ಖಾಸಗಿ ಫೋಟೋ ವಿಡಿಯೋ ಲೀಕ್ ಬೆದರಿಕೆ, 10 ಲಕ್ಷಕ್ಕೆ ಬೇಡಿಕೆ, ಏನಿದು ಪ್ರಕರಣ

prathapa thirthahalli
Prathapa thirthahalli - content producer

Shivamogga Cyber Blackmail, ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಬರೋಬ್ಬರಿ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ವರದಿಯಾಗಿದೆ.ಈ ಕುರಿತು ಸಂತ್ರಸ್ತ ಮಹಿಳೆಯು ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೃಷಿ ತೋಟಗಾರಿಕಾ ಮೇಳ

ಅಕ್ಟೋಬರ್ 31 ರಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಫೋನ್ ನಂಬರ್‌ಗೆ ಅವರ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸಿ, ತನಗೆ 10 ಲಕ್ಷ ಹಣ ನೀಡದಿದ್ದರೆ, ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅವರ ಗಂಡ ಹಾಗೂ ಸಂಬಂಧಿಕರಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯಿಂದ ಭಯಗೊಂಡ ಮಹಿಳೆ ಅಂದು ಆ ಸಂದೇಶಗಳನ್ನು ಡಿಲಿಟ್​ ಮಾಡಿದ್ದಾರೆ.

- Advertisement -

http://ನವೆಂಬರ್​​ 09 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ https://malenadutoday.com/shivamogga-power-outage/ via @malnadtoday

 ಆದರೂ ಬಿಡದ ಆ ವ್ಯಕ್ತಿ ನವೆಂಬರ್ 03 ರಂದು ಪುನಃ ಮಹಿಳೆಗೆ ಕರೆ ಮಾಡಿ, ಹಣ ವರ್ಗಾಯಿಸಲು ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ಕಳುಹಿಸಿದ್ದು, ಹಣ ಹಾಕದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮತ್ತೆ ಬೆದರಿಕೆ ಹಾಕಿದ್ದಾನೆ. ಇದರಿಂದಭಯಭೀತರಾದ ಮಹಿಳೆ, ಕೊನೆಗೆ ವ್ಯಕ್ತಿಯ ವಿರುದ್ಧ ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

Shivamogga Cyber Blackmail

ಕೃಷಿ ತೋಟಗಾರಿಕಾ ಮೇಳ
Share This Article