shivamogga crime brother kills brother 28 ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ! ಅಣ್ಣನನ್ನೆ ಕೊಂದನಾ ತಮ್ಮಾ? ತುಂಗಾ ನಗರ ಕೊಲೆ ಕೇಸ್ನ ಸುತ್ತ!
shivamogga crime brother kills brother 28 ಶಿವಮೊಗ್ಗ ನಗರದ ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಆಸ್ತಿ ವಿವಾದಕ್ಕೆ (Property Dispute) ಸಂಬಂಧಿಸಿದಂತೆ ಭೀಕರ ಕೊಲೆಯೊಂದು (Brutal Murder) ನಡೆದಿದೆ. ಮಲಗಿದ್ದ ಅಣ್ಣನ ತಲೆಗೆ ಸೈಜುಗಲ್ಲು ಎತ್ತಿಹಾಕಿ ತಮ್ಮನೇ ಹತ್ಯೆ (Fratricide) ಮಾಡಿರುವ ಘಟನೆ ನಡೆದಿದ್ದು, ಕೊಲೆಯ ಬಳಿಕ ಆರೋಪಿ ತಮ್ಮ ನಾಪತ್ತೆಯಾಗಿದ್ದ. ಈ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತುಂಗಾ ನಗರ ಪೊಲೀಸರು ಕಾರ್ಯಾಚರಣೆ ಹೇಗಿತ್ತು, ನಡೆದ ಘಟನೆಗೆ ಅಸಲಿ ಕಾರಣವೇನು?ನಿನ್ನೆ ದಿನ ಏನೆಲ್ಲಾ ನಡೆಯಿತು? ಅಷ್ಟಕ್ಕೂ ಅಣ್ಣನನ್ನೆ ಕೊಲೆ ಮಾಡುವ ದ್ವೇಷ ಎಂತದ್ದು? ಎಂಬುದನ್ನು ನೋಡೋಣ

ಮನೆ ವಿವಾದವೇ ಕೊಲೆಗೆ ಕಾರಣ?/shivamogga crime brother kills brother 28
ನಿನ್ನೆ ದಿನ ತುಂಗಾನಗರದಲ್ಲಿ ಕೊಲೆಯಾದ ವ್ಯಕ್ತಿಯ ಹೆಸರು ಮಣಿಕಂಠ, ವಯಸ್ಸು 38 ಗಾರೆ ಕೆಲಸ ಮಾಡಿಕೊಂಡಿದ್ದಾತ. ತುಂಗಾ ನಗರದಲ್ಲಿರುವ ತನ್ನ ಮನೆಯಲ್ಲಿಯೇ ಈತ ಹತನಾಗಿದ್ದ, ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ. ಈ ಮನೆ ವಿಚಾರಕ್ಕೆ ಮಣಿಕಂಠ ಮತ್ತು ಆತನ ಸಹೋದರ ಸಂತೋಷ್ ನಡುವೆ ಕಿರಿಕ್ ಇತ್ತು. ಆಗಾಗ ಜಗಳ ಸಹ ಆಗ್ತಿತ್ತು. ಈ ಜಗಳದಲ್ಲಿ ಮೇಲುಗೈ ಸಾದಿಸಿದ್ದ ಮಣಿಕಂಠ, ಮನೆಯ ಸ್ವಾದೀನ ಪಡೆದುಕೊಂಡಿದ್ದ. ಇನ್ನೂ ಈ ಮನೆಯ ಪಕ್ಕದಲ್ಲಿ ಮಣಿಕಂಠನ ಸಹೋದರಿಯ ಮನೆಯಿತ್ತು. ಆಕೆಯೇ ಮಣಿಕಂಠದ ದೇಖಾರೇಖಿ ನೋಡಿಕೊಳ್ತಿದ್ದರು.
ಈ ಮಧ್ಯೆ ಮೊನ್ನೆ ರಾತ್ರಿ ಸಂತೋಷ್ ಮಣಿಕಂಠನ ಮನೆಗೆ ಬಂದಿದ್ದಾನೆ. ಸಹಜವಾಗಿಯೆ ಮತ್ತೆ ಮನೆಯ ವಿಚಾರಕ್ಕೆ ಜಗಳ ಆಗಿದೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜೋರಾಗಿ ಗಲಾಟೆ ನಡೆದಿದ್ದು, ಈ ವೇಳೆ ಸಂತೋಷ್ ಮನೆಯ ಹೊರಗಿನಿಂದ ಒಂದು ದೊಡ್ಡ ಕಲ್ಲನ್ನು ತಂದು ಮಣಿಕಂಠನ ತಲೆಯ ಮೇಲೆ ಎತ್ತಿಹಾಕಿದ್ದಾನೆ. ಪರಿಣಾಮ ಮಣಿಕಂಠ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.ಬಳಿಕ ಸಂತೋಷ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಮರುದಿನ ಅಂದರೆ, ನಿನ್ನೆ ದಿನ ಬೆಳಿಗ್ಗೆ ಸಹೋದರಿಯ ಮನೆಯ ಕಡೆಯವರು ಮಣಿಕಂಠನಿಗೆ ಚಹಾ ಕೊಡಲು ಹೋಗಿದ್ದ ಸಂದರ್ಭದಲ್ಲಿ ಆತ ಕೊಲೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮನೆಯವರು ತುಂಗಾ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡು, ಸ್ಥಳ ಪರಿಶೀಲನೆ ಹಾಗೂ ಸುತ್ತಮುತ್ತಲಿನ ಜನರ ಬಳಿ ವಿಚಾರಿಸಿದರು. ಅಷ್ಟರಲ್ಲಿಯೇ ಅವರಿಗೆ ಇದೊಂದು ಆಸ್ತಿ ಸಂಬಂಧ ಕೊಲೆ ಎಂಬುದು ಗೊತ್ತಾಗಿ, ಸಂತೋಷ್ನನ್ನ ಟ್ರ್ಯಾಪ್ಗೆ ಹಾಕಿದ್ದರು. ಕೆಲವೇ ಗಂಟೆ ಹೊತ್ತಿನಲ್ಲಿ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
‘ಸೈಕೋ ಸೈಜುಗಲ್ಲು ಸೈಮನ್’
ಕಳೆದ ಹತ್ತು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ‘ಸೈಕೋ ಸೈಜುಗಲ್ಲು ಸೈಮನ್’ ಎಂದೇ ಕುಖ್ಯಾತಿ ಪಡೆದ ಸರಣಿ ಕೊಲೆಗಾರನೊಬ್ಬ ರಸ್ತೆಯಲ್ಲಿ ಮಲಗಿದ್ದವರ ಮೇಲೆ ಸೈಜುಗಲ್ಲು ಎತ್ತಿಹಾಕಿ ವಿಕೃತಿ ಮೆರೆಯುತ್ತಿದ್ದ. ನಾಲ್ಕೈದು ಸರಣಿ ಕೊಲೆ ಪ್ರಕರಣಗಳಿಂದ ಶಿವಮೊಗ್ಗದ ಜನತೆ ಬೆಚ್ಚಿಬಿದ್ದಿದ್ದರು. ಈಗ ಅದೇ ರೀತಿಯ ಕ್ರೈಂ ಸೀನ್ ಒಂದು ನಡೆದಿದ್ದು, ಹಿಂದಿನ ಘಟನೆಯನ್ನು ಮತ್ತೆ ನೆನಪಾಗುವಂತೆ ಮಾಡಿದೆ.
Shivamogga crime news , Shivamogga Murder: Brother Kill Over Property Dispute, ಶಿವಮೊಗ್ಗ ಕೊಲೆ, ತುಂಗಾ ನಗರ, brother kills brother,#ShivamoggaCrime #MurderMystery #PropertyDispute