್ದರು. ರಾತ್ರಿ ಆಲ್ಕೊಳ ಸರ್ಕಲ್ ಸಮೀಪದ ಇಡ್ಲಿ ಗಾಡಿಯಲ್ಲಿ ಇಡ್ಲಿ ತಿಂದು ಹೋಗುವಾಗ ಆತುರದಲ್ಲಿ ತಾವು ತಂದಿದ್ದ ಒಂದು ಪ್ಲಾಸ್ಟಿಕ್ ಕವರ್ ಅನ್ನು ಅಲ್ಲೇ ಮರೆತು ಹೋಗಿದ್ದರು. ಆನಂತರ ಅವರಿಗೆ ತಾವು ತಂದಿದ್ದ ಕವರ್ ಎಲ್ಲಿ ಹೋಯಿತು ಎಂಬುದು ಸಹ ಗೊತ್ತಾಗದೆ ಆತಂಕದಲ್ಲಿದ್ದರು. ಏಕೆಂದರೆ ಅದರಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ಇತ್ತು. ತಕ್ಷಣಕ್ಕೆ ಅಷ್ಟೊಂದು ದುಡ್ಡು ಹೊಂದಿಸುವುದು ಸಹ ಕಷ್ಟವೆ. ಅದರಲ್ಲಿಯು ಮದು ಕೇಶವ್ ತುರ್ತಾಗಿ ತಮ್ಮ ಸ್ನೇಹಿತನ ಚಿಕಿತ್ಸೆಗಾಗಿ ಆ ಹಣವನ್ನು ನಾರಾಯಣ ಹೃದಯಾಲಯಕ್ಕೆ ಕಟ್ಟಬೇಕಿತ್ತು. ಹೀಗಾಗಿ ಆತಂಕ ಸ್ವಲ್ಪ ಹೆಚ್ಚಾಗಿಯೇ ಇತ್ತು.
ಮರಳಿ ಬಂದ ಹಣ!
ಅತ್ತ ಮದು ಕೇಶವ್ ತಮ್ಮ ಹಣ ಎಲ್ಲಿ ಬಿಟ್ಟೆ, ಯಾರಾದ್ರೂ ಎತ್ಕೊಂಡು ಹೋದ್ರಾ? ಏನಾಯ್ತು ಅಂತಾ ಯೋಚಿಸುತ್ತಿರುವಾಗಲೆ ಇತ್ತ ಆಲ್ಕೊಳದಲ್ಲಿ ಮತ್ತೊಂದು ಸನ್ನಿವೇಶ ನಡೆಯಿತು. ಇಡ್ಲಿ ಗಾಡಿಯ ಮಾಲೀಕ ತಿರುಮೂರ್ತಿ, ಕಸ್ಟಮರ್ ಯಾರೋ ಪ್ಲಾಸ್ಟಿಕ್ ಕವರ್ ಬಿಟ್ಟು ಹೋಗಿದ್ದಾರಲ್ಲ, ವಾಪಸ್ ಬಂದು ಕೇಳಬಹುದು ಎಂದುಕೊಂಡು ಆ ಕವರ್ನ್ನ ಎತ್ತಿಯಿಟ್ಟಿದ್ರು. ಬಳಿಕ ಅದರೊಳಗೆ ಏನಿದೆ ಎಂದು ನೋಡಿದ ಅವರಿಗೂ ಆಘಾತವಾಗಿತ್ತು. ದಿನದುಡಿವ ಮಂದಿ ನಿದಿ ಸಿಕ್ಕರೂ ಹರ್ಷದ ಕೂಳಿಗೆ ಆಸಪಡರು ಎಂಬಂತೆ, ತಿರುಮೂರ್ತಿ ತಕ್ಷಣವೇ ತುಂಗಾನಗರ ಪೊಲೀಸ್ ಸ್ಟೇಷನ್ಗೆ ತೆರಳಿದ್ದಾರೆ. ಅಲ್ಲಿನ ಇನ್ ಸ್ಪೆಕ್ಟರ್ ಕೆಟಿ ಗುರುರಾಜರವರನ್ನ ಭೇಟಿಯಾಗಿ, ಸಾರ್, ಲಕ್ಷ ರೂಪಾಯಿ ಸಿಕ್ಕಿದೆ, ಯಾರೋ ಕಸ್ಟಮರ್ ಬಿಟ್ಟು ಹೋಗಿದ್ದಾರೆ. ಅವರಿಗೆ ತಲುಪಿಸಿ ಎಂದು ಪ್ಲಾಸ್ಟಿಕ್ ಕವರ್ನ್ನು ಇನ್ಸ್ಪೆಕ್ಟರ್ ಗುರುರಾಜರವರ ಕೈಗೆ ಇಟ್ಟಿದ್ದಾರೆ.
ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆಯಲು ಉಪನ್ಯಾಸಕರಿಂದ ಡಿಸಿ ಮೂಲಕ ಸಿಎಂಗೆ ಮನವಿ
ಸಿಕ್ಕಹಣವನ್ನು ತಂದುಕೊಟ್ಟ ತಿರುಮೂರ್ತಿಯ ಪ್ರಾಮಾಣಿಕತೆಗೆ ಬೆಲೆ ಸಿಗಬೇಕಾದರೆ, ಆ ಹಣ ಅದರ ಮಾಲೀಕರ ಕೈ ಸೇರಬೇಕಿತ್ತಿ. ಆ ಕೆಲಸಕ್ಕೆ ಇಳಿದ ತುಂಗಾನಗರ ಪೊಲೀಸರು ಹಣದ ಮಾಲೀಕ ಮದು ಕೇಶವ್ರನ್ನ ಠಾಣೆಗೆ ಕರೆಸಿಕೊಂಡಿದ್ದಾರೆ. ಹಣ ನಿಜಕ್ಕೂ ಅವರದ್ದೇನಾ ಅಂತಾ ವಿಚಾರಿಸಿದ್ದಾರೆ. ಬಳಿಕ ಇಡ್ಲಿ ಗಾಡಿಯ ಮಾಲೀಕರ ಬಳಿಯು ಖಾತರಿಪಡಿಸಿಕೊಂಡು ಮದುಕೇಶವ್ರಿಗೆ ಜಾಗ್ರತೆಯ ಬಗ್ಗೆ ನಾಲ್ಕು ಮಾತು ಹೇಳಿ, ಹಣವನ್ನು ವಾಪಸ್ ನೀಡಿದ್ದಾರೆ.

ಹೀಗೆ, ಇಡ್ಲಿ ಗಾಡಿಯ ಕುರ್ಚಿ ಮೇಲೆ ಬಿಟ್ಟಿದ್ದ ಪ್ಲಾಸ್ಟಿಕ್ ಕವರ್ನಲ್ಲಿದ್ದ ಲಕ್ಷ ರೂಪಾಯಿ, ಮೂರು ನಾಲ್ಕು ಕೈ ದಾಟಿಕೊಂಡು ಪುನಃ ಅದರ ಮಾಲೀಕರ ಕೈ ಸೇರಿದೆ. ಈ ವಿಚಾರ ತಿಳಿದು ಎಸ್ಪಿ ಮಿಥುನ್ ಕುಮಾರ್, ಇಡ್ಲಿ ಗಾಡಿಯ ಮಾಲೀಕರ ತಿರುಮೂರ್ತಿಯನ್ನ ಅಭಿನಂದಿಸಿದ್ದಾರೆ. ಪೊಲೀಸರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!