Shivamogga news / ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ನಾಳೆ, ಜೂನ್ 26, 2025 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಮೆಸ್ಕಾಂ (MESCOM) ನಗರ ಉಪ ವಿಭಾಗ-2 ಮತ್ತು ಆಯನೂರು ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ತುರ್ತು ನಿರ್ವಹಣಾ ಕಾರ್ಯಗಳು ಮತ್ತು ಮೊದಲ ತ್ರೈಮಾಸಿಕ ನಿರ್ವಹಣೆ ಕಾರ್ಯಗಳ ಕಾರಣದಿಂದ ಈ ವಿದ್ಯುತ್ ಕಡಿತವನ್ನು ಘೋಷಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

ಶಿವಮೊಗ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯ (Shivamogga City Power Interruption): ನಗರ ಉಪ ವಿಭಾಗ-2, ಘಟಕ-06ರ ವ್ಯಾಪ್ತಿಯಲ್ಲಿ ಜೂನ್ 26 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಇರುವುದಿಲ್ಲ.

ಯಾವೆಲ್ಲಾ ಏರಿಯಾದಲ್ಲಿ ಕರೆಂಟ್ ಇರಲ್ಲ
- ಗೋಪಿಶೆಟ್ಟಿಕೊಪ್ಪ
- ಸಿದ್ದೇಶ್ವರ ಸರ್ಕಲ್
- ಭವಾನಿ ಲೇಔಟ್
- ಆಶ್ರಯ ಬಡಾವಣೆ
- ಚಾಲುಕ್ಯ ನಗರ
- ಕೆಹೆಚ್‌ಬಿ ಕಾಲೋನಿ
- ಹಳೆ ಊರು ಗೋಪಿಶೆಟ್ಟಿಕೊಪ್ಪ
- ಮಂಜಪ್ಪ ಬಸಪ್ಪ ಲೇಔಟ್
- ಜಿಎಸ್ ಕ್ಯಾಸ್ಟಿಂಗ್
- ಸೋಮಣ್ಣ ಫ್ಯಾಕ್ಟರಿ
- ಸಲೀಮ್ ಫ್ಯಾಕ್ಟರಿ
- ಕಾಮತ್ ಲೇಔಟ್
- ಮೇಲಿನ ತುಂಗಾನಗರ ಸುತ್ತಮುತ್ತಲಿನ ಪ್ರದೇಶಗಳು
ಆಯನೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯ (Ayanur Power Disruption): Shivamogga City Power Interruption
ಇನ್ನೂ ತಾಲೂಕಿನ ಆಯನೂರು ಗ್ರಾಮದಲ್ಲಿರುವ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳು ನಡೆಯಲಿರುವ ಕಾರಣ, ಜೂನ್ 26 ರಂದು ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ಈ ವಿತರಣಾ ಕೇಂದ್ರದಿಂದ ವಿದ್ಯುತ್ ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ:
ಎಲ್ಲೆಲ್ಲಿ ಕರೆಂಟ್ ಇರಲ್ಲ
- ಆಯನೂರು
- ಮಂಡಘಟ್ಟ
- ಸಿರಿಗೆರೆ
- ಸೂಡೂರು
- ಕೂಡಿ
- ಮಲೆಶಂಕರ
- ದೊಡ್ಡಮತ್ತಲಿ
- ತಮ್ಮಡಿಹಳ್ಳಿ
- ಮೈಸವಳ್ಳಿ
- ಸೇವಾಲಾಲ್ ನಗರ
- ವೀರಣ್ಣನಬೆನವಳ್ಳಿ
- ಇಟ್ಟಿಗೇಹಳ್ಳಿ ಸುತ್ತಮುತ್ತಲ ಗ್ರಾಮಗಳು.
ಮೆಸ್ಕಾಂ ಈ ಪ್ರದೇಶಗಳ ಸಾರ್ವಜನಿಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದೆ.
Shivamogga Power Cut Tomorrow ,Electricity Outage June 26 , MESCOM Maintenance , Ayanur Power Supply ,Shivamogga City Power Interruption
ಇನ್ನಷ್ಟು ಸುದ್ದಿಗಳಿಗಾಗಿ : malendutoday.com /