shivamogga city bus stop near bus stand ಶಿವಮೊಗ್ಗದಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಂತಿದೆ. ಅಂದುಕೊಂಡಂತೆ ನಡೆದರೇ ಶೀಘ್ರವೇ ಸಿಟಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪರವರು ಗುದ್ದಲಿ ಪೂಜೆ ಮಾಡುವ ಸಾಧ್ಯತೆ ಇದೆ. ಶಿವಮೊಗ್ಗ ನಗರದ ಅಶೋಕ ಸರ್ಕಲ್ ಸಮೀಪದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ಸ್ಟಾಂಡ್ ಬಳಿ ಅಂದರೆ ಸದ್ಯ ಸಿಟಿ ಬಸ್ಗಳು ನಿಲ್ಲುತ್ತಿರುವ ಜಾಗದಲ್ಲಿಯೇ ಸಿಟಿ ಬಸ್ ನಿಲ್ದಾಣ ತಲೆಎತ್ತಲಿದೆ ಎನ್ನಲಾಗುತ್ತಿದೆ. ಈ ಜಾಗದ ವಿವಾದ ಅಂತಿಮಘಟ್ಟಕ್ಕೆ ಬಂದಿದ್ದು, ಪಾಲಿಕೆ ಜಾಗವನ್ನು ತನ್ನ ಸುಪರ್ಧಿಗೆ ತೆಗೆದುಕೊಳ್ಳುತ್ತಿದೆ. ಪಾಲಿಕೆಯ 2 ಎಕರೆ 16 ಗುಂಟೆ ಜಾಗದಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಸಿಟಿ ಬಸ್ ನಿಲ್ದಾಣದ ಯೋಜನೆಗಾಗಿ ನೀಲನಕ್ಷೆ ಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಂದ ಶಿಲಾನ್ಯಾಸ ಸಮಾರಂಭ ನಡೆಯಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿವಾದಿತ ಜಾಗದಲ್ಲಿ ಪಾಲಿಕೆಗೆ ವಿಜಯ? shivamogga city bus stop near bus stand
ಈ ಹಿಂದೆ ಈ ಜಾಗದ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಪಾಲಿಕೆ ಮತ್ತು ಖಾಸಗಿ ವ್ಯಕ್ತಿಗಳ ನಡುವೆ ವಿವಾದ ಇತ್ತು. ಆದರೆ, ಇತ್ತೀಚೆಗೆ ನ್ಯಾಯಾಲಯದ ತೀರ್ಪಿನೊಂದಿಗೆ ಈ ಭೂಮಿ ಪಾಲಿಕೆಗೆ ಸೇರಿದ್ದು ಎಂದು ದೃಢಪಟ್ಟಿದೆ. ನ್ಯಾಯಾಲಯದ ತೀರ್ಪಿನ ನಂತರ ಪಾಲಿಕೆ ಆಡಳಿತವು ಈ ಜಾಗವನ್ನು ತನ್ನ ಸುಪರ್ದಿಗೆ ಪಡೆದುಕೊಂಡು ನಾಮಫಲಕ ಅಳವಡಿಸಿತ್ತು.
ಪ್ರಯಾಣಿಕರಿಗೆ ದೊಡ್ಡ Relief

ಅಶೋಕ ಸರ್ಕಲ್ ಸಮೀಪದಲ್ಲೇ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ಇರುವುದರಿಂದ, ಹೊಸ ಸಿಟಿ ಬಸ್ ನಿಲ್ದಾಣ ನಿರ್ಮಾಣವಾದರೆ ಪ್ರಯಾಣಿಕರಿಗೆ ಗಣನೀಯ ಅನುಕೂಲವಾಗಲಿದೆ. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಕೂಡ ಈ ಯೋಜನೆಗೆ ಮುಂದಾಗಬೇಕು ಎಂದು ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದರು. ಇದರ ಬೆನ್ನಲ್ಲೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ದೂರುದಾರರು ಪ್ರಕರಣ ಇನ್ನೂ ಹೈಕೋರ್ಟ್ನಲ್ಲಿದೆ ಎಂದು ಸುದ್ದಿಗೋಷ್ಟಿ ನಡೆಸಿದ್ದರು.