ಮಳೆಯ ಅಬ್ಬರ! ಶಿವಮೊಗ್ಗದ 2 ಡ್ಯಾಮ್​ಗಳಿಂದ ನೀರು ಬಿಡುಗಡೆಯ ಮುನ್ನೆಚ್ಚರಿಕೆಯ ನೋಟಿಸ್!

ajjimane ganesh

Shivamogga Dams ಮಾಣಿ, ಲಿಂಗನಮಕ್ಕಿಯಿಂದ ನೋಟಿಸ್! ನದಿ ಪಾತ್ರದ ಜನರಿಗೆ ಎಚ್ಚರಿಕೆ

Shivamogga Dams ಶಿವಮೊಗ್ಗ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ  ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಮಾಣಿ ಮತ್ತು ಲಿಂಗನಮಕ್ಕಿ (Linganamakki Dam) ಜಲಾಶಯಕ್ಕೆ ಭರಪೂರ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆಯ ನೋಟಿಸ್ ಹೊರಡಿಸಲಾಗಿದೆ. ಈ ನೋಟಿಸ್​ನಲ್ಲಿ  ಕರ್ನಾಟಕ ವಿದ್ಯುತ್ ನಿಗಮ (KPCL) ನದಿ ಪಾತ್ರದ ಜನರಿಗೆ ಸುರಕ್ಷತಾ ಮುನ್ಸೂಚನೆಗಳನ್ನು (Safety Alert) ನೀಡಿದೆ.

ಮಾಣಿ ಜಲಾಶಯ: ಮೂರು ವರ್ಷಗಳ ನಂತರ ಭರ್ತಿಯತ್ತ

ಮಾಣಿ ಜಲಾಶಯ, ಲಿಂಗನಮಕ್ಕಿ ಜಲಾಶಯ, ಕರ್ನಾಟಕ ವಿದ್ಯುತ್ ನಿಗಮ, ಕೆಪಿಸಿ, ವರಾಹಿ ನದಿ, Mani Dam, Linganamakki Dam, KPCL, Varahi River, #ShivamoggaDams #DamSafety #KarnatakaFloods  
ಮಾಣಿ ಜಲಾಶಯ, ಲಿಂಗನಮಕ್ಕಿ ಜಲಾಶಯ, ಕರ್ನಾಟಕ ವಿದ್ಯುತ್ ನಿಗಮ, ಕೆಪಿಸಿ, ವರಾಹಿ ನದಿ, Mani Dam, Linganamakki Dam, KPCL, Varahi River, #ShivamoggaDams #DamSafety #KarnatakaFloods

ಹೊಸನಗರ ತಾಲೂಕಿನಲ್ಲಿರುವ ಮಾಣಿ ಜಲಾಶಯಕ್ಕೆ ಪ್ರಸ್ತುತ 5087 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ನೀರಿನ ಮಟ್ಟ 590 ಮೀಟರ್ ತಲುಪಿದ ತಕ್ಷಣ ನೀರು ಹೊರಬಿಡಲಾಗುತ್ತದೆ ಎಂದು ಕೆಪಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ಇದರ ಗರಿಷ್ಟ ಎತ್ತರ  594.36 ಮೀಟರ್, ಸದ್ಯ ಇಲ್ಲಿ 588 ಮೀಟರ್​ನಷ್ಟು ನೀರಿದೆ. ವಿಶೇಷ ಅಂದರೆ, ಮೂರು ವರ್ಷಗಳ ಬಳಿಕ ಮಾಣಿ ಜಲಾಶಯ ಭರ್ತಿಯಾಗುತ್ತಿದ್ದು, ಇದುವರೆಗೆ 1994, 2006, 2007, 2018, ಮತ್ತು 2022ರಲ್ಲಿ ಮಾತ್ರ 590 ಅಡಿ ಮಟ್ಟ ತಲುಪಿತ್ತು ಎಂದು ತಿಳಿದು ಬಂದಿದೆ. ಮಾಣಿಯಿಂದ ನೀರು ಹರಿಸಿದರೆ, ವರಾಹಿ ನದಿ ಪಾತ್ರದ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. 

Linganamakki Dam Inflow
Linganamakki Dam Inflow

ಲಿಂಗನಮಕ್ಕಿ ಜಲಾಶಯ: ಎರಡನೇ ಮುನ್ಸೂಚನೆ ಜಾರಿ Shivamogga Dams

ಇತ್ತ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, ಕೆಪಿಸಿ ಎರಡನೇ ಮುನ್ಸೂಚನೆಯನ್ನು ಜಾರಿಗೊಳಿಸಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 1807 ಅಡಿ ತಲುಪಿದೆ. ಜಲಾಶಯಕ್ಕೆ ಪ್ರಸ್ತುತ 52 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಪ್ರತಿದಿನ ಎರಡು ಟಿಎಂಸಿ ನೀರು ಹರಿದುಬರುತ್ತಿದೆ. ಹೀಗಾಗಿ ಜಲಾಶಯದಿಂದ ನೀರನ್ನು ಯಾವುದೇ ಸಂದರ್ಭದಲ್ಲಿ ಹೊರಬಿಡಲಾಗುತ್ತದೆ ಎಂದು ನೋಟಿಸ್ ನೀಡಲಾಗಿದೆ.  

Shivamogga Dams Nearing Full  Mani and Linganamakki dams in Shivamogga are nearing full capacity due to heavy inflows. KPCL has issued alerts for people 

ಮಾಣಿ ಜಲಾಶಯ, ಲಿಂಗನಮಕ್ಕಿ ಜಲಾಶಯ, ಕರ್ನಾಟಕ ವಿದ್ಯುತ್ ನಿಗಮ, ಕೆಪಿಸಿ, ವರಾಹಿ ನದಿ, Mani Dam, Linganamakki Dam, KPCL, Varahi River, #ShivamoggaDams #DamSafety #KarnatakaFloods  

Share This Article