shivamogga hero honda bike theft
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ಬಳಿ ಬೈಕ್ ಕಳ್ಳತನವಾಗಿದೆ. ಇದು ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪ್ರಕರಣ. ದಾಖಲಾಗಿರುವ ದೂರಿನ ಪ್ರಕಾರ, ನರಸಿಂಹ ಎಂಬವರು ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಅನ್ನು ಮಾಲ್ ಬಳಿ ನಿಲ್ಲಿಸಿದ್ದರು. ಬಳಿಕ ಅಲ್ಲಿಯೇ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿಸಿ ವಾಪಸ್ ಬರುವಾಗು ಅವರ ಬೈಕ್ ಕಳ್ಳತನವಾಗಿದೆ. ಸುತ್ತಮುತ್ತ ಹುಡುಕಾಡಿದ ಅವರು, ಬಳಿಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಪೊಲೀಸರು ಬೈಕ್ ಹಾಗೂ ಅದನ್ನು ಕದ್ದವನಿವಾಗಿ ಹುಡುಕಾಟ ನಡೆಸ್ತಿದ್ದಾರೆ.