MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ತಾಲ್ಲೂಕು ರೇಚಿಕೊಪ್ಪ ಗ್ರಾಮದ ದುರ್ಗಾಪರಮೇಶ್ವರಿ ದೇವಾಲಯದ ಹುಂಡಿಯನ್ನ ಒಡೆದು ಕಳ್ಳತನ ಮಾಡಲಾಗಿದೆ. ಕಳೇದ 22 ರಂದು ನಡೆದ ಘಟನೆ ಸಂಬಂಧ ನಿನ್ನೆ ಕಂಪ್ಲೇಂಟ್ ದಾಖಲಾಗಿದೆ. ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಪ್ರತಿ ವರ್ಷ ಎಳ್ಳಾಮವಾಸೆ ಜಾತ್ರೆ ಸಮಯದಲ್ಲಿ ಹುಂಡಿ ಹಣ ತೆಗೆಯುತ್ತಿದ್ದು ಪ್ರತಿ ವರ್ಷ ಸುಮಾರು ಅಂದಾಜು 1 ಲಕ್ಷ ಹುಂಡಿ ಹಣ ದೊರೆಯುತ್ತಿತ್ತು..ಕಳೆದ ವರ್ಷ ಡಿಸೆಂಬರ್ನಲ್ಲಿ ಹಣ ಎಣಿಕೆ ಮಾಡಲಾಗಿತ್ತು. ಇದರ ನಡುವೆ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಒಡೆದು ಹುಂಡಿ ಒಡೆದು ಹುಂಡಿಯಲ್ಲಿ ಕಳೆದ 02 ತಿಂಗಳಿನಿಂದ ಸಂಗ್ರಹವಾಗಿದ್ದ ಅಂದಾಜು ಸುಮಾರು 20 ಸಾವಿರ ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಪಬ್ಲಿಕ್ ಪ್ಲೇಸ್ ನಲ್ಲಿ ಫೈಟ್ ಮಾಡಿದವರು ಅಂದರ್,
ಶಿವಮೊಗ್ಗದ ಕೋಟೆ ಪೊಲೀಸರು ಕಳೆದ 22 ರಂದು ನಗರದ ಮೌರ್ಯ ಬಾರ್ ಬಳಿಯಲ್ಲಿ ಗುಂಪುಗೂಡಿ ಪರಸ್ಪರ ಹೊಡೆದಾಡಿಕೊಂಡು ಪಬ್ಲಿಕ್ ನ್ಯೂಸೆನ್ಸ್ ಕ್ರಿಯೆಟ್ ಮಾಡುತ್ತಿದ್ದವರನ್ನ ಹಿಡಿದು ಅಂದರ್ ಮಾಡಿದ್ದಾರೆ. ರಾತ್ರಿ 8.00 ಗಂಟೆಗೆ ಮೌರ್ಯ ಬಾ ಅಂಡ್ ರೆಸ್ಟೋರೆಂಟ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ 4-5 ಜನರು ಒಬ್ಬರಿಗೊಬ್ಬರು ಕೈ ಕೈ ಮಿಲಾಸಿಕೊಂಡು ಗಲಾಟೆ ಮಾಡಿಕೊಳ್ಳುತ್ತಿರುವುದನ್ನ ಕಂಡ ಪೊಲೀಸರು ಅಲ್ಲಿಗೆ ತೆರಳಿ ಗಲಾಟೆ ಮಾಡಿಕೊಳ್ಳಬಾರದು ಎಂದು ಮನವರಿಕೆ ಮಾಡಿದ್ಧಾರೆ. ಆದಾಗ್ಯು ಗಲಾಟೆ ಮುಂದುವರಿಸಿದ ಕಾರಣಕ್ಕೆ ಆರೋಪಿಗಳನ್ನ ಬಂಧಿಸಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿದ ಸಂಬಂಧ ಕೇಸ್ ದಾಖಲಿಸಲಾಗಿದೆ.
READ : ಪ್ರಯಾಣಿಕರಲ್ಲಿ ವಿನಂತಿ! ಫೆಬ್ರವರಿ 26 ಮತ್ತು 27 ಕೆಎಸ್ಆರ್ಟಿಸಿ ಬಸ್ ಸಂಚಾರಲ್ಲಿ ವ್ಯತ್ಯಯ! ಕಾರಣ ಇಲ್ಲಿದೆ
ಮನೆಯ ಮುಂದೆ ನಿಲ್ಲಿಸಿದ್ದ ಸ್ಪೆಂಡರ್ ಮಾಯ,
ಇನ್ನೂಗೋಪಾಳಗೌಡ ಬಡಾವಣೆಯಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಮನೆಯ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ನ್ನ ಬೆಳಗಾಗುವಷ್ಟರಲ್ಲಿ ಯಾರೋ ಕದ್ದುಕೊಂಡು ಹೋಗಿರುವ ಬಗ್ಗೆ ಕೇಸ್ ದಾಖಲಾಗಿದೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ವಾಹನದ ಪ್ರತಿಯೊಂದು ವಿವರ ಪಡೆದುಕೊಂಡು ಎಫ್ಐಆರ್ ದಾಖಲಿಸಿದ್ಧಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
