ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ : ವಿಮಾನ ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ಲೈಟ್ ಲ್ಯಾಂಡಿಂಗ್ ಸಮಸ್ಯೆ ಮುಂದುವರಿದಿದೆ. ನಿನ್ನೆದಿನ ವಿಪರೀತ ಮಳೆ ಹಾಗೂ ಮಂಜು ಮುಸುಕಿನ ವಾತಾವರಣದ ಹಿನ್ನೆಲೆಯಲ್ಲಿ ತಿರುಪತಿ ಪ್ಲೈಟ್ ಶಿವಮೊಗ್ಗದಲ್ಲಿ ಲ್ಯಾಂಡ್ ಆಗುವ ಬದಲು ಬೆಳಗಾವಿ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಿದೆ. ಇದರಿಂದ ಪ್ರಯಾಣಿಕರು ಇಲ್ಲದ ತೊಂದರೆ ಅನುಭವಿಸುವಂತಾಗಿದೆ.
ನಿನ್ನೆ ಸಂಜೆ ಶಿವಮೊಗ್ಗದ ಹಲವೆಡೆ ವಿಪರೀತ ಗಾಳಿ ಬೀಸಿತ್ತು. ಗುಡುಗು, ಸಿಡಿಲು ಜೊತೆ ಮಳೆ ಆರ್ಭಟಿಸಿತ್ತು. ಈ ನಡುವೆ ಸಂಜೆ 4.55 ತಿರುಪತಿಯಿಂದ ಹೊರಟಿದ್ದ ವಿಮಾನವೂ ಸಂಜೆ ಆರು ಗಂಟೆ ಸುಮಾರಿಗೆ ಶಿವಮೊಗ್ಗ ಏರ್ಫೋರ್ಟ್ಗೆ ಆಗಮಿಸಿತ್ತು. ಆದರೆ ಶಿವಮೊಗ್ಗದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮೇಲಾಗಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ವಿಮಾನವನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ. ಸಂಜೆ 6.30 ರ ಸುಮಾರಿಗೆ ವಿಮಾನ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ
ಇದರಿಂದಾಗಿ ವಿಮಾನದಲ್ಲಿದ್ದ 60 ಪ್ರಯಾಣಿಕರು ಶಿವಮೊಗ್ಗಕ್ಕೆ ವಾಪಸ್ ಆಗಲು ಕಷ್ಟ ಪಡಬೇಕಾಯ್ತು. ನಿಗದಿತ ನಿಲ್ದಾಣದ ಬದಲಿಗೆ ಇನ್ನೆಲ್ಲೋ ಇಳಿಸಿದ ವಿಮಾನದ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ಸೂಕ್ತ ವ್ಯವಸ್ಥೆ ಕಲ್ಪಿಸಿ ಶಿವಮೊಗ್ಗ ತಲುಪಿಸುವಂತೆ ಪಟ್ಟುಹಿಡಿದರು. ಕೊನೆಗೆ ಪ್ರಯಾಣಿಕರ ಆಕ್ರೋಶಕ್ಕೆ ಮಣಿದು ರಾತ್ರಿ 10 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಿಗಾಗಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್ ಹತ್ತಿ ಶಿವಮೊಗ್ಗಕ್ಕೆ ಪ್ರಯಾಣಿಕರು ವಾಪಸ್ ಆಗಿದ್ದಾರೆ.
ಇನ್ನೂ ವಿಮಾನದ ಲ್ಯಾಂಡಿಂಗ್ ವಿಚಾರದಲ್ಲಿ ಆದ ಸಮಸ್ಯೆಗೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಮೇಲಾಗಿ ಪ್ರಯಾಣಿಕರ ಸಮಸ್ಯೆಯನ್ನು ಯಾರೊಬ್ಬರು ಆಲಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.

